ಗಜಾನನ ಯುವಕ ಮಂಡಳಿ ವತಿಯಿಂದ ಉಚಿತ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸೆ ಕಾರ್ಯಕ್ರಮ

ಗದಗ : ಇಲ್ಲಿನ ಕಿಲ್ಲಾ ಚಂದ್ರಸಾಲಿ ಗಜಾನ ಯುವಕ ಮಂಡಳಿ, ಲಾಯನ್ಸ್ ಕ್ಲಬ್, ಇಂಡಿಯನ್ ಮೆಡಿಕಲ್ ಅಸೋಸಿಯೇಶನ್, ಮಹಾವೀರ ಮೆಡಿಕಲ್, ಗೋಕುಲ್ ಫೌಂಡೇಶನ್ ಸಹಯೋಗದಲ್ಲಿ ಹಾಗೂ 31ನೇ ವಾರ್ಡಿನ ನಗರಸಭಾ ಸದಸ್ಯರಾದ ಶೈಲಾ ಬಾಕಳೆಯವರ ಸಹಕಾರದೊಂದಿಗೆ ಸತತ ಆರನೇ ವರ್ಷದ ಉಚಿತ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರ ಹಮ್ಮಿಕೊಳ್ಳಲಾಗಿತ್ತು.
ಲಾಯನ್ಸ್ ಕ್ಲಬ್ ಅಧ್ಯಕ್ಷರಾದ ನಿತೀಶ್ ಶಾಲಿ, ಕಾರ್ಯದರ್ಶಿಗಳಾದ ಆರ್.ಡಿ ಪಾಟೀಲ, ಡಾ.ರೇಷ್ಮಾ ಪಾಟೀಲ, ಡಾ.ಚಂದ್ರಶೇಖರ ಬಳ್ಳಾರಿ, ಡಾ.ಕಾರ್ತಿಕ ಶಿವಪೂರ, ಡಾ.ಬೃಂದಾ ಶಿವಪೂರ, ನೇತ್ರತಜ್ಞರಾದ ಡಾ.ಸುನೀಲ್ ಮೆರವಾಡೆ, ಡಾ.ಸುಪ್ರಿಯಾ ಮೇರವಾಡೆ, ಡಾ.ಅಜಯ್ ಕುಮಾರ್, ಡಾ.ಗುರುಪ್ರಸಾದ, ಡಾ.ರಾಹುಲ್ ಕಲ್ಯಾಣ, ಡಾ.ರವಿಕುಮಾರ ಹಾಗೂ ಜಿಮ್ಸ್ನ ವೈದ್ಯಕೀಯ ಸಿಬ್ಬಂದಿಗಳ ತಂಡ ಪಾಲ್ಗೊಂಡು ವಿವಿಧ ರೋಗಗಳ ಪರೀಕ್ಷೆ ನಡಸಿ ಚಿಕಿತ್ಸೆ ನೀಡಿ ಆರೋಗ್ಯ ಕಾಪಾಡಿಕೊಳ್ಳುವಂತೆ ಸಲಹೆ-ಸೂಚನೆ ನೀಡಿದರು. ನಗರದ ಮಹಾವೀರ್ ಮೆಡಿಕಲ್ ಸ್ಟೋರ್ ವತಿಯಿಂದ ಅವಶ್ಯಕತೆ ಇರುವವರಿಗೆ ಉಚಿತ ಔಷಧಿ ವಿತರಿಸಲಾಯಿತು.
ಲಯನ್ಸ್ ಕ್ಲಬ್ ಸದಸ್ಯರಾದ ದತ್ತುಸಾ ಮೇರವಾಡೆ ಮಾತನಾಡಿ, ಸತತ ಆರು ವರ್ಷಗಳಿಂದ ಈ ಅರ್ಥಪೂರ್ಣ ಕಾರ್ಯಕ್ರಮ ಹಮ್ಮಿಕೊಳ್ಳುತ್ತಾ ಬರಲಾಗಿದ್ದು, ವಿವಿಧ ಸಂಘ-ಸAಸ್ಥೆಗಳ ಹಾಗೂ ಸಾರ್ವಜನಿಕರ ಸಹಕಾರದಿಂದ ಮುಂದಿನ ದಿನಗಳಲ್ಲೂ ಆರೋಗ್ಯ ಶಿಬಿರದಂಥ ಕಾರ್ಯಕ್ರಮ ನೆರವೇರಿಸುವುದಾಗಿ ತಿಳಿಸಿದರು.
ನಗರಸಭೆ ಸದಸ್ಯರಾದ ಶೈಲಾ ಬಾಕಳೆ, ಗೋಕುಲ್ ಫೌಂಡೇಶನ್ ಅಧ್ಯಕ್ಷರಾದ ಸುಧೀರ ಕಾಟಿಗಾರ ಮಾತನಾಡಿದರು. ಲಾಯನ್ಸ್ ಕ್ಲಬ್‌ನ ಲಿಂಗರಾಜ ತೋಟದ, ಡಾ.ಕಂಬಾರ, ಅರುಣ ಮಿಸ್ಕಿನ್, ಸ್ಯಾಮ್ ಮಿಸ್ಕಿನ್, ಮಂಜುನಾಥ ವೀರಲಿಂಗನಮಠ, ಅಶ್ವಿನಿ ಮಂದಾಲ್, ಗಜಾನನ ಸಮಿತಿ ಅಧ್ಯಕ್ಷರಾದ ಶ್ರೀಕಾಂತ ಪವಾರ್, ಪರಶುರಾಮಸಾ ಬದಿ, ಕೃಷ್ಣಾಸಾ ಲದ್ವಾ, ಪರಶುರಾಮ ಮಿಸ್ಕಿನ, ಮನೋಹರ ದಲಬಂಜನ, ಪ್ರಕಾಶ ಕಾಟಿಗಾರ, ರವಿ ಚವ್ಹಾಣ, ವಂಸತ ಬಾಕಳೆ, ರಾಜೇಶ ಖೋಡೆ, ರಾಹುಲ್ ಚೌಹಾಣ ಮುಂತಾದವರಿದ್ದರು. ಪ್ರವೀಣ ವಾರಕರ ನಿರೂಪಿಸಿದರು.

