22.8 C
Bengaluru
Saturday, January 18, 2020

ಪಾಕದ ಅಂತ್ಯವೇ ವಿಪಾಕ!: ಧನ್ವಂತರಿ ಅಂಕಣದಲ್ಲಿ ವಿಪಾಕದ ವಿವರಣೆ ಕೊಟ್ಟಿದ್ದಾರೆ ಡಾ.ಗಿರಿಧರ ಕಜೆ

Latest News

ಬೈಕ್​ ಅಪಘಾತದಲ್ಲಿ ಮೃತ ಪಟ್ಟ ಮಗನ ಅಂಗಾಂಗವನ್ನು ಹಾಸನದ ಹಿಮ್ಸ್​ಗೆ ದಾನ ಮಾಡಿದ ಪಾಲಕರು

ಹಾಸನ: ಅಪಘಾತದಲ್ಲಿ ಮೃತಪಟ್ಟ ಮಗನ ಅಂಗಾಂಗ ದಾನ ಮಾಡಿ ಪಾಲಕರು ಮಾನವೀಯತೆ ಮೆರೆದಿದ್ದಾರೆ. ಹಾಸನ ತಾಲೂಕಿನ ಮರ್ಕೂಲಿ ಗ್ರಾಮದ ರಂಗಸ್ವಾಮಿ ಮತ್ತು ಶಿವಮ್ಮ ದಂಪತಿಯ ಪುತ್ರ ಸಚಿನ್...

PHOTOS| ಅದಮಾರು ಪರ್ಯಾಯ ವೈಭವದ ಶೋಭಯಾತ್ರೆ | ಬೀದಿ, ಬೀದಿಗಳಲ್ಲಿ ಪರ್ಯಾಯ ಸಂಭ್ರಮ

ಉಡುಪಿ: ಕೃಷ್ಣನಗರಿ ಉಡುಪಿ ನಾಡಹಬ್ಬ ಪರ್ಯಾಯ ಅದಮಾರು ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ ಅವರ ಪರ್ಯಾಯೋತ್ಸವದಲ್ಲಿ ಸಂಭ್ರಮದಿಂದ ಮಿಂದೆದ್ದಿತು. ಸಹಸ್ರಾರು ಮಂದಿ ಭಕ್ತರು...

‘ವಿಜಯವಾಣಿ’ ಫೋನ್ ಇನ್ ಕಾರ್ಯಕ್ರಮದಲ್ಲಿ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್: ಟ್ರಾಫಿಕ್ ಜಾಮ್​ ಸಂಚಾರ ನೀತಿಯ ಸಮಸ್ಯೆ!

ಬಡ್ಡಿ ಆಸೆಗೆ ವಂಚಕ ಕಂಪನಿಗಳಲ್ಲಿ ಹಣ ಹೂಡಿಕೆ ಮಾಡಿ ಮೋಸ ಹೋಗದಂತೆ ಜನರಿಗೆ ಎಚ್ಚರಿಕೆ, ಹೆಣ್ಣಿನ ರಕ್ಷಣೆಗೆ ‘ವೀರವನಿತೆ’ ಪಡೆ, ಸರಗಳ್ಳತನ, ಮನೆಗಳ್ಳತನ, ದರೋಡೆಯಂಥ ಅಪರಾಧ ಕೃತ್ಯ...

ಡ್ರಗ್ಸ್ ನಿಯಂತ್ರಿಸದಿದ್ದರೆ ಶಿಕ್ಷಣ ಸಂಸ್ಥೆ ವಿರುದ್ಧ ಕ್ರಮ; ‘ವಿಜಯವಾಣಿ ಫೋನ್ ಇನ್ ಕಾರ್ಯಕ್ರಮದಲ್ಲಿ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್

ಬಡ್ಡಿ ಆಸೆಗೆ ವಂಚಕ ಕಂಪನಿಗಳಲ್ಲಿ ಹಣ ಹೂಡಿಕೆ ಮಾಡಿ ಮೋಸ ಹೋಗದಂತೆ ಜನರಿಗೆ ಎಚ್ಚರಿಕೆ, ಹೆಣ್ಣಿನ ರಕ್ಷಣೆಗೆ ‘ವೀರವನಿತೆ’ ಪಡೆ, ಸರಗಳ್ಳತನ, ಮನೆಗಳ್ಳತನ, ದರೋಡೆಯಂಥ ಅಪರಾಧ ಕೃತ್ಯ...

PHOTOS| ಕೃಷ್ಣ ಮಠದಲ್ಲಿ ಅದಮಾರು ಪರ್ಯಾಯ ಪರ್ವ ಪ್ರಾರಂಭ ಈಶಪ್ರಿಯ ತೀರ್ಥ ಸ್ವಾಮೀಜಿ ಸರ್ವಜ್ಞ ಪೀಠಾರೋಹಣ

ಉಡುಪಿ: ಉಡುಪಿ ಕೃಷ್ಣ ಮಠದಲ್ಲಿ ಅದಮಾರು ಮಠದ ಪರ್ಯಾಯ ಪರ್ವ ಶನಿವಾರ ಪ್ರಾತಃ 5.57ರ ಶುಭ ಮುಹೂರ್ತದಲ್ಲಿ ಸರ್ವಜ್ಞ ಪೀಠಾರೋಹಣದ ಮೂಲಕ ಪ್ರಾರಂಭವಾಗಿದೆ.ಜೋಡುಕಟ್ಟೆಯಿಂದ...

ವ್ಯಕ್ತಿಯು ಸೇವಿಸುವ ಆಹಾರವು ಅದರ ರುಚಿಯ ಆಧಾರದಲ್ಲಿ, ಬಳಿಕ ಗುಣಗಳಿಗೆ ಅನುಸಾರವಾಗಿ, ತದನಂತರ ವೀರ್ಯವನ್ನು ಹೊಂದಿಕೊಂಡು ಯಾವ ರೀತಿ ದೇಹದಲ್ಲಿ ಕೆಲಸ ಮಾಡುತ್ತದೆ ಎಂಬ ಸ್ಥೂಲ ಪರಿಚಯ ನಮಗಿದೆ. ಇದೇ ಸಾಲಿನಲ್ಲಿ ನಿಲ್ಲುವ ನಾಲ್ಕನೆಯ ವಿಚಾರವೇ ವಿಪಾಕ. ನಾವು ಆಹಾರವನ್ನು ಬಾಯಿಯೊಳಗೆ ಇಟ್ಟಾಕ್ಷಣ ನಮಗಾಗುವ ರುಚಿಯ ಅನುಭವವೇ ರಸ.

ಅಂದರೆ ಜೀರ್ಣಪ್ರಕ್ರಿಯೆಯ ಪ್ರಾರಂಭದಲ್ಲಿ ಗೋಚರವಾಗುವ ಜ್ಞಾನವಿದು. ಜೀರ್ಣಪ್ರಕ್ರಿಯೆಯ ಅಂತ್ಯದಲ್ಲಿ ಉಂಟಾಗುವ, ಆಹಾರದ ರೂಪಾಂತರಗೊಂಡ ರುಚಿಯೇ ವಿಪಾಕ. ಜೀರ್ಣವಾದ ಬಳಿಕವೂ ಆಹಾರಕ್ಕೊಂದು ರುಚಿಯು ಇರಲೇಬೇಕಲ್ಲ. ಅದನ್ನೇ ಆಯುರ್ವೆದ ವಿಪಾಕ ಎಂದು ಕರೆದದ್ದು. ಪಾಕದ ಕೊನೆಯಲ್ಲಿ ಉತ್ಪತ್ತಿಯಾಗುವ ರಸವಿಶೇಷವೇ ವಿಪಾಕ. ವಿಪಾಕಗಳ ವಿಚಾರದಲ್ಲಿ ವೈಜ್ಞಾನಿಕ ವಿಮರ್ಶೆ, ಪರಾಮರ್ಶೆಗಳು ನಡೆದು ವಿಪಾಕಗಳು ಮೂರು ಎಂದು ಆಯುರ್ವೆದ ಅಂಗೀಕರಿಸಿದೆ.

ಇಂದಿನ ವಿಜ್ಞಾನದ ಭಾಷೆಯಲ್ಲಿ ಹೇಳುವುದಾದರೆ ಆಹಾರವು ಜೀರ್ಣಗೊಂಡ ಬಳಿಕ ಕ್ಷಾರೀಯ ಅಥವಾ ಅಮ್ಲೀಯ ದ್ರವ್ಯವಾಗಿ ಪರಿವರ್ತನೆ ಹೊಂದುತ್ತದೆ. ಇವೆರಡು ವಿಭಾಗಗಳ ತಳಹದಿಯಲ್ಲೇ ಮುಂದಿನ ಜಿಜ್ಞಾಸೆ ನಡೆಯುತ್ತದೆ. ಆದರೆ ಆಯುರ್ವೆದ ರುಚಿಗಳ ಆಧಾರದಲ್ಲೇ ವಿಪಾಕವನ್ನೂ ಹೇಳಿರುವುದು ಅಚ್ಚರಿ ಮೂಡಿಸುತ್ತದೆ.

ಆಹಾರವು ಜಠರ, ಸಣ್ಣಕರುಳು ಹಾಗೂ ದೊಡ್ಡಕರುಳುಗಳಲ್ಲಿ ಮೂರು ಹಂತಗಳಲ್ಲಿ ಜೀರ್ಣವಾಗುತ್ತದೆ. ಇದನ್ನು ಅವಸ್ಥಾಪಾಕ ಎನ್ನಲಾಗಿದೆ. ಜಠರದಲ್ಲಿ ಸಿಹಿ ಹಾಗೂ ಉಪ್ಪುಗಳು ಜೀರ್ಣವಾಗಿ ಕಫದ ಉತ್ಪತ್ತಿಯಾಗುವ ಹಂತವೇ ಮಧುರೀಭಾವ. ಹುಳಿಯ ಅಂಶಗಳು ಸಣ್ಣಕರುಳಿನಲ್ಲಿ ಜೀರ್ಣವಾಗಿ ಪಿತ್ತ ಉತ್ಪತ್ತಿಯಾಗುವುದಕ್ಕೆ ಅಮ್ಲೀಭಾವ ಎಂದು ಹೆಸರು. ಕಹಿ, ಖಾರ, ಒಗರುರಸದ ಆಹಾರ ದೊಡ್ಡಕರುಳಿನಲ್ಲಿ ಪಚನಗೊಂಡು ವಾತವು ಹೆಚ್ಚುವ ಹಂತವೇ ಕಟುಭಾವ. ಈ ಎಲ್ಲಾ ರಸಗಳು ಪೂರ್ಣವಾಗಿ ಅಲ್ಲಿಯೇ ಜೀರ್ಣವಾಗದೆ ಸ್ವಲ್ಪ ಅಂಶ ಮುಂದಿನ ಭಾಗಕ್ಕೆ ಹೋಗಿ ತರುವಾಯ ಸಂಪೂರ್ಣವಾಗಿ ಪಚನವಾಗುತ್ತದೆ.

ಹೀಗೆ ಪಚನ ಪ್ರಕ್ರಿಯೆ ಕೊನೆಗೊಳ್ಳುವುದನ್ನು ನಿಷ್ಠಾಪಾಕ ಎಂದು ಆಯುರ್ವೆದ ಹೇಳಿದ್ದು, ಇದು ವಿಪಾಕ ರೂಪುಗೊಳ್ಳುವ ಹಂತವಾಗಿದೆ. ವಿಪಾಕಗಳು ಸಿಹಿ, ಹುಳಿ, ಖಾರಗಳೆಂದು ಮೂರು. ಸಿಹಿ ಹಾಗೂ ಉಪ್ಪುರುಚಿಯ ದ್ರವ್ಯಗಳ ವಿಪಾಕ ಸಿಹಿಯೇ. ಅಂದರೆ ಉಪ್ಪು ಜೀರ್ಣವಾದ ಬಳಿಕ ಅಂತಿಮವಾಗಿ ಸಿಹಿರುಚಿಯನ್ನು ಹೊಂದುತ್ತದೆ! ಹುಳಿರುಚಿಯ ವಸ್ತುಗಳ ವಿಪಾಕವೂ ಹುಳಿ. ಕಹಿ, ಖಾರ, ಒಗರುರುಚಿಯ ಆಹಾರಗಳ ವಿಪಾಕ ಖಾರ. ಅರ್ಥಾತ್ ಕಹಿಯಿರಲಿ, ಖಾರವಿರಲಿ, ಒಗರು ರುಚಿಯಿರಲಿ, ಜೀರ್ಣವಾಗಿ ಅಂತ್ಯದಲ್ಲಿ ಖಾರದ ರುಚಿಯನ್ನೇ ಹೊಂದುತ್ತವೆ!

ಈ ನಿಯಮಾನುಸಾರವೇ ನಾವು ಸೇವಿಸುವ ಆಹಾರ ಅಥವಾ ಔಷಧಗಳೆಲ್ಲ ಕೆಲಸ ಮಾಡುತ್ತವೆ. ಮಧುರ ವಿಪಾಕ ಉಳ್ಳ ದ್ರವ್ಯಗಳು ದೇಹದಲ್ಲಿ ಕಫದ ಅಂಶವನ್ನು ಹೆಚ್ಚಿಸುತ್ತವೆ. ಮಲ-ಮೂತ್ರ ಪ್ರವೃತ್ತಿ ಸುಲಭವಾಗಿ ಆಗುವಂತೆ ಮಾಡುತ್ತವೆ. ಶರೀರವನ್ನು ಆಧರಿಸುವ ಏಳು ಧಾತುಗಳನ್ನು ಪೋಷಣೆ ಮಾಡುತ್ತವೆ. ಅಮ್ಲ ವಿಪಾಕ ಇರುವಂತಹ ಆಹಾರವು ಪಿತ್ತವನ್ನು ಹೆಚ್ಚಿಸುತ್ತದೆ. ಮಲ-ಮೂತ್ರ ಸಲೀಸಾಗುವಂತೆ ನೋಡಿಕೊಳ್ಳುತ್ತದೆ. ಆದರೆ ಧಾತುಗಳ ಪ್ರಮಾಣವನ್ನು ಕಡಿಮೆಗೊಳಿಸುವ ಕೆಲಸಗೈಯುತ್ತದೆ. ಕಟು (ಖಾರ) ವಿಪಾಕ ಹೊಂದಿರುವ ಆಹಾರವಸ್ತುಗಳು ವಾತವನ್ನು ವರ್ಧಿಸುತ್ತವೆ. ಇದರಿಂದ ಮಲ-ಮೂತ್ರ ಪ್ರವೃತ್ತಿ ಕಷ್ಟಕರವಾಗುತ್ತದೆ. ಧಾತುಗಳ ಕ್ಷಯಕ್ಕೂ ಕಾರಣವಾಗುತ್ತದೆ.

ವಿಡಿಯೋ ನ್ಯೂಸ್

VIDEO| ತನ್ನ ಆಹಾರವನ್ನು ಮೀನು ಬಾಯಿಗಿಡುವ ಬಾತುಕೋಳಿ: ವೈರಲ್​ ವಿಡಿಯೋ...

ನವದೆಹಲಿ: ಪ್ರಾಣಿಗಳ ನಡುವಿನ ಅನ್ಯೋನ್ಯತೆಗೆ ಸಂಬಂಧಿಸಿದ ಸಾಕಷ್ಟು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ನೋಡಿದ್ದೇವೆ. ಅದರಲ್ಲೂ ಪರಸ್ಪರ ವೈರುಧ್ಯವುಳ್ಳ ಜೀವಿಗಳೆರಡು ಒಂದಕ್ಕೊಂದು ಪೋಷಿಸುವುದನ್ನು ನೋಡಿದರೆ ಅಚ್ಚರಿಯಾಗದೇ ಇರದು. ಅಂತಹದ್ದೇ ವಿಡಿಯೋವೊಂದು ಇದೀಗ...

VIDEO| ನಾವೆಲ್ಲ ಕಾಳಿಯನ್ನು ಪೂಜಿಸುವವರು, ನಮಗೆ ಮೃತ್ಯು ಬಹಳ ದೊಡ್ಡ...

ಬೆಂಗಳೂರು: ಯುವ ಬ್ರಿಗೇಡ್​ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹಾಗೂ ಸಂಸದ ತೇಜಸ್ವಿಸೂರ್ಯ ಸೇರಿದಂತೆ ಹಿಂದು ಮುಖಂಡರ ಹತ್ಯೆಗೆ ಸಂಚು ನಡೆಸಿರುವ ಆಘಾತಕಾರಿ ಘಟನೆ ಬಯಲಾಗಿ, 6 ಮಂದಿಯನ್ನು ಬಂಧಿಸದ ಬೆನ್ನಲ್ಲೇ...

VIDEO| ಮಗಳ ಸಾವನ್ನು ಮುಂದಿಟ್ಟಕೊಂಡು ರಾಜಕೀಯ ಮಾಡುತ್ತಿದ್ದಾರೆ; ನಿರ್ಭಯಾ ಪ್ರಕರಣದ...

ನವದೆಹಲಿ: ನಿರ್ಭಯಾ ಪ್ರಕರಣ ಅಪರಾಧಿಗಳ ಗಲ್ಲು ಮುಂದೂಡುತ್ತಿರುವುದಕ್ಕೆ ಸಂತ್ರಸ್ಥೆ ತಾಯಿ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಮಾಧ್ಯಮಗಳ ಜತೆ ಮಾತನಾಡಿದ ಅವರು, ಈವರಗೆ ನಾನು ರಾಜಕೀಯದ ಬಗ್ಗೆ ಮಾತನಾಡಿಲ್ಲ. 2012ರಲ್ಲಿ ಪ್ರಕರಣ ನಡೆದಾಗ, ಅದನ್ನು ಖಂಡಿಸಿ...

VIDEO: ಪಕ್ಕೆಲುಬು ಆಯ್ತು…ಈಗ ಪುಳಿಯೊಗರೆ; ಮತ್ತೊಂದು ಸರ್ಕಾರಿ ಶಾಲೆಯಿಂದ ಹೊರಬಿತ್ತು...

ಸಕಲೇಶಪುರ: ಪಕ್ಕೆಲುಬು ಹೇಳಲು ಬಾರದ ವಿದ್ಯಾರ್ಥಿಯ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವ ಮೂಲಕ ಶಿಕ್ಷಕನೋರ್ವ ವಿವಾದ ಸೃಷ್ಟಿಸಿದ್ದ. ಬಾಲಕ ಪಕ್ಕೆಲುಬು ಹೇಳಲಾಗದೆ ಕಷ್ಟಪಡುತ್ತಿದ್ದರೆ ಅದನ್ನು ವಿಡಿಯೋ ಮಾಡಿದ್ದ ಕುರುವತ್ತಿ ಸರ್ಕಾರಿ ಹಿರಿಯ ಪ್ರಾಥಮಿಕ...

ವಿಶ್ವಕಪ್​ನಲ್ಲಿ ಇಡೀ ಜಗತ್ತಿನ ಗಮನಸೆಳೆದಿದ್ದ ಟೀಂ ಇಂಡಿಯಾ ಸೂಪರ್​ ಫ್ಯಾನ್​...

ನವದೆಹಲಿ: ಕಳೆದ ವಿಶ್ವಕಪ್​ನಲ್ಲಿ ಇಡೀ ಜಗತ್ತಿನ ಗಮನ ಸೆಳೆದಿದ್ದ ಟೀಂ ಇಂಡಿಯಾದ ಸೂಪರ್​ ಫ್ಯಾನ್​ ಚಾರುಲತಾ ಪಟೇಲ್​ (87) ನಿಧನರಾಗಿದ್ದಾರೆ. 2019ರಲ್ಲಿ ವಿಶ್ವಕಪ್​ನಲ್ಲಿ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಪಂದ್ಯದಲ್ಲಿ ಚಾರುಲತಾ ಪಟೇಲ್​ ಕ್ಯಾಮರಾಕಣ್ಣಿಗೆ...

VIDEO| ಭೀಕರ ಕಾಡ್ಗಿಚ್ಚಿಗೆ ತುತ್ತಾಗಿರೋ ಆಸ್ಟ್ರೇಲಿಯಾ ಮೇಲೆ ವರುಣನ ಕೃಪೆ:...

ಸಿಡ್ನಿ: ಭೀಕರ ಕಾಡ್ಗಿಚ್ಚಿಗೆ ತುತ್ತಾಗಿರುವ ಕಾಂಗರೂ ನಾಡು ಆಸ್ಟ್ರೇಲಿಯಾ ಮೇಲೆ ಇದೀಗ ವರುಣ ದೇವ ಕೃಪೆ ತೋರಿದ್ದಾನೆ. ಇದರ ನಡುವೆ 18 ತಿಂಗಳ ಮಗುವೊಂದು ಮೊದಲ ಬಾರಿಗೆ ಮಳೆ ಸುರಿಯುವುದನ್ನು...