ಬಂಗಾರಪೇಟೆ: ಊಟ ಕೇಳುವ ನೆಪದಲ್ಲಿ ಮಹಿಳೆಯಿಂದ ಚಿನ್ನದ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾಗಿದ್ದ ಆರೋಪಿಯನ್ನು ಘಟನೆ ನಡೆದ 3 ತಾಸಿನಲ್ಲೇ ಪೊಲೀಸರು ಬಂಧಿಸಿದ್ದಾರೆ. ಉತ್ತರ ಪ್ರದೇಶದ ಖಶನಾಪುರ್ ನಿವಾಸಿ ಹರ್ಷದ್ (25) ಬಂಧಿತ.
ಏನಿದು ಟನೆ?: ತಾಲೂಕಿನ ಪಾಕರಹಳ್ಳಿ ಹೊರ ವಲಯದ ಸಿಮೆಂಟ್ ಕಂಬಿ ತಯಾರಿಸುವ ಪ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಆರೋಪಿ, ಶುಕ್ರವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಸಮೀಪದ ತೋಟದ ಮನೆ ಬಳಿ ಬಂದು ಊಟ ಕೇಳಿದ್ದಾನೆ. ಸುನಂದಮ್ಮ ಊಟ ತಂದು ಮುಂದೆ ಇಡುತ್ತಿರುವಾಗ ಕತ್ತಿನಲ್ಲಿದ್ದ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾಗಿದ್ದ. ತಕ್ಷಣ ಟನೆ ಬಗ್ಗೆ ಪೊಲೀಸ್ ಇನ್ಸ್ಪೆಕ್ಟರ್ ದಯಾನಂದ್ ಅವರಿಗೆ ಮಾಹಿತಿ ನೀಡಿದ್ದರು.
ಕೋಲಾರ ಮುಖ್ಯ ರಸ್ತೆ ಕಡೆ ಗಸ್ತು ಮಾಡುತ್ತಿದ್ದ ಮಂಜುನಾಥ್, ಎ.ಮಂಜುನಾಥ್, ವಿಜಯಕುಮಾರ್, ಗಜೇಂದ್ರ ಘಟನೆ ನಡೆದ ಸ್ಥಳದ ಕಡೆ ಬಂದು ಆರೋಪಿಗಾಗಿ ಹುಡುಕಾಡಿದ್ದಾರೆ. ಈ ವೇಳೆ ಹಿಂದಿಯಲ್ಲಿ ಮಾತಾಡುತ್ತಿದ್ದ ವ್ಯಕ್ತಿಯನ್ನು ಗಮನಿಸಿದ ಕಾನ್ಸ್ಟೇಬಲ್, ಅನುಮಾನದ ಮೇಲೆ ಜೇಬು ಪರಿಶೀಲಿಸಿದಾಗ ಮಾಂಗಲ್ಯ ಸರ ಪತ್ತೆಯಾಗಿದೆ. ತಕ್ಷಣ ವಶಕ್ಕೆ ಪಡೆದಿದ್ದಾರೆ. ಘಟನೆ ಸ್ಥಳಕ್ಕೆ ಡಿವೈಎಸ್ಪಿ ಪಾಂಡುರಂಗ, ಪೊಲೀಸ್ ಇನ್ಸ್ಪೆಕ್ಟರ್ ದಯಾನಂದ್ ಭೇಟಿ ನೀಡಿ ಪಡಿಶೀಲಿಸಿದರು.