More

    ಕರೊನಾ ವಿರುದ್ಧ ಹೋರಾಡುತ್ತಿರುವ ಆರೋಗ್ಯ ಇಲಾಖೆ ಸಿಬ್ಬಂದಿಗೆ ವೇತನವಿಲ್ಲ

    ತುಮಕೂರು: ಕರೊನಾ ವೈರಸ್‌ಗೆ ಹೆದರಿ ಜನರೆಲ್ಲ ಮನೆಯಲ್ಲಿರುವಾಗ ಮಹಾಮಾರಿ ವಿರುದ್ಧ ಹೋರಾಡುತ್ತಿರುವ ಆರೋಗ್ಯ ಇಲಾಖೆ ಸಿಬ್ಬಂದಿಗೆ ವೇತನ ನೀಡಿಲ್ಲ.

    ಹೌದು, ಆರೋಗ್ಯ ಇಲಾಖೆ ಸಿಬ್ಬಂದಿಗೆ 3 ತಿಂಗಳ ವೇತನ ಮುಂಗಡವಾಗಿ ನೀಡಲಾಗುವುದು ಎಂದು ಸರ್ಕಾರಗಳು ಘೋಷಿಸಿರುವುದಷ್ಟೇ. ವಾಸ್ತವವಾಗಿ ಆರೋಗ್ಯ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಹಿರಿಯ ಆರೋಗ್ಯ ಸಹಾಯಕಿಯರು ಹಾಗೂ ಕಿರಿಯ ಸಹಾಯಕಿಯರು ಹಾಗೂ ಶುಶ್ರೂಷಕಿಯರಿಗೆ ಫೆಬ್ರವರಿಯಿಂದ ವೇತನ ಪಾವತಿಸಿಲ್ಲ.

    ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳ ಉದಾಸೀನತೆಯಿಂದ 02 ಮತ್ತು 03 ಹೆಡ್ ಆಫ್ ಅಕೌಂಟ್‌ನಿಂದ ವೇತನ ಪಡೆಯುತ್ತಿರುವ ನೂರಾರು ಸಿಬ್ಬಂದಿ ಈ ಕಠಿಣ ದಿನಗಳಲ್ಲಿಯೂ ಯೋಧರಂತೆ ಕೆಲಸ ಮಾಡುತ್ತಿದ್ದಾರೆ. ಅವರ ಸೇವೆ ಗೌರವಿಸುವ ಸಲುವಾಗಿ ಜನರೆಲ್ಲ್ಲ ಮನೆಯಿಂದ ಹೊರಬಂದು ಭರ್ಜರಿ ಚಪ್ಪಾಳೆ ತಟ್ಟಿ ಪ್ರೋತ್ಸಾಹಿ ಸಿದ್ದಾರೆ. ಆದರೆ ಆದರಿಂದ ಯೋಧರ ಮನೆ ನಡೆಯುವುದು ಅಸಾಧ್ಯವಾಗಿದ್ದು ಕೂಡಲೇ ವೇತನ ಬಿಡುಗಡೆ ಮಾಡಬೇಕಿದೆ.

    ಆರೋಗ್ಯ ಇಲಾಖೆಯ ಕೆಲವು ಸಿಬ್ಬಂದಿಗೆ ವೇತನ 02 ಹಾಗೂ 03 ಮುಖ್ಯ ಖಾತೆಯಿಂದ ವರ್ಗಾವಣೆಯಾಗುತ್ತಿದ್ದು ಕಳೆದ ಮೂರು ತಿಂಗಳಿನಿಂದ ಇದು ಸ್ಥಗಿತವಾಗಿದೆ. ಕಿರಿಯ ಸಿಬ್ಬಂದಿ ಗೋಳು ಹಿರಿಯ ಅಧಿಕಾರಿಗಳಿಗೆ ಅರ್ಥವಾಗದ ಹಿನ್ನೆಲೆಯಲ್ಲಿ ವೇತನ ನೀಡುವುದು ತಡವಾಗಿದೆ. ಸಣ್ಣಪುಟ್ಟ ತಾಂತ್ರಿಕ ಸಮಸ್ಯೆಯನ್ನು ಬಗೆಹರಿಸಬೇಕಾದ ಹಿರಿಯ ಅಧಿಕಾರಿಗಳ ಉದಾಸೀನತೆ ಸಿಬ್ಬಂದಿಗೆ ತಲೆನೋವು ತಂದಿದೆ.

