26.7 C
Bengaluru
Sunday, January 19, 2020

ಪಾಕ್‌ ಕ್ರಿಕೆಟಿಗರಿಗೆ ಇನ್ಮುಂದೆ ಬಿರಿಯಾನಿ, ಸಿಹಿ ಪದಾರ್ಥಗಳ ಸೇವನೆಗೆ ನಿರ್ಬಂಧ; ಉಲ್ಲಂಘಿಸಿದವರಿಗೆ ಗೇಟ್ ಪಾಸ್ !

Latest News

ಬಸನಾಳ ಖಾತ್ರಿ ಗೋಕಟ್ಟೆ ವೀಕ್ಷಣೆ

ಕಲಬುರಗಿ: ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ತಾಲೂಕಿನ ಕವಲಗಾ (ಬಿ) ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸನಾಳ ಗ್ರಾಮದಲ್ಲಿ ನಿರ್ಮಿಸಲಾಗಿರುವ ಗೋಕಟ್ಟಾ ಇನ್ನಿತರ ಕಾಮಗಾರಿಗಳನ್ನು ನರೇಗಾ...

ಅಕ್ಷರ ಜಾತ್ರೆಗೆ ಅನುದಾನದ ಬರ !

ವಾದಿರಾಜ ವ್ಯಾಸಮುದ್ರ ಕಲಬುರಗಿಜ್ಞಾನಗಂಗೆ ಪರಿಸರದಲ್ಲಿ ಫೆಬ್ರವರಿ 5ರಿಂದ ನಡೆಯಲಿರುವ ಮೂರು ದಿನದ ಅಕ್ಷರ ಜಾತ್ರೆಗೆ ಅನುದಾನದ ಬರ ಉಂಟಾಗುವ ಆತಂಕ ಎದುರಾಗಿದೆ. ಸಮ್ಮೇಳನಕ್ಕೆ...

ಜಕಣಾಚಾರಿ ಜಯಂತಿ ಆದೇಶಕ್ಕೆ ಅಡ್ಡಿ

 ಕಲಬುರಗಿ: ಸರ್ಕಾರದಿಂದ ಅಮರಶಿಲ್ಪಿ ಜಕಣಾಚಾರಿ ಜಯಂತಿ ಆಚರಣೆಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಒಪ್ಪಿಗೆ ನೀಡಿದರೂ ಕನ್ನಡ ಮತ್ತು ಸಂಸ್ಕೃತಿ ಸಚಿವರು ಅಡ್ಡಗಾಲು ಹಾಕಿದ್ದಾರೆ...

ಪಿಒಕೆಯಲ್ಲಿ ಜನಾಭಿಪ್ರಾಯ ಸಂಗ್ರಹಿಸಲು ಪಾಕಿಸ್ತಾನ ಸಿದ್ಧವಿದೆ: ಪಾಕ್​ ಪ್ರಧಾನಿ ಇಮ್ರಾನ್​ ಖಾನ್​

ಇಸ್ಲಮಾಬಾದ್​: ಜನರ ನಿರ್ಧಾರಕ್ಕೆ ಬಿಡೋಣ ಅವರು ಪಾಕಿಸ್ತಾನದ ಭಾಗವಾಗಿರಲು ನಿರ್ಧರಿಸುತ್ತಾರಾ ಅಥವಾ ಸ್ವತಂತ್ರವಾಗಿರಲು ಬಯಸುತ್ತಾರಾ ಎಂಬುದನ್ನು ತಿಳಿಯಲು ಪಾಕ್​ ಆಕ್ರಮಿತ ಕಾಶ್ಮೀರದಲ್ಲಿ ಜನಾಭಿಪ್ರಾಯ...

ಪ್ರಧಾನಿ ಮೋದಿ ಟ್ವೀಟನ್ನು ಯಥಾವತ್ತಾಗಿ ಕಾಪಿ ಮಾಡಿ ಟ್ರೋಲ್​ಗೆ ದಾಳಕ್ಕೆ ಸಿಲುಕಿದ ನಟಿ ಊರ್ವಶಿ ರೌಟೇಲಾ!

ಮುಂಬೈ: ಶನಿವಾರ ಸಂಜೆ ಕಾರು ಅಪಘಾತದಲ್ಲಿ ಗಾಯಗೊಂಡ ಬಾಲಿವುಡ್​ ಹಿರಿಯ ನಟಿ ಶಬಾನಾ ಅಜ್ಮಿ ಅವರು ಬೇಗ ಗುಣಮುಖರಾಗಲೆಂದು ಟ್ವೀಟ್​ ಮಾಡಿ ನಟಿ...

