ಹೆರಿಗೆ ಕೊಠಡಿಯಲ್ಲಿ ಗಾಯತ್ರಿ ಮಂತ್ರ

ಜೈಪುರ: ರಾಜಸ್ಥಾನದ ಸರ್ಕಾರಿ ಆಸ್ಪತ್ರೆಗಳ ಹೆರಿಗೆ ಕೊಠಡಿಯಲ್ಲಿ ಗಾಯತ್ರಿ ಮಂತ್ರ ಹಾಕಲಾಗುತ್ತಿದೆ. ಗಾಯತ್ರಿ ಮಂತ್ರದಿಂದ ಮಹಿಳೆಗೆ ಸ್ಥೈರ್ಯ ತುಂಬಿದಂತಾಗುತ್ತದೆ. ಹೆಚ್ಚಿನ ಒತ್ತಡ ಬೀಳುವುದಿಲ್ಲ ಮತ್ತು ಹೆರಿಗೆ ನೋವು ಕಡಿಮೆಯಾದಂತೆ ಭಾಸವಾಗುತ್ತದೆ ಎಂದು ವೈದ್ಯಾಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ಈಗಾಗಲೇ ಆಯ್ದ ಜಿಲ್ಲಾ ಆಸ್ಪತ್ರೆಗಳಲ್ಲಿ ಇದನ್ನು ಬಳಸಿಕೊಳ್ಳಲಾಗುತ್ತಿದೆ. ಮುಂದಿನ ದಿನಗಳಲ್ಲಿ ಎಲ್ಲಾ 20 ಆರೋಗ್ಯ ಕೇಂದ್ರಗಳಿಗೂ ಇದನ್ನು ವಿಸ್ತರಿಸಲು ನಿರ್ಧರಿಸಲಾಗಿದೆ. ಆದರೆ ಈ ಕ್ರಮಕ್ಕೆ ಕೆಲ ಮುಸ್ಲಿಂ ಹೋರಾಟಗಾರರು ವಿರೋಧ ವ್ಯಕ್ತಪಡಿಸಿದ್ದು, ಈ ಬಗ್ಗೆ ಆರೋಗ್ಯ ಸಚಿವರಿಗೆ ದೂರು ನೀಡಿದ್ದಾರೆ. ಇಸ್ಲಾಂ ಧರ್ಮದ

ಪ್ರಕಾರ ಮಗುವಿನ ಜನನವಾಗುತ್ತಿದ್ದಂತೆ ಮೊದಲು ಅಜಾನ್ ದನಿಯನ್ನು ಕೇಳಬೇಕು. ಆದರೆ ಆಸ್ಪತ್ರೆಗಳಲ್ಲಿ ಹೆರಿಗೆ ಕೊಠಡಿಯಲ್ಲೇ ಗಾಯತ್ರಿ ಮಂತ್ರ ಹಾಕುವುದರಿಂದ ಧರ್ಮ ಪಾಲನೆಗೆ ಅಡ್ಡಿಯಾಗಿದೆ ಎಂದು ಆರೋಪಿಸಿದ್ದಾರೆ.

Leave a Reply

Your email address will not be published. Required fields are marked *