Share This Article

ದೀಪಾವಳಿಗೆ ಮನೆ ಸ್ವಚ್ಛ ಮಾಡ್ತಾ ಇದ್ದೀರಾ? ಮನೆಯಲ್ಲಿ cockroach ಇದ್ರೆ ಹೀಗೆ ಮಾಡಿ…

ಬೆಂಗಳೂರು: ಅನೇಕ ಜನರು ತಮ್ಮ ಮನೆಯಲ್ಲಿ ಜಿರಳೆಗಳ ( cockroach )  ಸಮಸ್ಯೆಯನ್ನು ಎದುರಿಸುತ್ತಾರೆ. ಅವುಗಳನ್ನು…

Crab Sukka : ಭಾನುವಾರದ ಬಾಡೂಟಕ್ಕೆ ಮಾಡಿ ರುಚಿಯಾದ ಏಡಿ ಸುಕ್ಕ..

ಬೆಂಗಳೂರು: ವಾರದ ಕೊನೆಯಲ್ಲಿ ಮಧ್ಯಾಹ್ನದ ಸಮಯಕ್ಕೆ ರುಚಿಯಾದ ಅಡುಗೆ ಏನಾದರು ಮಾಡುವ ಪ್ಲಾನ್ (Plan)​ ಹಾಕಿಕೊಂಡಿದ್ದೀರಾ?ಆದಿತ್ಯವಾರದಂದು…

ಹಾವು ಕಚ್ಚಿದಾಗ ಮಾಡುವ ಈ ಒಂದು ತಪ್ಪಿನಿಂದ ಪ್ರಾಣ ಹೋಗುತ್ತೆ ಎಚ್ಚರ! ಈ ರೀತಿ ಮಾಡೋದನ್ನು ತಪ್ಪಿಸಿ | Snakes

ಕೊಲ್ಲಂ: ಹಾವುಗಳು ( Snakes ) ಕಚ್ಚಿದ ಸಂದರ್ಭದಲ್ಲಿ ಯಾವ ಹಾವು ಕಚ್ಚಿತ್ತು ಎಂಬುದನ್ನು ತಿಳಿದುಕೊಳ್ಳಲು…