ಕರಾಚಿ: ಪಾಕಿಸ್ತಾನ ಕ್ರಿಕೆಟ್‌ ತಂಡದ ನೂತನ ಕೋಚ್‌ ಮತ್ತು ಮುಖ್ಯ ಆಯ್ಕೆಗಾರ ಮಿಸ್​ಬಾ ಉಲ್‌ ಹಕ್‌ ಇದೀಗ ದೇಶೀಯ ಪಂದ್ಯ ಮತ್ತು ರಾಷ್ಟ್ರೀಯ ಶಿಬಿರದಲ್ಲಿ ಆಹಾರ ಮತ್ತು ಪೋಷಣೆಯ ಯೋಜನೆಗಳನ್ನು ಬದಲಾಯಿಸಿದ್ದು, ತಂಡದ ಆಟಗಾರರ ಫಿಟ್‌ನೆಸ್‌ ಗುಣಮಟ್ಟ ಹೆಚ್ಚಿಸಲು ಹೊಸ ಆಹಾರ ಪದ್ಧತಿಯನ್ನು ಸೂಚಿಸಿದ್ದಾರೆ.

ದೇಶೀಯ ಋತುವಿನಲ್ಲಿ ಆಟಗಾರರಿಗೆ ಯಾವುದೇ ರೀತಿಯ ಭಾರಿ ಆಹಾರ ಪದ್ಧತಿ ಇನ್ಮುಂದೆ ಲಭ್ಯವಾಗುವುದಿಲ್ಲ ಮತ್ತು ರಾಷ್ಟ್ರೀಯ ಶಿಬಿರಗಳಲ್ಲಿ ರಾಷ್ಟ್ರೀಯ ತಂಡವನ್ನಾಗಿ ಮಾಡಲು ಆಟಗಾರರು ಗರಿಷ್ಠ ಫಿಟ್‌ನೆಸ್‌ ಅನ್ನು ಪಡೆಯಬೇಕು ಎಂದು ಮಿಸ್​ಬಾ ಆದೇಶ ಹೊರಡಿಸಿದ್ದಾರೆ.

ಕ್ವಾಯ್ಡ್-ಎ-ಅಜಮ್ ಟ್ರೋಫಿಯ ಪಂದ್ಯವೊಂದರಲ್ಲಿ ಆಟಗಾರರಿಗಾಗಿ ಆಹಾರ ಪೂರೈಕೆ ಉಸ್ತುವಾರಿ ಹೊತ್ತಿರುವ ಅಡುಗೆ ಕಂಪನಿಯ ಸದಸ್ಯರೊಬ್ಬರು ಈಗ ಆಟಗಾರರಿಗೆ ಬಿರಿಯಾನಿ ಅಥವಾ ಜಾಸ್ತಿ ಎಣ್ಣೆಯನ್ನೊಳಗೊಂಡ ಕೆಂಪು ಮಾಂಸದ ಊಟ ಅಥವಾ ಸಿಹಿ ಭಕ್ಷ್ಯಗಳು ಇರುವುದಿಲ್ಲ ಎಂದು ಹೇಳಿದ್ದಾರೆ.

ದೇಶೀಯ ಋತುವಿನಲ್ಲಿನ ಎಲ್ಲ ತಂಡಗಳ ಆಟಗಾರರಿಗೆ ಬಾರ್ಬೆಕ್ಯೂ(ಸರಳುಗಳಿಂದಾದ ಒಲೆಯಲ್ಲಿ ಬೇಯಿಸಿದ) ವಸ್ತುಗಳು ಮತ್ತು ಸಾಕಷ್ಟು ಹಣ್ಣುಗಳನ್ನು ಹೊಂದಿರುವ ಪಾಸ್ತಾ ಮಾತ್ರ ಮೆನುವಿನಲ್ಲಿರಬೇಕು ಎಂದು ಮಿಸ್​ಬಾ ಆದೇಶ ಹೊರಡಿಸಿದ್ದಾರೆ ಮತ್ತು ರಾಷ್ಟ್ರೀಯ ಶಿಬಿರಗಳಲ್ಲಿಯೂ ಇದೇ ಆಹಾರ ಪದ್ಧತಿಯನ್ನು ಅನುಸರಿಸಲಾಗುವುದು.

ಪಾಕಿಸ್ತಾನದ ಆಟಗಾರರು ರಾಷ್ಟ್ರೀಯ ತಂಡಕ್ಕಾಗಿ ಆಡದಿದ್ದಾಗ ಜಂಕ್ ಫುಡ್ ಮತ್ತು ಅಧಿಕ ಎಣ್ಣೆಯುಕ್ತ ಭಕ್ಷ್ಯಗಳ ಬಗ್ಗೆ ಒಲವು ಹೊಂದಿದ್ದಾರೆಂದು ತಿಳಿದುಬಂದಿದೆ. ಆದರೆ, ಮಿಸ್​​ಬಾ ಪ್ರತಿ ಆಟಗಾರನಿಗೆ ತಮ್ಮ ಫಿಟ್‌ನೆಸ್ ಮತ್ತು ಡಯಟ್ ಯೋಜನೆಗಳ ಬಗ್ಗೆ ಲಾಗ್ ಪುಸ್ತಕವನ್ನು ನಿರ್ವಹಿಸಲಾಗುವುದು ಎಂದು ಹೇಳಿದ್ದಾರೆ. ಇದನ್ನು ಯಾರಾದರೂ ಉಲ್ಲಂಘಿಸಿದರೆ ಅವರಿಗೆ ಬಾಗಿಲನ್ನು ತೋರಿಸಲಾಗುತ್ತದೆ ಎಂದು ಹೇಳಿದ್ದಾರೆ ಎಂದು ಮೂಲವೊಂದರಿಂದ ತಿಳಿದುಬಂದಿದೆ.

43ನೇ ವಯಸ್ಸಿನವರೆಗೂ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಆಡುತ್ತಿದ್ದ ಮಿಸ್​ಬಾ, 45 ವರ್ಷವಾದರೂ ಕೂಡ ಸಕ್ರಿಯ ಆಟಗಾರರಾಗಿದ್ದು, ಅಧಿಕ ಫಿಟ್‌ನೆಸ್‌ ಮಾನದಂಡಗಳನ್ನು ಅನುಸರಿಸುವ ರೋಲ್‌ ಮಾಡಲ್‌ ಆಗಿ ಕಾಣಿಸಿಕೊಂಡಿದ್ದಾರೆ. (ಏಜೆನ್ಸೀಸ್‌)

ವಿಡಿಯೋ ನ್ಯೂಸ್

VIDEO| ಉಪಮುಖ್ಯಮಂತ್ರಿಗಳ ಕೈಬಿಡುವ ವಿಚಾರ ವರಿಷ್ಠರಿಗೆ ಬಿಟ್ಟದ್ದು, ಸಿಎಂ ವಾಪಸ್​...

ಬೆಂಗಳೂರು: ಹಾಲಿ ಇರುವ ಇಬ್ಬರು ಉಪ ಮುಖ್ಯಮಂತ್ರಿಗಳನ್ನು ಕೈ ಬಿಟ್ಟು ಹೊಸ ಡಿಸಿಎಂಗಳ ನೇಮಕ ವಿಚಾರವಾಗಿ ಪಕ್ಷದ ವರಿಷ್ಠರು ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ಅವರು ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಡಿಸಿಎಂ ಡಾ. ಅಶ್ವತ್ಥ...

VIDEO| ವಂದೇ ಮಾತರಂ ಹೇಳದವರಿಗೆ ಭಾರತದಲ್ಲಿ ಬದುಕುವುದಕ್ಕೆ ಹಕ್ಕಿಲ್ಲ: ಕೇಂದ್ರ...

ಅಹಮದಾಬಾದ್​: ಒಂದೊಮ್ಮೆ ನೀವು ವಂದೇಮಾತರಂ ಹೇಳುವುದಿಲ್ಲ ಎಂದಾದರೆ ಭಾರತದಲ್ಲಿ ಬದುಕುವ ಹಕ್ಕು ಇರುವುದಿಲ್ಲ ಎಂದು ಕೇಂದ್ರ ಸಚಿವ ಪ್ರತಾಪ್ ಚಂದ್ರ ಸಾರಂಗಿ ಸೂರತ್​ನಲ್ಲಿ ಹೇಳಿದ್ದು ಈಗ ವಿವಾದಕ್ಕೀಡಾಗಿದೆ.    ಅವರು ಶನಿವಾರ ಪೌರತ್ವ...

VIDEO| ಜಮ್ಮು-ಕಾಶ್ಮೀರದ ಉಧಂಪುರದಲ್ಲೊಂದು ಚೈಲ್ಡ್ ಫ್ರೆಂಡ್ಲಿ ಪೊಲೀಸ್ ಸ್ಟೇಷನ್ !

ಉಧಂಪುರ: ಜಮ್ಮು-ಕಾಶ್ಮೀರದ ಉಧಂಪುರದಲ್ಲಿ ಇದೇ ಮೊದಲ ಬಾರಿಗೆ ಚೈಲ್ಡ್ ಫ್ರೆಂಡ್ಲಿ ಪೊಲೀಸ್ ಸ್ಟೇಷನ್ ಕಾರ್ಯಾಚರಣೆ ಆರಂಭಿಸಿದೆ. ಈ ವಿಶೇಷ ಜುವೆನಿಲ್ ಪೊಲೀಸ್ ಘಟಕವನ್ನು ಭಾನುವಾರ ಉದ್ಘಾಟಿಸಲಾಗಿದೆ. ಮಕ್ಕಳಲ್ಲಿ ಪೊಲೀಸ್ ಠಾಣೆ...

VIDEO| ತನ್ನ ಆಹಾರವನ್ನು ಮೀನು ಬಾಯಿಗಿಡುವ ಬಾತುಕೋಳಿ: ವೈರಲ್​ ವಿಡಿಯೋ...

ನವದೆಹಲಿ: ಪ್ರಾಣಿಗಳ ನಡುವಿನ ಅನ್ಯೋನ್ಯತೆಗೆ ಸಂಬಂಧಿಸಿದ ಸಾಕಷ್ಟು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ನೋಡಿದ್ದೇವೆ. ಅದರಲ್ಲೂ ಪರಸ್ಪರ ವೈರುಧ್ಯವುಳ್ಳ ಜೀವಿಗಳೆರಡು ಒಂದಕ್ಕೊಂದು ಪೋಷಿಸುವುದನ್ನು ನೋಡಿದರೆ ಅಚ್ಚರಿಯಾಗದೇ ಇರದು. ಅಂತಹದ್ದೇ ವಿಡಿಯೋವೊಂದು ಇದೀಗ...

VIDEO| ನಾವೆಲ್ಲ ಕಾಳಿಯನ್ನು ಪೂಜಿಸುವವರು, ನಮಗೆ ಮೃತ್ಯು ಬಹಳ ದೊಡ್ಡ...

ಬೆಂಗಳೂರು: ಯುವ ಬ್ರಿಗೇಡ್​ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹಾಗೂ ಸಂಸದ ತೇಜಸ್ವಿಸೂರ್ಯ ಸೇರಿದಂತೆ ಹಿಂದು ಮುಖಂಡರ ಹತ್ಯೆಗೆ ಸಂಚು ನಡೆಸಿರುವ ಆಘಾತಕಾರಿ ಘಟನೆ ಬಯಲಾಗಿ, 6 ಮಂದಿಯನ್ನು ಬಂಧಿಸದ ಬೆನ್ನಲ್ಲೇ...

VIDEO| ಮಗಳ ಸಾವನ್ನು ಮುಂದಿಟ್ಟಕೊಂಡು ರಾಜಕೀಯ ಮಾಡುತ್ತಿದ್ದಾರೆ; ನಿರ್ಭಯಾ ಪ್ರಕರಣದ...

ನವದೆಹಲಿ: ನಿರ್ಭಯಾ ಪ್ರಕರಣ ಅಪರಾಧಿಗಳ ಗಲ್ಲು ಮುಂದೂಡುತ್ತಿರುವುದಕ್ಕೆ ಸಂತ್ರಸ್ಥೆ ತಾಯಿ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಮಾಧ್ಯಮಗಳ ಜತೆ ಮಾತನಾಡಿದ ಅವರು, ಈವರಗೆ ನಾನು ರಾಜಕೀಯದ ಬಗ್ಗೆ ಮಾತನಾಡಿಲ್ಲ. 2012ರಲ್ಲಿ ಪ್ರಕರಣ ನಡೆದಾಗ, ಅದನ್ನು ಖಂಡಿಸಿ...