Bad Odour: ವಿಪರೀತ ಬೆವರುವುದು ಇಂದು ಅನೇಕರ ಸಮಸ್ಯೆ. ಪ್ರತಿಯೊಬ್ಬರು ಬೆವರುತ್ತಾರೆ. ಆದರೆ, ಎಲ್ಲರೂ ಬೆವರುವ ಮೂಲಕ ದುರ್ವಾಸನೆ ಬೀರುವುದಿಲ್ಲ. ಕೆಲವರಿಗೆ ಕಂಕುಳಿಂದ ಹೊರಹೊಮ್ಮುವ ವಾಸನೆಯಿಂದ ಒಂದು ನಿಮಿಷ ತಲೆತಿರುಗುವಂತೆ ಆಗುತ್ತದೆ. ಇದು ಇತರರಿಗೂ ಎಷ್ಟು ಕಿರಿಕಿರಿ ಉಂಟುಮಾಡುತ್ತದೆ ಎಂಬುದು ಸಹ ಅವರ ಅರಿವಿಗೆ ಬಂದಿರುತ್ತದೆ. ಆದ್ರೆ, ಇದರಿಂದ ಹೇಗೆ ಮುಕ್ತಿ ಪಡೆಯುವುದು ಎಂಬುದು ಮಾತ್ರ ಗೊತ್ತಿರುವುದಿಲ್ಲ. ಅದಕ್ಕಾಗಿ ಸುಗಂಧ ದ್ರವ್ಯಗಳನ್ನು ಬಳಸಿ, ತಾತ್ಕಾಲಿಕ ತಡೆಗೆ ಮುಂದಾಗುತ್ತಾರೆ. ಇದು ಮತ್ತಷ್ಟು ಮಾರಕ!
ಇದನ್ನೂ ಓದಿ: ಈ ನಟರ ಜತೆ ಅಭಿನಯಿಸಲು ಬಹಳ ಭಯವಾಗ್ತಿತ್ತು: ಶಾಕಿಂಗ್ ಹೇಳಿಕೆ ಕೊಟ್ಟ ‘ಆ್ಯಕ್ಷನ್ ಕ್ವೀನ್’
ನಿಂಬೆಹಣ್ಣು
ಕೆಲವರಿಗೆ ಮಾತ್ರವಲ್ಲ ಹಲವರಿಗೆ ಈ ಸಮಸ್ಯೆ ಕಾಡುತ್ತದೆ. ತಮ್ಮ ದಿನಚರಿಯಲ್ಲಿ ಕೆಲಸ ಮಾಡದೆ, ಬೆವರದೆ ಇದ್ದರೂ ಈ ಸಮಸ್ಯೆ ತಪ್ಪುವುದಿಲ್ಲ. ಕಂಕುಳಿಂದ ಹೊರಡುವ ದುರ್ವಾಸನೆ ಆ ವ್ಯಕ್ತಿಗೂ ಬಹಳ ಕಿರಿಕಿರಿ ಉಂಟುಮಾಡುವುದರ ಜತೆಗೆ ತಮ್ಮ ಅಕ್ಕ-ಪಕ್ಕದಲ್ಲಿರುವವರಿಗೂ ಸಹ ಭಾರೀ ಹಿಂಸೆ ಕೊಡುತ್ತದೆ. ಕೆಲವೊಮ್ಮೆ ಇದು ತೀವ್ರ ಮುಜುಗರಕ್ಕೂ ಕಾರಣವಾಗುತ್ತದೆ. ಮಾರುಕಟ್ಟೆಯಲ್ಲಿ ಸಿಗುವ ಸುಗಂಧ ದ್ರವ್ಯ ಬಳಸುವ ಬದಲಿಗೆ ಮನೆಯಲ್ಲೇ ಸಿಗುವ ನಿಂಬೆಹಣ್ಣಿನ ಮೂಲಕ ಕಂಕುಳಿನ ದುರ್ವಾಸನೆಯನ್ನು ಸಂಪೂರ್ಣವಾಗಿ ತೊಲಗಿಸಬಹುದು. ಅದಕ್ಕೆ ಈ ಸರಳ ವಿಧಾನವನ್ನು ಅನುಸರಿಸಿ.
ದುರ್ವಾಸನೆಯ ಭಾಗದಲ್ಲಿ ಉಜ್ಜಿ
ಮನೆಯಲ್ಲೇ ಸಿಗುವ ಈ ನಿಂಬೆಹಣ್ಣನ್ನು ಕತ್ತರಿಸಿ ಎರಡು ಹೋಳುಗಳನ್ನಾಗಿ ಮಾಡಿ. ನಿಮ್ಮ ಕಂಕುಳಿನ ಭಾಗದಲ್ಲಿ ಕೆಲ ನಿಮಿಷ ಮಸಾಜ್ ಮಾಡಿಕೊಳ್ಳಿ. ಇದನ್ನು ಸ್ನಾನ ಮಾಡಿದ ಬಳಿಕ ಮಾಡುವುದು ಉತ್ತಮ. ಜಳಕ ಮಾಡಿಬಂದ ನಂತರ ನಿಂಬೆಹಣ್ಣಿನಿಂದ ದುರ್ವಾಸನೆಯ ಭಾಗದಲ್ಲಿ ಉಜ್ಜಿಕೊಳ್ಳುವುದು ಒಳಿತು. ಲೆಮನ್ ನಾನ್-ಟಾಕ್ಸಿಕ್ ಆದ ಕಾರಣ, ಇದು ದುರ್ವಾಸನೆಯನ್ನು ತಡೆಗಟ್ಟುವಲ್ಲಿ ಸಹಕಾರಿ ಹಾಗೂ ಉತ್ತಮ ಫಲಿತಾಂಶವನ್ನು ಸಹ ಕೊಡುತ್ತದೆ.
ವಿಶೇಷ ಸೂಚನೆ: ಲೇಖನದಲ್ಲಿ ಉಲ್ಲೇಖಿಸಲಾದ ಸಲಹೆಗಳು ಸಾಮಾನ್ಯ ಮಾಹಿತಿ ಉದ್ದೇಶಗಳಿಗಾಗಿ ಮಾತ್ರ. ನೀವು ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಯಾವಾಗಲೂ ನಿಮ್ಮ ವೈದ್ಯರನ್ನು ಸಂಪರ್ಕಿಸಿ.
ಈ ಅನುಭವಗಳು ನಿಮಗಾಗಿದ್ದರೆ ಖಂಡಿತ ನೀವು ಮಿಡೆಲ್ ಕ್ಲಾಸ್ ಕುಟುಂಬದಲ್ಲಿ ಬೆಳೆದವರೇ!