ಉಪ್ಪಿನಬೆಟಗೇರಿ: ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿರುವ ಸಮಸ್ಯೆಗಳ ಬಗ್ಗೆ ರೋಗಿಗಳು ಹಾಗೂ ಸಾರ್ವಜನಿಕರಿಂದ ಸಾಕಷ್ಟು ಆಕ್ರೋಶ ವ್ಯಕ್ತವಾಗಿತ್ತು. ಇಲ್ಲಿನ ಕೊರತೆಗಳ ಬಗ್ಗೆ ಮೇ 6 ರಂದು ವಿಜಯವಾಣಿ ಪತ್ರಿಕೆಯಲ್ಲಿ ‘ಹೊರಗೆ ಥಳಕು, ಒಳಗೆ ಹುಳುಕು’ ಎಂಬ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟಿಸಿತ್ತು.

ವರದಿ ಗಮನಿಸಿದ ಆರೋಗ್ಯ ಇಲಾಖೆಯ ಮೇಲಾಧಿಕಾರಿಗಳು ಬುಧವಾರ ಉಪ್ಪಿನಬೆಟಗೇರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕಾಟಾಚಾರಕ್ಕೆಂದು ಭೇಟಿ ನೀಡಿದ್ದಾರೆ. ಆರೋಗ್ಯ ಕೇಂದ್ರದಲ್ಲಿರುವ ಬಹುತೇಕ ಸಮಸ್ಯೆಗಳನ್ನು ಅಲ್ಲಿರುವ ನಾಲ್ಕಾರು ಸಿಬ್ಬಂದಿಯೊಂದಿಗೆ ಸಭೆ ನಡೆಸಿ ದಾಖಲೆಗಾಗಿ ಆಸ್ಪತ್ರೆಗೆ ಭೇಟಿ ಕೊಟ್ಟಿರುವಂತೆ ಫೋಟೋ ತೆಗೆಸಿಕೊಂಡು ಹೋಗಿದ್ದಾರೆ ಎಂದು ಸ್ಥಳೀಯರು ಅಧಿಕಾರಿಗಳ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ.
ಕುಡಿಯುವ ನೀರು, ಆವರಣ ಸ್ವಚ್ಛತೆ, ರಸ್ತೆ ದುರಸ್ತಿ ಸೇರಿ ಪಂಚಾಯಿತಿ ಮೂಲಕ ಬಹುತೇಕ ಕೆಲಸಗಳನ್ನು ನಿರ್ವಹಿಸಿದ್ದೇವೆ. ಅದನ್ನು ಹೊರತುಪಡಿಸಿ ಆರೋಗ್ಯ ಇಲಾಖೆ ಕೈಗೊಳ್ಳಬೇಕಾದ ಕಾರ್ಯಗಳು ಮರೀಚಿಕೆಯಾಗಿವೆ. ಬುಧವಾರ ಆಸ್ಪತ್ರೆಗೆ ಭೇಟಿ ನೀಡಿದ ಮೇಲಾಧಿಕಾರಿಗಳ ತಂಡ ಸೌಜನ್ಯಕ್ಕೂ ನಮ್ಮನ್ನು ಸಂರ್ಪಸಿಲ್ಲ. ಕೇವಲ ಫೋಟೋ ತೆಗೆಸಿಕೊಂಡು ಹೋಗಿದ್ದಾರೆ ಹೊರತು ಸಮಸ್ಯೆ ಆಲಿಸಲು ಬಂದಿಲ್ಲ. | ಬಸೀರಅಹ್ಮದ ಮಾಳಗಿಮನಿ, ಗ್ರಾಪಂ ಅಧ್ಯಕ್ಷ ಉಪ್ಪಿನಬೆಟಗೇರಿ