More

  ಸ್ವಾಸ್ಥ್ಯ ಸಮಾಜ ಕಟ್ಟಲು ಸಹಕಾರಿಸಿ

  ಕಾನಹೊಸಹಳ್ಳಿ: ಯುವಕರು ಮಾದಕ ವಸ್ತುಗಳಿಗೆ ದಾಸರಾಗಿ ಬದುಕು ನಾಶ ಮಾಡಿಕೊಳ್ಳದೆ ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ಬಾಳಿ ಎಂದು ಎಎಸ್‌ಐ ನಾಗೇಂದ್ರ ಆಚಾರಿ ಹೇಳಿದರು.

  ಇದನ್ನೂ ಓದಿ: ಜ.7ರಂದು ಮೈಸೂರಿನ ವಾಸವಿ ಮಹಿಳಾ ಸಮಾಜದ ಬೆಳ್ಳಿ ಹಬ್ಬದ ಸಂಭ್ರಮಾಚರಣೆ

  ಸಮೀಪದ ಗುಡೇಕೋಟೆ ಗ್ರಾಮದ ಪೊಲೀಸ್ ಠಾಣೆ ವತಿಯಿಂದ ಮಾದಕ ವಸ್ತುಗಳ ವಿರೋಧಿ ದಿನಾಚರಣೆ ನಿಮಿತ್ತ ಹಮ್ಮಿಕೊಂಡಿದ್ದ ಜಾಗೃತಿ ಜಾಥಾದಲ್ಲಿ ಶುಕ್ರವಾರ ಮಾತನಾಡಿದರು.

  ಗಾಂಜಾ, ಅಫೀಮು, ಡ್ರಗ್ಸ್ ನ ಮಾದಕ ವಸ್ತುಗಳ ಮಾರಟ ಹಾಗೂ ಸಮಾಜಕ್ಕೆ ಮಾರಕವಾಗುವ ಚಟುವಟಿಕೆಗಳು ನಡೆಯುವುದು ತಿಳಿದರೆ ಪೊಲೀಸ್‌ರಗೆ ಮಾಹಿತಿ ನೀಡುವ ಮೂಲಕ ಸ್ವಾಸ್ಥ್ಯ ಸಮಾಜ ಕಟ್ಟಲು ಸಹಕಾರ ನೀಡಬೇಕು ಎಂದರು.

  ಕಾನಹೊಸಹಳ್ಳಿಯಲ್ಲಿ ಜಾಗೃತಿ ಜಾಥಾ ನಡೆಯಿತು.

  ಗ್ರಾಮದ ಬಿಸಿಎಂ ಬಾಲಕರ ವಸತಿ ನಿಲಯದಿಂದ ಪೊಲೀಸ್ ಠಾಣೆ ಮಾರ್ಗವಾಗಿ ಸರಕಾರಿ ಪಪೂ ಕಾಲೇಜಿನವರೆಗೆ ಜಾಗೃತಿ ಜಾಥಾ ನಡೆಯಿತು.
  ಹೆಡ್ ಕಾನ್‌ಸ್ಟೇಬಲ್ ಎಂ.ಸ್ವರೂಪಾನಂದ ಕೊಟ್ಟೂರು, ಪೇದೆಗಳಾದ ಬಸವರಾಜ, ವೀಣಾ, ಚೈತನ್ಯ, ಪೂಜಾರಹಳ್ಳಿ ಗುರುಸ್ವಾಮಿ, ಮಂಜುನಾಥ, ಸಿದ್ದೇಶ್, ಪರಮೇಶ್ ಇದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts