ಜೇನುತುಪ್ಪ ಜತೆ ಹುರಿದ ಶುಂಠಿ ತಿಂದರೆ ಗಂಟಲು ನೋವು ಮಾಯಾ! ಹೀಗಿವೆ ಪ್ರಯೋಜನಗಳು

blank

ಬೆಂಗಳೂರು: ಜೇನುತುಪ್ಪ ಮತ್ತು ಶುಂಠಿ ಆರೋಗ್ಯಕ್ಕೆ ತುಂಬಾ ಪ್ರಯೋಜನ ಎಂಬ ವಿಷಯ ಬಹುತೇಕರಿಗೆ ತಿಳಿದಿದೆ. ಈ ಎರಡರಲ್ಲಿ ಜೀವಸತ್ವ ಮತ್ತು ಖನಿಜಗಳಿಂದ ತುಂಬಿದ ಶಕ್ತಿಯುತ ಅಂಶವಿದೆ. ಮನುಷ್ಯನ ದೇಹಕ್ಕೆ ಬೇಕಾದಂತಹ ಹಲವು ವಿಟಮಿನ್​ಗಳು ಸಹ ಈ ಎರಡು ಪದಾರ್ಥಗಳಲ್ಲಿ ಅಡಗಿವೆ. ಅಲ್ಲದೆ, ಶುಂಠಿ ಮತ್ತು ಜೇನುತುಪ್ಪದಲ್ಲಿ ರೋಗ ನಿರೋಧಕ ಶಕ್ತಿಯಿದ್ದು, ಹುರಿದ ಶುಂಠಿ ಜತೆ ಜೇನುತುಪ್ಪವನ್ನು ಬೇರೆಸಿ ತಿಂದರೆ ಏನೆಲ್ಲಾ ಪ್ರಯೋಜಗಳು ದೊರೆಯಲಿವೆ ಎಂಬುದನ್ನು ಇಲ್ಲಿ ತಿಳಿಯೋಣ.

ಇದನ್ನೂ ಓದಿ: ಸಾಮಾನ್ಯವಾಗಿ ಮಾಡುವ ಈ ತಪ್ಪುಗಳಿಂದಲೇ ಲೈಂಗಿಕ ಜೀವನದಲ್ಲಿ ಸಾಕಷ್ಟು ಸಮಸ್ಯೆ ಎದುರಿಸಬೇಕಾಗುತ್ತೆ ಎಚ್ಚರ! Relationship Tips

ಹುರಿದ ಶುಂಠಿ ಜತೆ ಜೇನುತುಪ್ಪ ಸೇವನೆ ಮಳೆಗಾಲ, ಚಳಿಗಾಲದ ಸಂದರ್ಭದಲ್ಲಿ ಸಾಮಾನ್ಯವಾಗಿ ಕಾಡುವ ಕೆಮ್ಮು, ಕಫ, ಶೀತ, ಜ್ವರ ಸೇರಿದಂತೆ ಗಂಟಲಿಗೆ ಸಂಬಂಧಿಸಿದ ನೋವುಗಳನ್ನು ಶೀಘ್ರವೇ ಶಮನವಾಗಿಸುತ್ತದೆ. ಇದರೊಟ್ಟಿಗೆ ಆನೇಕ ಆರೋಗ್ಯ ಲಾಭಗಳನ್ನು ಕೂಡ ಪಡೆಯಬಹುದು. ಹೇಗೆ? ಇಲ್ಲಿದೆ ನೋಡಿ ಮಾಹಿತಿ.

ಮಿಶ್ರಣ ಮಾಡಿ ತಿನ್ನುವುದು

ಹಸಿ ಶುಂಠಿಯನ್ನು ಹುರಿದುಕೊಳ್ಳಿ, ಸಲ್ಪ ಹೊತ್ತು ತಣ್ಣಗಾಗಲು ಬಿಡಿ, ನಂತರ ಮೇಲಿನ ಸಿಪ್ಪೆಯನ್ನು ತೆಗೆಯಿರಿ. ಬಳಿಕ ಸಣ್ಣಗೆ ಕಟ್ ಮಾಡಿ, ಇದನ್ನು ರುಬ್ಬಿಕೊಂಡು ರಸವನ್ನು ಹೊರ ತೆಗೆಯಬೇಕು. ರಸದ ಜತೆ ಜೇನುತುಪ್ಪ ಮಿಶ್ರಣ ಸೇವಿಸಬೇಕು. ಇದರಿಂದ ಕಾಯಿಲೆಗಳು ಗುಣಮುಖವಾಗಲಿದೆ. ಇತರ ರೋಗಗಳಿಗೂ ಈ ಮಿಶ್ರಣ ರಾಮಬಾಣ.

ಮಧುಮೇಹ ನಿಯಂತ್ರಣ

ಹುರಿದ ಶುಂಠಿ ಮತ್ತು ಜೇನುತುಪ್ಪ ಮಿಶ್ರಣವನ್ನು ಸೇವಿಸಿದರೆ ಮಧುಮೇಹ ನಿಯಂತ್ರಣಕ್ಕೆ ಬರುತ್ತದೆ. ಮಧುಮೇಹಿ ಖಾಯಿಲೆ ಇರುವವರು ಊಟದಲ್ಲಿ ಕೂಡ ಹುರಿದ ಶುಂಠಿ ಸೇವಿಸಬಹುದು.

