ದೇಶದ ಭದ್ರತೆ, ರಫೇಲ್​ ವಿಚಾರದ ಚರ್ಚೆಗೆ ಬನ್ನಿ ಎಂದರೆ ಮೋದಿ ಪುಕ್ಕಲರಂತೆ ಓಡಿ ಹೋಗುತ್ತಿದ್ದಾರೆ

ದೆಹಲಿ: ದೇಶದ ಭದ್ರತೆ ಮತ್ತು ರಫೇಲ್​ಗಳಂಥ ವಿಚಾರಗಳ ಬಗ್ಗೆ ಚರ್ಚೆಗೆ ಬನ್ನಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸವಾಲು ಎಸೆದರು ಅವರು ಓಡಿ ಹೋಗುತ್ತಾರೆ ಎಂದು ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿ ಅವರು ಇಂದು ವ್ಯಂಗ್ಯವಾಡಿದ್ದಾರೆ.

ದೆಹಲಿಯ ಜವಹರಲಾಲ್​ ನೆಹರೂ ಸ್ಟೇಡಿಯಂನಲ್ಲಿ ಕಾಂಗ್ರೆಸ್​ನ ಅಲ್ಪಸಂಖ್ಯಾತ ಘಟಕದ ವತಿಯಿಂದ ನಡೆಯುತ್ತಿರುವ ಸಮಾವೇಶದಲ್ಲಿ ಮಾತನಾಡಿರುವ ಅವರು, ” ನರೇಂದ್ರ ಮೋದಿ ಒಬ್ಬ ಪುಕ್ಕಲರು. ಅವರು ಚರ್ಚೆಗಳಿಂದ ದೂರಕ್ಕೆ ಓಡಿ ಹೋಗುತ್ತಾರೆ. ರಾಷ್ಟ್ರದ ಭದ್ರತೆ ಮತ್ತು ರಫೇಲ್​ನಂಥ ವಿಚಾರಗಳನ್ನು ಚರ್ಚೆಗೆತ್ತಿಕೊಂಡು ಅವರ ಪಕ್ಕಕ್ಕೆ ಯಾರಾದರೂ ಹೋದರೆ ಮೋದಿ ಓಡಿ ಹೋಗುತ್ತಾರೆ,” ಎಂದು ಅವರು ಟೀಕೆ ಮಾಡಿದರು.

ರಾಷ್ಟ್ರದ ಸಾಂವಿಧಾನಿಕ ಮತ್ತು ಸ್ವಾಯತ್ತ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂಬ ಆರೋಪಗಳನ್ನೂ ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ ರಾಹುಲ್​ ಗಾಂಧಿ, “ಭಾರತದ ಸಾಂವಿಧಾನಿಕ ಸಂಸ್ಥೆಗಳು ಯಾವ ಪಕ್ಷಗಳಿಗೂ ಸಂಬಂಧಿಸಿದ್ದಲ್ಲ. ಅವುಗಳು ದೇಶಕ್ಕೆ ಸಂಬಂಧಿಸಿದವು. ಅವುಗಳನ್ನು ರಕ್ಷಿಸುವುದು ನಮ್ಮ ಹೊಣೆ. ಅದು ಕಾಂಗ್ರೆಸ್​ ಆಗಿರಲಿ, ಯಾವುದೇ ಪಕ್ಷವಾಗಿರಲಿ ಸಾಂವಿಧಾನಿಕ ಸಂಸ್ಥೆಗಳ ರಕ್ಷಣೆ ನಮ್ಮ ಜವಾಬ್ದಾರಿ. ಆದರೆ, ಬಿಜೆಪಿ ರಾಷ್ಟ್ರಕ್ಕೂ ಮಿಗಿಲಾದ್ದು ಎಂದು ತನ್ನನ್ನು ಭಾವಿಸಿಕೊಂಡಿದೆ. ಆದರೆ, ಇನ್ನು ಮೂರು ತಿಂಗಳಲ್ಲಿ ದೇಶವೇ ಎಲ್ಲಕ್ಕೂ ಮಿಗಿಲು ಎಂದು ಬಿಜೆಪಿಗೆ ತಿಳಿಯಲಿದೆ,” ಎಂದು ಅವರು ಛಾಟಿ ಬೀಸಿದರು.

“ನರೇಂದ್ರ ಮೋದಿ ವಿರುದ್ಧ ನಾನು ಐದು ವರ್ಷಗಳಿಂದಲೂ ಹೋರಾಡುತ್ತಿದ್ದೇನೆ. ಈ ಅವಧಿಯಲ್ಲಿ ನಾನು ಅವರನ್ನು ತುಂಬಾ ಚೆನ್ನಾಗಿಯೇ ಅರ್ಥ ಮಾಡಿಕೊಂಡಿದ್ದೇನೆ. ರಫೇಲ್​ ವಿಚಾರವಾಗಿ 10 ನಿಮಿಷ ತಮ್ಮೊಂದಿಗೆ ಚರ್ಚೆಗೆ ಬನ್ನಿ ಎಂದು ಸವಾಲೆಸೆದ ರಾಹುಲ್​, ಚರ್ಚೆಗೆ ಆಹ್ವಾನಿಸಿದರೆ ಮೋದಿ ಓಡುತ್ತಾರೆ,” ಎಂದೂ ಕುಹಕವಾಡಿದರು.

One Reply to “ದೇಶದ ಭದ್ರತೆ, ರಫೇಲ್​ ವಿಚಾರದ ಚರ್ಚೆಗೆ ಬನ್ನಿ ಎಂದರೆ ಮೋದಿ ಪುಕ್ಕಲರಂತೆ ಓಡಿ ಹೋಗುತ್ತಿದ್ದಾರೆ”

  1. Not once, more than 3 times this issue has been discussed in Parliament. Entire country watched and also understood the facts on the Rafel deal. Still the crown prince says Modi runs away from discussion.

Comments are closed.