    ಖಾಸಗಿ ಆಸ್ಪತ್ರೆಗಳೂ ಬಂದ್: ಗ್ರಾಮೀಣ ಭಾಗದಲ್ಲಿ ಸಣ್ಣಪುಟ್ಟ ಕ್ಲಿನಿಕ್ ನಡೆಸುತ್ತಿದ್ದ ವೈದ್ಯರೆಲ್ಲ ಬಾಗಿಲು ಮುಚ್ಚಿದ್ದಾರೆ, ಸಣ್ಣಪುಟ್ಟ ಕಾಯಿಲೆಗಳಿಗೂ ಜನರು ಸರ್ಕಾರಿ ಆಸ್ಪತ್ರೆ, ಆರೋಗ್ಯ ಸಹಾಯಕಿಯರನ್ನೇ ಅವಲಂಬಿಸುವಂತಾಗಿದೆ. ಇಷ್ಟು ದಿನ ಸಮಾಜದಲ್ಲಿ ಹಣ, ಕೀರ್ತಿ ಎಲ್ಲವನ್ನೂ ಗಳಿಸಿರುವ ಖಾಸಗಿ ವೈದ್ಯರು ಸಂಕಷ್ಟದ ಸಮಯದಲ್ಲಿ ಕ್ಲಿನಿಕ್ ಮುಚ್ಚಿಕೊಂಡು ಮನೆ ಸೇರಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಕರೊನಾ ಹೊರತಾದ ಚಿಕಿತ್ಸೆಗಾದರೂ ಈ ವೈದ್ಯರನ್ನು ಬಳಸಿಕೊಂಡು ಸರ್ಕಾರಿ ಇಲಾಖೆ ಸಿಬ್ಬಂದಿ ಮೇಲಿನ ಒತ್ತಡ ಕಡಿಮೆ ಮಾಡಲು ಜಿಲ್ಲಾಡಳಿತ ಕ್ರಮಕೈಗೊಳ್ಳಬೇಕಿದೆ. ಜಿಲ್ಲೆಯ ಬಹುತೇಕ ಖಾಸಗಿ ಕ್ಲಿನಿಕ್‌ಗಳು ಬಾಗಿಲು ಮುಚ್ಚಿದ್ದು ಸರ್ಕಾರಿ ಆಸ್ಪತ್ರೆಯಲ್ಲಿ ಜನರು ಚಿಕಿತ್ಸೆಗಾಗಿ ಬರುವುದು ಜಾಸ್ತಿಯಾಗಿದೆ. ಕರೊನಾ ಜಾಗೃತಿ ಅಭಿಯಾನದಲ್ಲಿ ಹೋರಾಡುತ್ತಿರುವ ಸರ್ಕಾರಿ ಆಸ್ಪತ್ರೆ, ವೈದ್ಯರು ಸಿಬ್ಬಂದಿಯಿಂದಲೂ ಕೂಡ ಚಿಕಿತ್ಸೆ ಸಿಗದೆ ಗ್ರಾಮೀಣ ಜನರು ಪರದಾಡುವಂತಾಗಿದೆ.

    ದೇಶ ಸಂಕಷ್ಟದಲ್ಲಿರುವ ಈ ಸಂದರ್ಭದಲ್ಲಿ ನಾವೆಲ್ಲರೂ ಯೋಧರಂತೆಯೇ ಕೆಲಸ ಮಾಡುತ್ತಿದ್ದೇವೆ. ಆದರೆ, 3 ತಿಂಗಳಿನಿಂದ ವೇತನ ಬಂದಿಲ್ಲ. ಚಪ್ಪಾಳೆ ಹೊಡೆದು ಗೌರವಿಸಿದಷ್ಟೇ ತುರ್ತಾಗಿ ವೇತನ ನೀಡಿದ್ದರೆ ಕುಟುಂಬಗಳ ನಿರ್ವಹಣೆಗೆ ಅನುಕೂಲವಾಗುತ್ತಿತ್ತು. ಫೆಬ್ರವರಿಯಿಂದ ನನ್ನಂತೆಯೇ ನೂರಾರು ಸಿಬ್ಬಂದಿಗೆ ವೇತನ ಬಂದಿಲ್ಲ.
    ನೊಂದ ಆರೋಗ್ಯ ಇಲಾಖೆ ಸಿಬ್ಬಂದಿ ತುಮಕೂರು

    ಸ್‌ಟಾವೇರ್ ಸಮಸ್ಯೆಯಿಂದ ಜಿಲ್ಲೆಯಲ್ಲಿ ಕೆಲ ಸಿಬ್ಬಂದಿಗೆ ವೇತನ ಪಾವತಿ ಆಗಿಲ್ಲ. ಈ ಪ್ರಕ್ರಿಯೆ ಸರಿಪಡಿಸುವ ಸಮಯಕ್ಕೆ ಸರಿಯಾಗಿ ಕರೊನಾ ಹಾವಳಿ ಆರಂಭವಾಗಿದ್ದರಿಂದ ವೇತನ ನೀಡುವುದು ತಡವಾಗಿದೆ.
    ಡಾ.ಚಂದ್ರಿಕಾ ಡಿಎಚ್‌ಒ, ತುಮಕೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts