ನೆನಪಿನ ಶಕ್ತಿ ವೃದ್ಧಿಗೆ ಪುದಿನ ಎಣ್ಣೆ

ಪೆಪ್ಪರ್​ವಿುಂಟ್ ಆಯಿಲ್ ಎಂದೇ ಮಾರುಕಟ್ಟೆಯಲ್ಲಿ ಲಭ್ಯವಾಗುವ ಪುದಿನ ಎಣ್ಣೆಯು ಅನೇಕ ಸಮಸ್ಯೆಗಳನ್ನು ನೇರವಾಗಿ ಕಡಿಮೆ ಮಾಡಲು ಸಹಾಯ ಮಾಡಬಲ್ಲದು. ಇದನ್ನು ಹೊಟ್ಟೆಯ ಮೇಲೆ ಹಚ್ಚಿ ವೃತ್ತಾಕಾರವಾಗಿ ನಿಧಾನವಾಗಿ ಸ್ವಲ್ಪ ಮಸಾಜ್ ಮಾಡಿಕೊಳ್ಳುವುದರಿಂದ ಅಜೀರ್ಣ ಕಡಿಮೆಯಾಗಲು ಸಹಾಯವಾಗುತ್ತದೆ. ಜೋರಾಗಿ ಮಸಾಜ್ ಮಾಡಿಕೊಳ್ಳಬಾರದು. ಜೋರಾಗಿ ಮಸಾಜ್ ಮಾಡಿಕೊಂಡಲ್ಲಿ ಹೊಟ್ಟೆನೋವು ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ.

ನಾಲ್ಕರಿಂದ ಐದು ಹನಿ ಪುದಿನ ಎಣ್ಣೆಯನ್ನು ಹ್ಯುಮಿಡಿ ಫೈರ್​ಗೆ (ಆದ್ರಗೊಳಿಸುವ ಸಾಧಕ. ಹಬೆಯನ್ನು ತೆಗೆದುಕೊಳ್ಳಲು ಬಳಸುವಂತಹ ಸಾಮಾನ್ಯ ಸಾಧನ) ಹಾಕಿ ಅದರಿಂದ ಬರುವಂತಹ ಹಬೆಯನ್ನು ಒಳಕ್ಕೆ ಎಳೆದುಕೊಳ್ಳುವುದರಿಂದ ನೆಗಡಿ ಹಾಗೂ ಕಟ್ಟಿದ ಮೂಗಿನ ಸಮಸ್ಯೆ ಕಡಿಮೆಯಾಗುತ್ತದೆ. ಮಿದುಳಿನ ಕಾರ್ಯಕ್ಷಮತೆ ಹೆಚ್ಚುತ್ತದೆ. ನೆನಪಿನ ಶಕ್ತಿ ಹೆಚ್ಚಳಕ್ಕೆ ಅನುಕೂಲವಾಗುತ್ತದೆ.

ಪುದಿನ ಎಣ್ಣೆಗೆ ಸಾಸಿವೆ ಎಣ್ಣೆ ಅಥವಾ ತೆಂಗಿನ ಎಣ್ಣೆಯನ್ನು ಸೇರಿಸಿ ಹಣೆಗೆ ಹಚ್ಚಿಕೊಳ್ಳುವುದರಿಂದ ಒತ್ತಡದಿಂದ ಬಂದ ತಲೆನೋವು ನಿವಾರಣೆಯಾಗುತ್ತದೆ. ಕೆಲವು ಹನಿಗಳನ್ನು ಎಪ್ಸಮ್ ಸಾಲ್ಟ್​ನೊಂದಿಗೆ ಸೇರಿಸಿ ಬಿಸಿನೀರಿಗೆ ಹಾಕಿ ಆ ಬಿಸಿನೀರಿನ ಟಬ್​ನಲ್ಲಿ ಕಾಲನ್ನು ಅದ್ದಿ ಇರಿಸಿಕೊಳ್ಳುವುದರಿಂದ ಇಡೀ ದೇಹ ಹಗುರವಾಗುತ್ತದೆ. ವಿಶ್ರಾಂತಿ ಸ್ಥಿತಿಯನ್ನು ಪಡೆಯಲು ಸಾಧ್ಯವಾಗುತ್ತದೆ. ಹಾಗೆಯೇ ಸಾಸಿವೆ ಎಣ್ಣೆಯ ಜೊತೆ

ಪುದಿನ ಎಣ್ಣೆಯನ್ನು ಮಿಶ್ರಣ ಮಾಡಿ ಉರಿಯೂತವಿರುವ ಭಾಗಕ್ಕೆ ಹಚ್ಚಿ ಸ್ವಲ್ಪ ಹೊತ್ತು ಬಿಟ್ಟು ಬಿಸಿನೀರು ಶಾಖ ಕೊಡುವುದರಿಂದ ನೋವು, ಬಾವು ಇಳಿಯಲು ಸಹಾಯವಾಗುತ್ತದೆ.

ಪುದಿನ ಎಣ್ಣೆಯನ್ನು ಎಕ್ಸಾ್ಟ್ರ ವರ್ಜಿನ್ ಆಲಿವ್ ಆಯಿಲ್, ಹಾಗೂ ತೆಂಗಿನ ಎಣ್ಣೆಯ ಜೊತೆ ಸೇರಿಸಿ ಕೂದಲಿಗೆ ಮಸಾಜ್ ಮಾಡಿ 45 ನಿಮಿಷ ಬಿಟ್ಟು ನಂತರ ಸ್ನಾನ ಮಾಡುವುದರಿಂದ ಕೂದಲಿನ ಸಮಸ್ಯೆಗಳು ಬಗೆಹರಿಯುತ್ತವೆ.

Leave a Reply

Your email address will not be published. Required fields are marked *