ಸಂತ್ರಸ್ತ ಯುವಕನ ಆರೋಗ್ಯ ವಿಚಾರಣೆ

ಮೈಸೂರು: ನಗರದ ಸೆಂಟ್ ಮೇರಿಸ್ ಆಸ್ಪತ್ರೆಗೆ ದಾಖಲಾಗಿರುವ, ಹಲ್ಲೆ ಮತ್ತು ಬೆತ್ತಲೆ ಮೆರವಣಿಗೆ ಪ್ರಕರಣದ ಸಂತ್ರಸ್ತ ಯುವಕ ಪ್ರತಾಪ್ ಅವರನ್ನು ಸೋಮವಾರ ಆಸ್ಪತ್ರೆಯಲ್ಲಿ ಭೇಟಿ ಮಾಡಿದ ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗದ ಉಪಾಧ್ಯಕ್ಷ ಎಲ್.ಮುರುಗನ್ ಆರೋಗ್ಯ ವಿಚಾರಿಸಿದರು. ನಂತರ ಪ್ರಕರಣ ಸಂಬಂಧ ಅಧಿಕಾರಿಗಳೊಡನೆ ಮಾತುಕತೆ ನಡೆಸಿದರು.

ಪ್ರಕರಣದ ವಿಡಿಯೋ ವೈರಲ್ ಆದ ನಂತರ ತಡವಾಗಿ ಮೊಕದಮ್ಮೆ ದಾಖಲಿಸಿಕೊಂಡ ಪೊಲೀಸರು, ಕರ್ತವ್ಯ ಲೋಪ ಎಸಗಿದ್ದಾರೆ. ಆರೋಪಿ ಅಧಿಕಾರಿಗಳಾದ ಮತ್ತು ಈಗಾಗಲೇ ಸೇವೆಯಿಂದ ಅಮಾನತುಗೊಂಡಿರುವ ಗುಂಡ್ಲುಪೇಟೆ ಪಟ್ಟಣ ಠಾಣೆ ಎಎಸ್‌ಐ ಸಿ.ರಾಜೇಂದ್ರಪ್ರಸಾದ್, ವಾಹನ ಚಾಲಕ ಶ್ರೀನಿವಾಸ್ ಅವರ ವಿರುದ್ಧವೂ ಎಸ್ಸಿ/ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲು ಮಾಡುವಂತೆ ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗ ಶಿಫಾರಸು ಮಾಡುತ್ತದೆ ಎಂದರು.

ಇದಲ್ಲದೆ, ಸಂತ್ರಸ್ತ ಯುವಕನ ಕುಟುಂಬಕ್ಕೆ ಮೊದಲ ಹಂತದಲ್ಲಿ 25 ಸಾವಿರ ರೂ. ಪರಿಹಾರ ನೀಡಲಾಗಿದೆ. ಉಳಿದ 75 ಸಾವಿರ ರೂ.ಗಳನ್ನು ಹಂತ ಹಂತವಾಗಿ ಚಾಮರಾಜನಗರ ಜಿಲ್ಲಾಡಳಿತ ನೀಡಲಿದೆ ಎಂದು ತಿಳಿಸಿದರು.

ಚಾಮರಾಜನಗರ ಹೆಚ್ಚುವರಿ ಎಸ್‌ಪಿ ಅನಿತಾ, ಎಡಿಸಿ ಅನಂದ್, ಸಮಾಜ ಕಲ್ಯಾಣ ಇಲಾಖೆ ಡಿಡಿ ಪ್ರಕಾಶ್ ಇದ್ದರು.

Leave a Reply

Your email address will not be published. Required fields are marked *