ಆರೋಗ್ಯಕ್ಕಾಗಿ ಮ್ಯಾರಥಾನ್ ಓಟಕ್ಕೆ ಸ್ಟಾರ್ ದಂಪತಿ ಚಾಲನೆ

ರಾಯಚೂರಿನಲ್ಲಿ ನಟ ದಿಗಂತ್, ಐಂದ್ರಿತಾ ರೈ | ಐಎಂಎ ನೇತೃತ್ವದಲ್ಲಿ 10, 5, 2 ಕಿ.ಮೀ. ಓಟದ ಸ್ಪರ್ಧೆ

ರಾಯಚೂರು: ಭಾರತೀಯ ವೈದ್ಯಕೀಯ ಸಂಘ ರಾಯಚೂರು ಸಮಿತಿಯ ಅಮೃತ ಮಹೋತ್ಸವ ನಿಮಿತ್ತ ಭಾನುವಾರ ಆಯೋಜಿಸಿದ್ದ ಆರೋಗ್ಯಕ್ಕಾಗಿ ಮ್ಯಾರಥಾನ್ ಓಟದ ಸ್ಪರ್ಧೆಗೆ ನಟ ದಿಗಂತ್, ನಟಿ ಐಂದ್ರಿತಾ ರೈ ದಂಪತಿ ಚಾಲನೆ ನೀಡಿದರು.

ನಗರದ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ 10, 5, 2 ಕಿ.ಮೀ. ಮ್ಯಾರಥಾನ್ ಓಟಕ್ಕೆ ಹಸಿರು ಬಾವುಟ ತೋರಿಸುವ ಮೂಲಕ ಚಾಲನೆ ನೀಡಿದರು. ನಟ ದಿಗಂತ್ ದಂಪತಿ ಮಾತನಾಡಿ, ಜನರಲ್ಲಿ ಆರೋಗ್ಯ ಕುರಿತು ಜಾಗೃತಿ ಮೂಡಿಸುವ ಅಗತ್ಯವಿದೆ. ಕಲುಷಿತ ವಾತಾವರಣದಿಂದ ಜನರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದು, ಆರೋಗ್ಯದ ಕಾಳಜಿ ಮೂಡಿಸುವ ಉದ್ದೇಶದಿಂದ ಆಯೋಜಿಸಿರುವ ಈ ಓಟ ಉಳಿದವರಿಗೆ ಸ್ಫೂರ್ತಿಯಾಗಲಿ. ಉತ್ತಮ ಆರೋಗ್ಯ, ಸದೃಢ ದೇಹಕ್ಕಾಗಿ ಎಲ್ಲರೂ ಕಾಳಜಿ ವಹಿಸಬೇಕು ಎಂದು ಹೇಳಿದರು.

ಮಹಾತ್ಮಗಾಂಧಿ ಕ್ರೀಡಾಂಗಣದಿಂದ ಆರಂಭವಾದ ಮ್ಯಾರಥಾನ್‌ನ 10 ಕಿ.ಮೀ. ಓಟದಲ್ಲಿ ವಿಜೇತರಾದ ಗೋವಿಂದರಾಜ್, ಹನಮಂತ, ಮಹಾದೇವ, ತಾಯಪ್ಪ, ಪ್ರೇಮರಾಜ್, 5 ಕಿ.ಮೀ. ಓಟದಲ್ಲಿ ವಿಜೇತರಾದ ಶರಣಬಸಪ್ಪ, ಅನಿಲ್‌ಕುಮಾರ್, ಶಿವರಾಜ್, ಮಹಿಳಾ ವಿಭಾಗದ ರೇಣುಕಾ ಭಜಂತ್ರಿ, ನಿರ್ಮಲಾ, ಗೌರಿಶ್ರೀ ಹಾಗೂ 2 ಕಿ.ಮೀ. ವಿಭಾಗದಲ್ಲಿ ಶಿವರಾಜರೆಡ್ಡಿ, ಬಸಲಿಂಗ, ವಾಣಿಶ್ರೀ, ಜ್ಯೋತಿ ಚಂದ್ರಯ್ಯ, ಬಸಮ್ಮಗೆ ಬಹುಮಾನ ನೀಡಲಾಯಿತು.

ಸುರಪುರ ಶಾಸಕ ರಾಜುಗೌಡ, ರಾಯಚೂರು ನಗರ ಶಾಸಕ ಡಾ.ಶಿವರಾಜ್ ಪಾಟೀಲ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎನ್.ಕೆ.ಎಸ್.ನಸೀರ್, ಅಮೃತಮಹೋತ್ಸವ ಸಮಿತಿಯ ಡಾ.ಸುರೇಶ ಸಗರದ್, ಐಎಂಎ ಅಧ್ಯಕ್ಷ ಡಾ.ಮಹಾಲಿಂಗಪ್ಪ, ಡಾ.ಶೈಲೇಸ್ ಅಮರಖೇಡ್, ಡಾ.ಹರ್ಷ ಪಾಟೀಲ್, ಡಾ.ಅನಿರುದ್ಧ ಕುಲಕರ್ಣಿ, ಡಾ.ರವಿರಾಜೇಶ್ವರ, ಡಾ. ಮಹಾಲಿಂಗಪ್ಪ.ಬಿ, ಡಾ. ನಾರಾಯಣ ಸೇರಿ ವೈದ್ಯರು, ಸಾರ್ವಜನಿಕರು, ಯುವಕರು ಭಾಗವಹಿಸಿದ್ದರು.