More

  ಮನೆ ಅಹಾರ ಸೇವನೆಯಿಂದ ಆರೋಗ್ಯ ವೃದ್ಧಿ

  ಹೊಳೆನರಸೀಪುರ : ಮನೆಯಲ್ಲೇ ತಯಾರಿಸಿದ ಶುದ್ಧವಾದ ಅಹಾರ ಸೇವನೆಯಿಂದ ಸಾಂಕ್ರಮಿಕ ಮತ್ತು ಅ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಬಹುದು ಎಂದು ತಾತನಹಳ್ಳಿ ಪ್ರಾಥಮಿಕ ಆರೋಗ್ಯ ನಿರೀಕ್ಷಣಾಧಿಕಾರಿ ಡಾ. ಜಿ.ವಿ.ಸ್ವಾಮಿ ಸಲಹೆ ನೀಡಿದರು.
  ಐಚನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕಚಾಗಳ್ಳಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಗುರುವಾರ ಗ್ರಾಮ ಆರೋಗ್ಯ ಯೋಜನೆಯಡಿ ಆಯೋಜನೆ ಮಾಡಿದ್ದ ಆರೋಗ್ಯ ತಪಾಸಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
  ಗುಣಮಟ್ಟದ ಅಹಾರ ಪದಾರ್ಥಗಳನ್ನು ಬಳಕೆ ಮಾಡಿ ಆಹಾರ ತಯಾರಿಸಬೇಕು. ಚಟಗಳಿಂದ ದೂರವಿರಬೇಕು. ಆರೋಗ್ಯ ರಕ್ಷಣೆಗೆ ಹೆಚ್ಚಿನ ಕಾಳಜಿ ತೋರಬೇಕು. ಆಗ ಮಾತ್ರ ನಮಗೆ ಆರೋಗ್ಯ ವೃದ್ಧಿಯಾಗುತ್ತದೆ ಎಂದರು.
  ಗ್ರಾಮ ಆರೋಗ್ಯ ಸಂಯೋಜಕ ರಮೇಶ, ಹಳ್ಳಿಮೈಸೂರು ಸಮುದಾಯ ಆರೋಗ್ಯ ಕೇಂದ್ರದ ಹಿರಿಯ ಶುಷ್ರೂಷಕಿ ಸುಜಾತಾ, ಪ್ರಯೋಗಾಲಯ ತಂತ್ರಜ್ಞೆ ಮಂಜುಳಾ, ಗ್ರಾಪಂ ಮಾಜಿ ಅಧ್ಯಕ್ಷೆ ಸುಂದ್ರಮ್ಮ, ಶಿಕ್ಷಕರಾದ ಅನಂತಕುಮಾರ್, ಲೋಕೇಶ ಇತರರು ಇದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts