25.9 C
Bengaluru
Wednesday, January 22, 2020

ಯೋಗಾಭ್ಯಾಸದಿಂದ ತಲೆನೋವು ನಿಯಂತ್ರಣ

Latest News

ತಾಪಂ ಆಡಳಿತ ಶೀಘ್ರ ಕಾರ್ಯಾರಂಭ

ಅಜ್ಜಂಪುರ: ತಾಪಂ ಆಡಳಿತ ಕಾರ್ಯ ಶೀಘ್ರ ಆರಂಭಿಸಲಾಗುವುದು. ಇದಕ್ಕೆ ಪೂರಕವಾಗಿ ಅಜ್ಜಂಪುರ ವ್ಯಾಪ್ತಿಯ ತಾಲೂಕು ಪಂಚಾಯಿತಿ ಸದಸ್ಯರನ್ನು ತರೀಕೆರೆಯಿಂದ ಪ್ರತ್ಯೇಕಿಸುವ ಕಾರ್ಯ ಪ್ರಗತಿಯಲ್ಲಿದೆ...

ಪ್ರಮುಖ ಸ್ಥಳಗಳಲ್ಲಿ ಪೊಲೀಸ್ ಬಿಗಿ ಭದ್ರತೆ

ಚಿಕ್ಕಮಗಳೂರು: ಮಂಗಳೂರಿನಲ್ಲಿ ಬಾಂಬ್ ಪತ್ತೆಯಾದ ಘಟನೆ ಹಿನ್ನೆಲೆಯಲ್ಲಿ ಪ್ರಮುಖ ಧಾರ್ವಿುಕ ಕ್ಷೇತ್ರಗಳಾದ ಶೃಂಗೇರಿ, ಹೊರನಾಡು, ಬಾಬಾಬುಡನ್​ಗಿರಿ, ಮುಳ್ಳಯ್ಯನಗಿರಿ, ಭದ್ರಾ ಅಣೆಕಟ್ಟೆ ಪ್ರದೇಶದಲ್ಲಿ ಪೊಲೀಸ್...

ದೊರೆತ ಉದ್ಯೋಗದಲ್ಲೇ ನಿಷ್ಠೆ ತೋರಿ: ಉದ್ಯೋಗ ಮೇಳದಲ್ಲಿ ಅಭ್ಯರ್ಥಿಗಳಿಗೆ ಶಾಸಕ ಎಸ್.ವಿ ರಾಮಚಂದ್ರ ಸಲಹೆ

ಜಗಳೂರು: ಸರ್ಕಾರಿ ಕೆಲಸಕ್ಕೆ ಅಲಂಬಿತರಾಗದೇ ಸಿಕ್ಕ ಉದ್ಯೋಗವನ್ನು ನಿಷ್ಠೆಯಿಂದ ಮಾಡಿದರೆ ಮುಂದೆ ಅವಕಾಶದ ಬಾಗಿಲುಗಳು ತೆರೆಯುತ್ತವೆ ಎಂದು ಶಾಸಕ ಎಸ್.ವಿ. ರಾಮಚಂದ್ರ ಹೇಳಿದರು. ಇಲ್ಲಿನ...

ಕೋತಿ ಹಾವಳಿಗೆ ಹಣ್ಣಿನ ಗಿಡ ಮದ್ದು

ಚಿಕ್ಕಮಗಳೂರು: ಕಡೂರಿನ ಹಲವೆಡೆ ತಲೆದೋರಿರುವ ಮಂಗಗಳ ಹಾವಳಿ ತಡೆಗೆ ಗ್ರಾಮಗಳ ಹೊರಭಾಗದಲ್ಲಿ ಹಣ್ಣಿನ ಸಸಿಗಳನ್ನು ನೆಟ್ಟು ಬೆಳೆಸುವ ಮೂಲಕ ಅವುಗಳನ್ನು ಆಕರ್ಷಿಸಬಹುದು. ಈ...

ಕರೋನಾ ವೈರಸ್​ ಪತ್ತೆ ಮಾಡಲು ಕೇರಳದ ವಿಮಾನ ನಿಲ್ದಾಣಗಳಲ್ಲಿ ಸ್ಕ್ರೀನಿಂಗ್​ ಕೇಂದ್ರಗಳ ಸ್ಥಾಪನೆ

ತಿರುವನಂತಪುರ: ಕರೋನಾ ವೈರಸ್​ ಹರಡುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರದ ಸಲಹೆ ಮೇರೆಗೆ ಕೇರಳದ ವಿಮಾನ ನಿಲ್ದಾಣಗಳಲ್ಲಿ ವೈರಸ್​ ಪತ್ತೆ ಮಾಡುವ ಸ್ಕ್ರೀನಿಂಗ್​ ಕೇಂದ್ರಗಳನ್ನು ಸ್ಥಾಪಿಸಲಾಗಿದೆ...
  • ಮೊಬೈಲ್​ಪೋನ್ ಸಂವಾದಗಳಿಂದ ಮತ್ತು ಕೆಲಸಗಳ ಒತ್ತಡದಿಂದ ವಿಪರೀತ ತಲೆನೋವು. ಮುಖ್ಯವಾಗಿ ಹುಬ್ಬುಗಳಲ್ಲಿ ಮತ್ತು ಕಿವಿಯ ಹಿಂದಿನ ಭಾಗದಲ್ಲಿ ಹೆಚ್ಚು ನೋವು ಕಾಡುತ್ತಿದೆ. ಇದಕ್ಕೆ ಏನು ಮಾಡಬಹುದು?

| ಸುಸ್ಮಿತಾ (45) ಬೆಂಗಳೂರು

ಸೆಲ್​ಪೋನ್​ಗಳು ಮೈಕ್ರೊವೇವ್ಸ್ ಎಂಬ ನಿರ್ದಿಷ್ಟ ರೀತಿಯ ರೇಡಿಯೋ ತರಂಗಗಳನ್ನು ಹೊರ ಸೂಸುತ್ತವೆ. ಇದು ಕಡಿಮೆ ಮಟ್ಟದ ನಿರುಪದ್ರವ ಪರಿಗಣಿಸಲಾಗುತ್ತದೆ.

ಮೊಬೈಲ್ ಪೋನ್ ಸಿಗ್ನಲ್​ಗಳು ಮಿದುಳಿನ ಚಟುವಟಿಕೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ಅಧ್ಯಯನಗಳು ತಿಳಿಸಿವೆ. ದೀರ್ಘಕಾಲದಿಂದ ಮೊಬೈಲ್ ಫೋನ್ ಬಳಕೆಯ ಕೆಲವೇ ಗಂಟೆಗಳಲ್ಲಿ ತಲೆನೋವು ಲಕ್ಷಣಗಳು ಕಂಡುಬರುತ್ತವೆ ಎಂದು ಸಂಶೋಧನೆಗಳೂ ಹೇಳಿವೆ. ಒಮ್ಮೆ ತಜ್ಞ ವೈದ್ಯರಲ್ಲಿ ನಿಮ್ಮ ತಲೆನೋವಿನ ಕಾರಣಗಳನ್ನು ಪರೀಕ್ಷಿಸಿಕೊಳ್ಳಿ. ಇದರ ನಿಯಂತ್ರಣಕ್ಕೆ ಯೋಗ ಮತ್ತು ಮುದ್ರೆಗಳು ಸಹಕಾರಿಯಾಗುತ್ತದೆ.

ನೀವು ಮುಂಜಾನೆ ಖಾಲಿ ಹೊಟ್ಟೆಗೆ ಸುಮಾರು ಒಂದು ತಾಸು ಗುರು ಸಮ್ಮುಖದಲ್ಲಿ ಯೋಗ ಮಾಡಿ. ಕೆಲಸದ ಮಧ್ಯೆ ದಿನಕ್ಕೆ ಆರು ಬಾರಿ ಕಣ್ಣು ಮುಚ್ಚಿ, ಎರಡರಿಂದ ಮೂರು ನಿಮಿಷ ಉಸಿರನ್ನು ಗಮನಿಸುವ ಚಿಕ್ಕ ಧ್ಯಾನ ಮಾಡಿ. ಕಚೇರಿ ನಂತರ ಸಂಜೆ ಹೊತ್ತು ವಿಶ್ರಾಂತಿಗಾಗಿಯೇ ಇರುವ ಶವಾಸನ ಮಾಡಿ. ಕೆಲಸದ ಒತ್ತಡ ನಿಯಂತ್ರಣಕ್ಕೆ ನಿತ್ಯ ಯೋಗ ಅಭ್ಯಾಸ ಮಾಡಿ. ನಿಮ್ಮ ಮೊಬೈಲ್ ಪೋನ್ ಬಳಕೆಯನ್ನು ಆದಷ್ಟು ಕಡಿಮೆ ಮಾಡಿ.

ವಾಯುಶೂನ್ಯ ಮುದ್ರೆ, ಆಕಾಶ ಮುದ್ರೆ, ಚಿನ್ಮುದ್ರೆ, ಮತ್ತು ಪ್ರಾಣಮುದ್ರೆ ಮಾಡಿ. ತಲೆನೋವಿದ್ದಾಗ ವ್ಯಾನ ಸೂರ್ಯಮುದ್ರೆ (ಮಹಾಶೀರ್ಷ ಮುದ್ರೆ) 20 ನಿಮಿಷ ಮಾಡಿ. ದೇಹಕ್ಕೆ ಪೋಷಕಾಂಶ ನೀಡಿದಂತೆ ಮನಸ್ಸಿಗೆ ಒಳ್ಳೆಯ ವಿಚಾರಗಳ ಆಹಾರ ನೀಡಿ. ಒತ್ತಡ ಕಡಿಮೆಯಾಗುತ್ತದೆ. ಯೋಗ ಮಿದುಳನ್ನು ಶಾಂತಗೊಳಿಸುತ್ತದೆ. ಪ್ಯಾರಾಸಿಂಪಥೆಟಿಕ್ ನರಮಂಡಲವನ್ನು ಸಕ್ರಿಯಗೊಳಿಸುತ್ತದೆ. ಆತಂಕ ಮತ್ತು ಮೈಗ್ರೇನ್​ನಿಂದ ಚೇತರಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ.

  • ವೃತ್ತಿಯಲ್ಲಿ ಶಿಕ್ಷಕ. ನಿತ್ಯವೂ ಯೋಗಾಭ್ಯಾಸ ಮಾಡುತ್ತಿದ್ದೆ. ಆದರೆ 15 ದಿನಗಳಿಂದ ಕುತ್ತಿಗೆ ಕೆಳಭಾಗದಲ್ಲಿ ಊತ ಕಂಡುಬಂದಿದೆ. ಆಗಾಗ್ಗೆ ನೋವು ಕಾಡುತ್ತಿದೆ. ನಾನು ಯೋಗ ಮುಂದುವರಿಸಬಹುದೇ? ಈ ನೋವು ಪರಿಹಾರಕ್ಕೆ ಆಸನ ಸೂಚಿಸಿ.

| ಕೆ.ಬಿ. ದೇವರಾಜ ಬೇಲೂರು

ಕತ್ತಿನ ಮೂಳೆಗಳು, ಅಸ್ಥಿರಜ್ಜುಗಳು ಮತ್ತು ಸ್ನಾಯುಗಳು ತಲೆಯನ್ನು ಬೆಂಬಲಿಸುತ್ತದೆ. ಚಲನೆಗೆ ಅನುವು ಮಾಡಿಕೊಡುತ್ತದೆ. ಯಾವುದೇ ಅಸಹಜತೆಗಳು, ಉರಿಯೂತ ಅಥವಾ ಗಾಯವು ಕುತ್ತಿಗೆ ನೋವು ಅಥವಾ ಊದಿಕೊಳ್ಳುವಿಕೆ ಕಾರಣವಾಗಬಹುದು. ಕಳಪೆ ಭಂಗಿ ಯಾ ಅತಿಯಾದ ಕುತ್ತಿಗೆಗೆ ಒತ್ತಡದ ಕೆಲಸದಿಂದ ಈ ರೀತಿ ಉಂಟಾಗುತ್ತದೆ. ತೀವ್ರತೆ ಸಂದರ್ಭದಲ್ಲಿ ವೈದ್ಯಕೀಯ ಚಿಕ್ಸಿತೆ ಪಡೆಯಿರಿ.

ಈಗಂತೂ ಕುತ್ತಿಗೆ ನೋವು ಅತ್ಯಂತ ಸಾಮಾನ್ಯವಾಗಿದೆ. ಕುತ್ತಿಗೆ ಸ್ನಾಯುಗಳ ಬಲಿಷ್ಠತೆಗೆ, ಕುತ್ತಿಗೆಯ ಸೆಳೆತ, ಕುತ್ತಿಗೆಯ ಮಾಂಸಖಂಡಗಳು, ಸಂದುಗಳ ಆರೋಗ್ಯಕ್ಕೆ ನೆಕ್ ರೊಟೇಶನ್, ಭುಜಗಳ ವ್ಯಾಯಾಮ ಸಹಾಯಕ. ಮುಂಜಾನೆ ಯೋಗ ಮಾಡಿ. ಆಸನಗಳಲ್ಲಿ ತಾಡಾಸನ, ಪಾರ್ಶ್ವತಾಡಾಸನ, ಅರ್ಧಕಟಿ ಚಕ್ರಾಸನ, ಪರ್ವತಾಸನ, ಮಾರ್ಜಾಲಾಸನ, ಗೋಮುಖಾಸನ, ಉತ್ಥಾನ ಮಂಡೂಕಾಸನ, ಊರ್ಧ್ವಪ್ರಸಾರಿತ ಪಾದಾಸನ, ಶವಾಸನ ನಿತ್ಯ ಗುರುಗಳ ಸಮ್ಮುಖದಲ್ಲಿ ಮೂರು ತಿಂಗಳು ಅಭ್ಯಾಸ ಮಾಡಿ. ತಲಾ ಹತ್ತು ನಿಮಿಷ ಪ್ರಾಣಾಯಾಮ, ಧ್ಯಾನ ಮಾಡಿ.

ವಿಡಿಯೋ ನ್ಯೂಸ್

VIDEO: ಮಾವುತನ ಊಟದ ಎಲೆಯಿಂದ ತುತ್ತು ಅನ್ನ ತಿಂದು, ನೆಟ್ಟಿಗರ...

ತಿರುವನಂತಪುರ: ಆನೆಗಳ ಆಟ, ದಾಳಿ, ಮರ ಹತ್ತುವುದು ಹೀಗೆ ಹಲವು ವಿಡಿಯೋಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿವೆ. ಆದರೆ ಈಗ ವೈರಲ್​ ಆಗಿರುವ ಆನೆಯ ವಿಡಿಯೋ ಸಾಮಾಜಿಕ ಬಳಕೆದಾರರ ಮನಸ್ಸು ಗೆದ್ದಿದೆ. ಹಸಿದ...

VIDEO| ರಾಷ್ಟ್ರಪತಿ ರಾಮನಾಥ್​ ಕೋವಿಂದ್​ರಿಂದ ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ...

ನವದೆಹಲಿ: ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಅವರು ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿ ಪ್ರದಾನ ಮಾಡಿದರು. ವಿವಿಧ ಕ್ಷೇತ್ರಗಳಲ್ಲಿ ಅದ್ವಿತೀಯ ಸಾಧನೆ ಮಾಡಿದ...

VIDEO| ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ...

ಲಖನೌ: ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ ಪೂರಕವಾದ ಘಟನೆ ಇದಾಗಿದೆ. ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನೋಯ್ಡಾದಲ್ಲಿ ಅಂಗಡಿ ಹೊರಭಾಗದಲ್ಲಿ ಇಟ್ಟಿದ್ದ ಬಾಕ್ಸ್​ನಿಂದ...

VIDEO| ನಟಿಯಾಗಿರೋ ಆಲಿಯಾ ಇದೀಗ ಶೆಫ್​: ಬಾಲಿವುಡ್​ ಬ್ಯೂಟಿಯ ಅಡುಗೆ...

ಮುಂಬೈ: ಬಾಲಿವುಡ್​ ಬ್ಯೂಟಿ ಆಲಿಯಾ ಭಟ್ ನಟನೆ ಜತೆಗೆ ಹೊಸ ಸಾಹಸಕ್ಕೆ ಕೈಹಾಕಿದ್ದಾರೆ. ನಟಿಯಾಗಿರುವ ಆಲಿಯಾ ಇದೀಗ ಶೆಫ್ ಆಗಿದ್ದು, ಹೊಸ ಬಗೆಯ ಅಡುಗೆ ಪರಿಚಯಿಸಲು ಮುಂದಾಗಿದ್ದಾರೆ. ಯೂಟ್ಯೂಬ್​ನಲ್ಲಿ ಆಲಿಯಾ ಭಟ್...

VIDEO| ಅತಿವೇಗದ ಎಸೆತ, ಮಥೀಶಾ ಪಥಿರಣ ವಿಶ್ವದಾಖಲೆ!

ಬ್ಲೂಮ್​ಫಾಂಟೆನ್: ಶ್ರೀಲಂಕಾ ವಿರುದ್ಧ ಭಾನುವಾರ ನಡೆದ 19 ವಯೋಮಿತಿ ಏಕದಿನ ವಿಶ್ವಕಪ್ ಟೂರ್ನಿಯ ಮುಖಾಮುಖಿಯಲ್ಲಿ ಭಾರತ ತಂಡ 90 ರನ್​ಗಳಿಂದ ಗೆಲುವು ಸಾಧಿಸಿತು. ಆದರೆ, ಲಂಕಾ ಕಡೆಯಿಂದಲೂ ಸ್ಮರಣೀಯ ದಾಖಲೆಯೊಂದು...

VIDEO| ತಮಿಳಿನ ಕೌನ್​ ಬನೇಗಾ ಕರೋಡ್​ಪತಿ ಶೋನಲ್ಲಿ 1 ಕೋಟಿ...

ಚೆನ್ನೈ: ತಮಿಳು ಆವೃತ್ತಿಯ ಕೌನ್​ ಬನೇಗಾ ಕರೋಡ್​ಪತಿ(ಕೊಡೀಶ್ವರಿ) ರಿಯಾಲಿಟಿ ಶೋನಲ್ಲಿ ವಿಕಲಾಂಗ ಮಹಿಳೆಯೊಬ್ಬಳು ಬರೋಬ್ಬರಿ 1 ಕೋಟಿ ರೂ. ಬಹುಮಾನ ಮೊತ್ತವನ್ನು ಗೆದ್ದು ಎಲ್ಲರ ಗಮನ ಸೆಳೆದಿದ್ದಾಳೆ.ಮದುರೈ ನಿವಾಸಿಯಾಗಿರುವ ಕೌಶಲ್ಯ...