ಏಷ್ಯಾ ಕಪ್​ನಲ್ಲಿ ಕೊಹ್ಲಿ ಅನುಪಸ್ಥಿತಿ: ಕೋಚ್​​ ರವಿಶಾಸ್ತ್ರಿ ಹೇಳಿದ್ದೇನು?

ನವದೆಹಲಿ: ನಾಯಕ ವಿರಾಟ್​ ಕೊಹ್ಲಿ ಏಷ್ಯಾ ಕಪ್​ ಟೂರ್ನಿಯಿಂದ ಹೊರಗ್ಯಾಕೆ ಉಳಿದಿದ್ದರು ಎಂಬ ಹಲವರ ಪ್ರಶ್ನೆಗೆ ಟೀಂ ಇಂಡಿಯಾದ ಮುಖ್ಯ ತರಬೇತುದಾರ ರವಿಶಾಸ್ತ್ರಿ ಕೊನೆಗೂ ಉತ್ತರಿಸಿದ್ದಾರೆ.

ವಿರಾಟ್​ ದೈಹಿಕವಾಗಿ ಗೂಳಿಯಷ್ಟು ಶಕ್ತರಾಗಿದ್ದಾರೆ. ಮೈದಾನದಲ್ಲಿ ಅವರ ಆಟದ ತೀವ್ರತೆಯನ್ನು ನೀವು ನೋಡಿದ್ದೀರಿ. ಆದರೆ, ಮಾನಸಿಕ ಆಯಾಸದ ಕಾರಣ ಕ್ರಿಕೆಟ್​ನಿಂದ ತಮ್ಮ ಮನಸ್ಸನ್ನು ಸ್ವಲ್ಪ ದಿನ ಹೊರಗಡೆ ತೆಗೆದುಕೊಂಡು ನಂತರ ಹೊಸ ಹುರುಪಿನಿಂದ ಹಿಂತಿರುಗಲಿ ಎಂಬ ಉದ್ದೇಶ ಅವರಿಗೆ ವಿಶ್ರಾಂತಿಯನ್ನು ನೀಡಲಾಗಿದೆ ಎಂದು ಶಾಸ್ತ್ರಿ ತಿಳಿಸಿದ್ದಾರೆ.

ಅಕ್ಟೋಬರ್​ 4ರಂದು ರಾಜ್​ಕೋಟ್​ನ ಸೌರಾಷ್ಟ್ರ ಕ್ರಿಕೆಟ್​ ಅಸೋಸಿಯೇಷನ್​ ಮೈದಾನದಲ್ಲಿ ವೆಸ್ಟ್​ ಇಂಡೀಸ್​ ವಿರುದ್ಧ ನಡೆಯಲಿರುವ 2 ಟೆಸ್ಟ್​ ಪಂದ್ಯಗಳ ಸರಣಿಯಲ್ಲಿ ಕೊಹ್ಲಿ ಅವರು ಮತ್ತೆ ತಂಡವನ್ನು ಮುನ್ನಡೆಸಲಿದ್ದಾರೆ.

ಏಷ್ಯಾ ಕಪ್​ನಲ್ಲಿ ಟೀಂ ಇಂಡಿಯಾದ ನಾಯಕತ್ವ ವಹಿಸಿಕೊಂಡಿದ್ದ ರೋಹಿತ್​ ಶರ್ಮಾ ಅವರು ಟ್ರೋಫಿ ಗೆಲ್ಲುವಲ್ಲಿ ಯಶಸ್ವಿಯಾದರು. ಅಲ್ಲದೆ, ಭಾರತ 7 ಬಾರಿ ಏಷ್ಯಾ ಕಪ್​ ಟ್ರೋಫಿಗೆ ಮುತ್ತಿಟ್ಟ ಹೆಗ್ಗಳಿಕೆಯನ್ನು ಹಾಗೂ ದಾಖಲೆಯನ್ನು ಹೊಂದಿದೆ. (ಏಜೆನ್ಸೀಸ್​)