More

    ಪ್ರತಿದಿನ ಬೆಳಗ್ಗೆ ಬೇಗನೆ ಎದ್ದರೆ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ?

    ಬೆಂಗಳೂರು: ಬಹುತೇಕರು ತಡರಾತ್ರಿಯವರೆಗೂ ಎಚ್ಚರವಿರುವುದರಿಂದ ಬೆಳಗ್ಗೆ ಬೇಗ ಏಳುವುದು ಕಷ್ಟವಾಗುತ್ತದೆ. ಆದರೆ ಹಿಂದೆಯೆಲ್ಲಾ ಜನರು ಆರೋಗ್ಯಕರ ಮತ್ತು ದೀರ್ಘಾವಧಿಯ ಜೀವನ ನಡೆಸಲು ಸಾಧ್ಯವಾಯಿತು. ಏಕೆಂದರೆ ಅವರು ಬೆಳಗ್ಗೆ ಬೇಗನೆ ಎದ್ದು ತಮ್ಮ ದೈನಂದಿನ ದಿನಚರಿ ಪ್ರಾರಂಭಿಸುತ್ತಿದ್ದರು. ಆದರೆ ಇಂದಿನ ಪೀಳಿಗೆಯವರು ತಡರಾತ್ರಿಯವರೆಗೂ ಜಾಗರಣೆ ಮಾಡುವುದರಿಂದ ಬೆಳಗ್ಗೆ ಬೇಗ ಏಳಲು ಸಾಧ್ಯವಾಗುತ್ತಿಲ್ಲ. ಅಂದಹಾಗೆ ಬೆಳಗಿನ ಜಾವ ಎದ್ದರೆ ಏನೆಲ್ಲಾ ಪ್ರಯೋಜನಗಳಿವೆ ನೋಡೋಣ ಬನ್ನಿ…

    ಒತ್ತಡ ಕಡಿಮೆ
    ಮುಂಜಾನೆ ಬೇಗ ಎದ್ದು ವ್ಯಾಯಾಮ, ಯೋಗ, ಧ್ಯಾನದಂತಹ ಯಾವುದೇ ರೀತಿಯ ಧನಾತ್ಮಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದರಿಂದ ಒತ್ತಡ ಕಡಿಮೆಯಾಗಿ ಉಲ್ಲಾಸದಿಂದಿರಬಹುದು. ಬೆಳಗ್ಗೆ ಸೂರ್ಯೋದಯದ ಶಕ್ತಿಯು ದೇಹವನ್ನು ಪ್ರವೇಶಿಸುವುದರಿಂದ ಮನಸ್ಸು ಸಮತೋಲನದಿಂದ ಇದ್ದು, ಒತ್ತಡ ಕಡಿಮೆ ಮಾಡುತ್ತದೆ.

    ಸಮಯ ಸಿಗಲಿದೆ
    ಮುಂಜಾನೆ ಬೇಗ ಏಳುವುದರಿಂದ ಅನೇಕ ಕೆಲಸಗಳಿಗೆ ಸಮಯ ನೀಡಲು ಸಾಧ್ಯವಾಗುತ್ತದೆ. ನೀವು ಆಸಕ್ತಿ ಹೊಂದಿರುವ ಕೆಲವು ಕೆಲಸವನ್ನು ಮಾಡಬಹುದು. ಇದರಿಂದ ನಿಮ್ಮ ಶಕ್ತಿ ಸರಿಯಾದ ದಿಕ್ಕಿನಲ್ಲಿ ಸಾಗುತ್ತದೆ. ಮಾನಸಿಕವಾಗಿ ಆರೋಗ್ಯವಾಗಿರಬಹುದು. ಉದಾಹರಣೆಗೆ ಯೋಗ, ಧ್ಯಾನ, ಕಾದಂಬರಿಗಳನ್ನು ಓದುವುದು, ಆಧ್ಯಾತ್ಮಿಕ ಪುಸ್ತಕಗಳನ್ನು ಓದುವುದು, ತೋಟಗಾರಿಕೆ, ಸ್ವಚ್ಛತೆ ಇತ್ಯಾದಿ.

    ಸಮಯಕ್ಕೆ ಸರಿಯಾಗಿ ಕೆಲಸ
    ಬೆಳಗ್ಗೆ ಬೇಗ ಏಳುವುದರಿಂದ ದಿನದ ಎಲ್ಲಾ ಕೆಲಸಗಳು ಸಮಯಕ್ಕೆ ಸರಿಯಾಗಿ ಆಗುತ್ತವೆ. ಜೀವನವು ನಿಯಮವನ್ನು ಅನುಸರಿಸುತ್ತದೆ. ತಿನ್ನುವುದು, ಕುಡಿಯುವುದು, ಸ್ನಾನ ಮಾಡುವುದು, ಮಲಗುವುದು ಇತ್ಯಾದಿ ಎಲ್ಲಾ ಕೆಲಸಗಳನ್ನು ಸರಿಯಾದ ಸಮಯಕ್ಕೆ ಮಾಡಲಾಗುತ್ತದೆ. ಇತರ ಕೆಲಸಗಳನ್ನು ಮಾಡಲು ಸಹ ನೀವು ಸುಲಭವಾಗಿ ಯೋಜನೆಗಳನ್ನು ಮಾಡಬಹುದು.

    ಹತ್ತು ಗಂಟೆಗಳ ಕಾಲ ಕುಳಿತೇ ಇದ್ದರೆ ಬುದ್ಧಿಮಾಂದ್ಯತೆ ಸಾಧ್ಯತೆ ಹೆಚ್ಚು: ಅಧ್ಯಯನದ ವರದಿ

     

    ರಾಜ್ಯೋತ್ಸವ ರಸಪ್ರಶ್ನೆ - 21

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts