More

    ಅರಿಷಿಣ ಮತ್ತು ಕಾಳುಮೆಣಸು ಇವೆರಡರ ಮಿಶ್ರಣ ಆರೋಗ್ಯಕ್ಕೆ ಎಷ್ಟು ಉತ್ತಮ ಎಂಬುದು ಊಹೆಗೂ ನಿಲುಕದ್ದು!

    ನಮ್ಮದೇ ಅಡುಗೆ ಮನೆಯಲ್ಲಿರುವ ಕೆಲ ಪದಾರ್ಥಗಳು ಔಷಧೀಯ ಗುಣಗಳಿಂದ ತುಂಬಿರುತ್ತವೆ. ಇಂತಹ ಔಷಧೀಯ ಗುಣವುಳ್ಳ ಪದಾರ್ಥಗಳನ್ನು ಅಡುಗೆಗೆ ಹೆಚ್ಚು ಬಳಸುವುದರಿಂದ ಆರೋಗ್ಯದ ಮೇಲೆ ಆಗುವ ಪರಿಣಾಮ ಅಗಾಧ.

    ಅರಿಷಿಣ ಎಂಬ ಬಂಗಾರದ ಮಸಾಲೆ ಪದಾರ್ಥವನ್ನು ಭಾರತೀಯ ಅಡುಗೆ ಮನೆಯಲ್ಲಿ ಬಳಸದೇ ಇರುವವರಿಲ್ಲ. ಇದರಲ್ಲಿ ಹಲವು ಔಷಧೀಯ ಗುಣಗಳು ಅಡಗಿವೆ. ಆರ್ಯುವೇದ ಪದ್ಧತಿಯೂ ಅರಿಷಿಣ ಬಳಕೆ ಬಗ್ಗೆ ತಿಳಿಸುತ್ತದೆ.

    ಇದರಂತೆ ಕರಿ ಮೆಣಸು ಅಥವಾ ಕಾಳುಮೆಣಸು ಕೂಡ ಅಷ್ಟೇ ಮಹತ್ವ ಹೊಂದಿರುವ ಮಸಾಲೆ ಪದಾರ್ಥ. ಇವೆರಡು ಒಂದೊಂಕ್ಕೊಂದು ಬೆರತರೆ ಅದರ ಶಕ್ತಿ ಅಪಾರ.

    ಹೀಗೆ ಇವರೆಡನ್ನು ಬೆರಸಿ ಸೇವಿಸಿದರೆ ಆರೋಗ್ಯದ ಮೇಲಾಗುವ ಪರಿಣಾಮಗಳನ್ನು ಈಗ ತಿಳಿಯೋಣ.

    1. ಉರಿಯೂತಕ್ಕೆ ಶಕ್ತಿಕರ ಔಷಧ
    ಅರಿಷಿಣ ಮತ್ತು ಕರಿ ಮೆಣಸು ಎರಡೂ ಉರಿಯೂತ ನಿರೋಧಕ ಶಕ್ತಿ ಹೊಂದಿವೆ. ಸಾಮಾನ್ಯವಾಗಿ ಚಳಿಗಾಲದಲ್ಲಿ ಉರಿಯೂತ ಹೆಚ್ಚು ಅನುಭವಕ್ಕೆ ಬರುತ್ತದೆ. ಆದ್ದರಿಂದ ಇವೆರಡರ ಬಳಕೆ ಚಳಿಗಾಲದಲ್ಲಿ ಉತ್ತಮ ಫಲಿತಾಂಶ ನೀಡುತ್ತವೆ. ಇನ್ನು ಒಂದು ಅಧ್ಯಯನದ ಪ್ರಕಾರ ಸಂಧಿವಾತಕ್ಕೂ ಇದು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.

    2. ಜೀರ್ಣಕ್ರಿಯೆ ಹೆಚ್ಚಳ
    ಇವೆರಡು ಜೀರ್ಣ ಶಕ್ತಿಯನ್ನು ಹೆಚ್ಚಿಸುವ ಗುಣಗಳನ್ನು ಹೊಂದಿವೆ. ಜೀರ್ಣ ಶಕ್ತಿ ಕುಂಠಿತಗೊಂಡವರು ಇವುಗಳ ಬಳಕೆಯಿಂದ ಮತ್ತೆ ಜೀರ್ಣ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು.

    ಇವೆರಡರ ಬಳಕೆ ಹೇಗೆ?

    ಇವುಗಳನ್ನು ನೇರವಾಗಿ ಮಿಶ್ರಣ ಮಾಡಿ ಬಳಸಲು ಕಷ್ಟ. ಆದರೆ ತುಸುವಾಗಿ ಸೇವನೆ ಮಾಡಬಹುದು. ಅರಿಷಿಣ ಕಹಿ ಎನಿಸಿದರೆ, ಕರಿ ಮೆಣಸು ಖಾರ.

    ಹಾಗಾಗಿ ನೇರವಾಗಿ ಇವುಗಳ ಬಳಕೆ ಅಷ್ಟು ರುಚಿಕರವಲ್ಲ. ಆದರೆ ನಾವು ತಯಾರಿಸುವ ಆಹಾರಗಳಲ್ಲಿ ಇದರ ಬಳಕೆ ಹೆಚ್ಚು ಮಾಡುವ ಮೂಲಕ ಇವುಗಳನ್ನು ಹೆಚ್ಚು ಹೆಚ್ಚು ಬಳಸುವಂತೆ ಮಾಡಿಕೊಳ್ಳಬಹುದು. ಮೊಟ್ಟೆ ಬಳಸುವವರಾದರೆ ಇದರ ಬಳಕೆ ನಿಮಗೆ ಸುಲಭ ಎನಿಸುತ್ತದೆ. (ಏಜೆನ್ಸೀಸ್​) 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts