ಕೇಂದ್ರದಿಂದ ಆರೋಗ್ಯದ ಕಾಳಜಿ

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ

2009-14ನೇ ಸಾಲಿನಲ್ಲಿ ಜಿಡಿಪಿಯಲ್ಲಿ ಶೇ. 1.1ರಷ್ಟು ಅನುದಾನ ಆರೋಗ್ಯಕ್ಕಾಗಿ ಮೀಸಲಿಡಲಾಗಿತ್ತು. ಆದರೆ, ಈಗಿನ ಕೇಂದ್ರ ಸರ್ಕಾರ ಜಿಡಿಪಿಯಲ್ಲಿ ಶೇ. 2ರಷ್ಟು ಅನುದಾನವನ್ನು ಮೀಸಲಿಟ್ಟಿದೆ ಎಂದು ಸಂಸದ ಪ್ರಲ್ಹಾದ ಜೋಶಿ ಬಣ್ಣಿಸಿದರು.

ಇಲ್ಲಿನ ಕಿಮ್್ಸ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಕಲಬುರ್ಗಿಯಿಂದ ಲೋಕಾರ್ಪಣೆಗೊಳಿಸಿದ್ದನ್ನು ಟಿವಿ ಪರದೆ ಮೂಲಕ ವೀಕ್ಷಿಸಿದ ಬಳಿಕ ಅವರು ಮಾತನಾಡಿದರು.

ಕೇಂದ್ರ ಸರ್ಕಾರದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ವಣಕ್ಕೆ 120 ಕೋಟಿ ರೂ. ನೀಡಿದೆ. ರಾಜ್ಯ ಸರ್ಕಾರ 30 ಕೋಟಿ ರೂ.ನಲ್ಲಿ 20 ಕೋಟಿ ರೂ. ಕೊಟ್ಟಿದೆ. ಶೇ. 70ರಷ್ಟು ವೈದ್ಯಕೀಯ ಉಪಕರಣಗಳು ಲಭ್ಯ ಇವೆ. ಸಿಬ್ಬಂದಿ ನೇಮಕಕ್ಕೆ ರಾಜ್ಯ ಸರ್ಕಾರ ಕ್ರಮ ಜರುಗಿಸಬೇಕು ಎಂದರು.

ಶಾಸಕ ಅರವಿಂದ ಬೆಲ್ಲದ, ಎಂಎಲ್​ಸಿಗಳಾದ ಎಸ್.ವಿ. ಸಂಕನೂರ, ಪ್ರದೀಪ ಶೆಟ್ಟರ್, ಮಾಜಿ ಸಂಸದ ಐ.ಜಿ. ಸನದಿ, ಪ್ರಭಾರಿ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ, ಪ್ರಭಾರಿ ವೈದ್ಯಕೀಯ ಅಧೀಕ್ಷಕ ಡಾ. ಅರುಣಕುಮಾರ ಸಿ., ಪ್ರಭಾರಿ ಪ್ರಾಚಾರ್ಯ ಡಾ. ಎಂ.ಸಿ. ಚಂದ್ರು, ಆರ್​ಎಂಒ ಡಾ. ಸಿದ್ದೇಶ್ವರ ಕಟಕೋಳ, ಮುಖ್ಯ ಆಡಳಿತಾಧಿಕಾರ ಬಸವರಾಜ ಸೋಮಣ್ಣವರ, ಕಿಮ್್ಸ ಸಲಹಾ ಸಮಿತಿ ಸದಸ್ಯ ಡಾ. ಜಿ.ಬಿ. ಸತ್ತೂರ, ಡಾ. ಎಸ್.ಎಸ್. ಶಿರೋಳ, ಡಾ. ಅರವಿಂದ, ಡಾ. ಕಬಾಡೆ, ಡಾ. ಅಮೃತ, ಡಾ.ಜಿ.ಸಿ. ಪಾಟೀಲ, ಇತರರು ಉಪಸ್ಥಿತರಿದ್ದರು.

ಕಾಮಗಾರಿ ಸರಿ ಮಾಡಿ: ಯಾರೂ ನೋಡುವುದಿಲ್ಲ ಎಂದು ತಿಳಿಯಬೇಡಿ. ಎಲ್ಲವೂ ಗಮನಕ್ಕೆ ಬರುತ್ತದೆ. ಈಗ ಹಾಕಿರುವ ಟೈಲ್ಸ್ ಸರಿಯಾಗಿಲ್ಲ. ಎರಡನೇ ದರ್ಜೆಯ ಟೈಲ್ಸ್ ಬಳಸಲಾಗಿದೆ. ಟೈಲ್ಸ್ ಹಾಕುವ ಮುನ್ನ ಹಾಕಿದ ಮರಳು ಸಮತಟ್ಟುಗೊಳಿಸಬೇಕೆಂಬುದು ಗೊತ್ತಿಲ್ಲವೇ ಎಂದು ಹರ್ಷ ಕನ್​ಸ್ಟ್ರಕ್ಷನ್ ಇಂಜಿನಿಯರ್​ಗಳನ್ನು ಸಂಸದ ಪ್ರಲ್ಹಾದ ಜೋಶಿ ತರಾಟೆಗೆ ತೆಗೆದುಕೊಂಡರು. ಸರಿಯಾಗಿ ಕಾಮಗಾರಿ ನಡೆಸದೇ ಇದ್ದರೆ ಅನುದಾನ ತಡೆ ಹಿಡಿಯಲಾಗುವುದು ಎಂದು ಎಚ್ಚರಿಕೆ ನೀಡಿದರು.