ಕೆಮ್ಮು-ಕಫಕ್ಕೆ ರಾಮಬಾಣ

ಶುಂಠಿ ಮತ್ತು ಜೇನುತುಪ್ಪ ತಿನ್ನುವುದರಿಂದ ಕೆಮ್ಮು-ಕಫ ಶೀಘ್ರವೇ ಗುಣಮುಖವಾಗಲಿದೆ. ಅಲ್ಲದೆ ಗಂಟಲಿನ ಬೇನೆ ಅಥವಾ ಗಂಟಲಿನ ಊರಿಯುತ ಸಹ ಕಡಿಮೆಯಾಗಲಿದೆ.

ರೋಗ ನಿರೋಧಕ ಶಕ್ತಿ ಹೆಚ್ಚಳ

ಹುರಿದ ಶುಂಠಿ ಮತ್ತು ಜೇನುತುಪ್ಪವು ಮಳೆಗಾಲದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದು ಅನೇಕ ರೋಗಗಳು ಮತ್ತು ಸೋಂಕುಗಳಿಂದ ನಿಮ್ಮನ್ನು ದೂರ ಮಾಡಿ ಆರೋಗ್ಯವನ್ನು ಕಾಪಾಡುತ್ತದೆ. ಎರಡರಿಂದ ಮೂರು ಹನಿ ಶುಂಠಿ ರಸವನ್ನು ಒಂದು ಚಮಚ ಜೇನು ತುಪ್ಪದೊಂದಿಗೆ ಬೆರೆಸಿ ಮಕ್ಕಳಿಗೆ ನೀಡಬಹುದು.

ಮೂಳೆಗಳಿಗೆ ಪ್ರಯೋಜನಕಾರಿ

ಹುರಿದ ಶುಂಠಿ ಕೀಲು ಮತ್ತು ಮೂಳೆ ನೋವಿನಿಂದ ಬಳಲುತ್ತಿರುವವರಿಗೆ ಪರಿಹಾರ ನೀಡುತ್ತದೆ. ಉರಿಯೂತವನ್ನು ನಿಯಂತ್ರಿಸುವಲ್ಲಿ ಇದು ಸಹಾಯ ಮಾಡುತ್ತದೆ,(ಏಜೆನ್ಸೀಸ್).

ವಿಶೇಷ ಸೂಚನೆ: ಲೇಖನದಲ್ಲಿ ಉಲ್ಲೇಖಿಸಲಾದ ಸಲಹೆಗಳು ಸಾಮಾನ್ಯ ಮಾಹಿತಿ ಉದ್ದೇಶಗಳಿಗಾಗಿ ಮಾತ್ರ. ನೀವು ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಯಾವಾಗಲೂ ನಿಮ್ಮ ವೈದ್ಯರನ್ನು ಸಂಪರ್ಕಿಸಿ.

ಬೆಳಗ್ಗೆ ಹೊತ್ತು ವಾಲ್​ನಟ್ಸ್​​ ಸೇವನೆ ಎಷ್ಟು ಉತ್ತಮ? ಇಲ್ಲಿದೆ ಉಪಯುಕ್ತ ಮಾಹಿತಿ | Walnuts

Share This Article

ಊಟದ ನಂತರ ಸಿಹಿ ತಿನ್ನುವುದು ಒಳ್ಳೆಯದೇ? ವೈದ್ಯರ ಸಲಹೆ..!  sweet

sweet:  ಸಿಹಿ ತಿಂಡಿ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ... ನಾಲಿಗೆ ಚಪ್ಪರಿಸಿ ಸಿಹಿ ತಿಂಡಿ…

astrology : ಈ ದಿನ ಉಗುರು, ಕೂದಲನ್ನು ಕತ್ತರಿಸಿದ್ರೆ ಕಾದಿದೆ ಸಂಕಷ್ಟ! ಈ ಕೆಲಸಕ್ಕೂ ಇದೆ ಒಳ್ಳೆಯ ದಿನ

astrology: ವಾರದ ಕೆಲವು ದಿನಗಳಲ್ಲಿ ಉಗುರುಗಳನ್ನು ಕತ್ತರಿಸುವುದು ಮತ್ತು ಕೂದಲನ್ನು ಕತ್ತರಿಸುವು ಒಳ್ಳೆಯದಲ್ಲ ಎಂದು ಹೇಳಲಾಗುತ್ತದೆ. …

27 ವರ್ಷದ ನಂತ್ರ ಪೂರ್ವ ಭಾದ್ರಪದ ನಕ್ಷತ್ರದಲ್ಲಿ ಶನಿ ಸಂಚಾರ: ಈ 3 ರಾಶಿಯವರಿಗೆ ಅದೃಷ್ಟವೋ ಅದೃಷ್ಟ | Zodiac Signs

Zodiac Signs : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಅನೇಕ ಗ್ರಹಗಳು ತಮ್ಮ ರಾಶಿಚಕ್ರ ಚಿಹ್ನೆಗಳನ್ನು ಆಗಾಗ…