More

  ಬ್ಯಾಹಟ್ಟಿಯಲ್ಲಿ ಆರೋಗ್ಯ ತಪಾಸಣೆ

  ಹುಬ್ಬಳ್ಳಿ: ಇಲ್ಲಿಯ ಕೆಎಲ್ಇ ಔಷಧ ವಿಜ್ಞಾನ ಮಹಾವಿದ್ಯಾಲಯ ರಾಷ್ಟ್ರೀಯ ಸೇವಾ ಯೋಜನೆ ಘಟಕ ಹಾಗೂ ಕೆಎಲ್ಇ ಜಗದ್ಗುರು ಗಂಗಾಧರ ಮಹಾಸ್ವಾಮೀಜಿ ಮೂರುಸಾವಿರಮಠ ವೈದ್ಯಕಿಯ ಮಹಾವಿದ್ಯಾಲಯ ಮತ್ತು ಹುಬ್ಬಳ್ಳಿ ಕೋ-ಆಪ್ ಆಸ್ಪತ್ರೆ ಸಹಯೋಗದೊಂದಿಗೆ ತಾಲೂಕಿನ ಬ್ಯಾಹಟ್ಟಿ ಪಂಚಾಯತಿ ಆವರಣದಲ್ಲಿ ಶುಕ್ರವಾರ ಆರೋಗ್ಯ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಗಿತ್ತು.

  ಶಿಬಿರದಲ್ಲಿ 150ಕ್ಕೂ ಹೆಚ್ಚು ಸಾರ್ವಜನಿಕರು ಭಾಗಿಯಾಗಿ ಸಾಮಾನ್ಯ ವೈದ್ಯಕಿಯ, ಎಲುಬು ಮತ್ತು ಕೀಲು, ಕಣ್ಣು, ಚರ್ಮರೋಗ, ದಂತ, ಸ್ತ್ರೀರೋಗ ವಿಭಾಗಕ್ಕೆ ಸಂಬಂಧಿಸಿ ತಪಾಸಣೆ ಮಾಡಿಸಿಕೊಂಡರು.

  ಚಿಕ್ಕ ಮಕ್ಕಳನ್ನು ಸಹ ಪರೀಕ್ಷೆ ಮಾಡಿದ ತಜ್ಞ ವೈದ್ಯರು ಅಗತ್ಯ ಇರುವವರಿಗೆ ಉಚಿತ ಔಷಧ ನೀಡಿದರು ಎಂದು ಪ್ರಕಟಣೆ ತಿಳಿಸಿದೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts