“ಲಂಚ ಕೇಳುವುದು, ಒಕ್ಕಲಿಗರ ಮನೆ ಹೆಣ್ಣು ಮಕ್ಕಳನ್ನು ಮಂಚಕ್ಕೆ ಕರೆಯುವುದು ಈತ. ಶೂಟಿಂಗ್ ಮಾಡಲು ಹೋಗಿ ಮೊಟ್ಟೆಯಲ್ಲಿ ಹೊಡೆಸಿಕೊಂಡು ಮೆಂಟಲ್ ಆಗಿದ್ದಾನೆ ಎಂದು ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ಮಾಜಿ ಸಂಸದ DK ಸುರೇಶ್ ವಾಗ್ದಾಳಿ ನಡೆಸಿದರು.

ಬೆಂಗಳೂರಿನ ಸದಾಶಿವನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ಆತನ ಬಗ್ಗೆ ಮಾತನಾಡಬಾರದು ಎಂದು ಇದ್ದರೆ ಇಲ್ಲದ್ದೇ ಮಾತನಾಡುತ್ತಿದ್ದಾನೆ. ಸಿದ್ದರಾಮಯ್ಯ, ಕುಮಾರಸ್ವಾಮಿ, ಶಿವಕುಮಾರ್ ಅವರ ಬಳಿ ಕಾಲು ಕಟ್ಟಿಕೊಳ್ಳುವುದನ್ನು ಮಾಡುತ್ತಾನೆ. ಈತನಿಗೆ ಮಾನ ಮರ್ಯಾದೆ ಇದೆಯಾ? ಪ್ರಧಾನಮಂತ್ರಿಗಳು ಹಾಗೂ ಅವರ ತಾಯಿ ಬಗ್ಗೆ ಹಾಡಿಹೊಗಳಿರುವ ವಿಡಿಯೋಗಳಿವೆ. ಪ್ರಧಾನಮಂತ್ರಿ ಮನೆಯಲ್ಲಿ 132 ಕೊಠಡಿಗಳಿವೆ ಆದರೂ ತಾಯಿ, ಹೆಂಡತಿಗೆ ಊಟ ಹಾಕಲು ಆಗುವುದಿಲ್ಲ ಎಂದವನು ಈತ. ತನ್ನ ಅಪ್ಪ ಅಮ್ಮನ ಸಮಾಧಿಗೆ ಪೂಜೆ ಮಾಡದವನು, ಬೇರೆಯವರ ಸಮಾಧಿಗೆ ಹೋಗಿ ಪೂಜೆ ಮಾಡುತ್ತಾನೆ. ಎಂತಹಾ ಕಲಾವಿದ? ಏನೆಲ್ಲಾ ಕಲಿತಿದ್ದಾನೆ ಅಬ್ಬಬ್ಬಾ” ಎಂದು ವಾಗ್ದಾಳಿ ನಡೆಸಿದರು.
ಆತ ರಾಜಕೀಯವಾಗಿ ಆರೋಪ ಮಾಡುತ್ತಿದ್ದು ಕಾನೂನು ರೀತಿಯ ಕ್ರಮ ಕೈಗೊಳ್ಳುತ್ತೀರಾ ಎಂದು ಕೇಳಿದಾಗ, “ನಾಯಿ ರೀತಿ ಬೊಗಳುವವರಿಗೆ ಕಾನೂನೇನಿದೆ? ಕಾನೂನು ಮೀರಿದ ವ್ಯಕ್ತಿ ಆತ. ಕಾನೂನು ಮಾಡುವ ಸ್ಥಳದಲ್ಲಿ ಅತ್ಯಾಚಾರ ಮಾಡುವವನಿಗೆ ಎಲ್ಲಪ್ಪಾ ಕಾನೂನು?” ಎಂದು ಕೇಳಿದರು.
ಹಳೇ ಸ್ನೇಹಿತರು ಮತ್ತೆ ಒಂದಾಗುತ್ತಾರಾ ಎಂದು ಕೇಳಿದಾಗ, “ಅಯ್ಯೋ ಶಿವ, ಪಾಂಡುರಂಗ ಆ ಪುಣ್ಯಾತ್ಮನ ಜತೆ ಮತ್ತೆ ಸ್ನೇಹ ಮಾಡಿದರೆ ಅಷ್ಟೇ. ಆತನಿಗೆ ಯಾರ ಮೇಲೂ ನಂಬಿಕೆ ಇಲ್ಲ. ಆತ ಅನುಮಾನದ ಪಿಶಾಚಿ” ಎಂದು ತಿಳಿಸಿದರು.
ಡಿಸಿಎಂ ಪೋಸ್ಟರ್ ನೋಡಿದರೆ ಶೋಲೆ ಪಿಚ್ಚರ್ ಅಮಿತಾಬ್ ಬಚ್ಚನ್, ಹೇಮಮಾಲಿನ ನೆನಪಾಗುತ್ತಾರೆ ಎಂಬ ಮುನಿರತ್ನ ಹೇಳಿಕೆ ಬಗ್ಗೆ ಕೇಳಿದಾಗ, “ಆತನಿಗೆ ರಾತ್ರಿಯಾದರೆ ಹೇಮಮಾಲಿನಿ ನೆನಪಾಗುತ್ತಾರೆ. ಅಮಿತಾಬ್ ಬಚ್ಚನ್ ಆತನ ಎದೆ ಮೇಲೆ ಕುಣಿಯುತ್ತಿರುವಂತೆ, ಗಬ್ಬರ್ ಸಿಂಗ್ ಆತನ ಮುಖಕ್ಕೆ ಗುದ್ದುತ್ತಿರುವಂತೆ ಭಾಸವಾಗುತ್ತದೆ. ಹೀಗಾಗಿ ಆತ ನಿದ್ದ ಬರಲ್ಲ ಎಂದು ಮಾತ್ರೆ ತೆಗೆದುಕೊಳ್ಳುತ್ತಾನೆ. ರಾತ್ರಿಯಾದರೆ ರಕ್ತ ಕಣ್ಣೀರು ಚಿತ್ರದ ಕೊನೆಯಲ್ಲಿ ಉಪೇಂದ್ರ ಆಡಿರುವ ರೀತಿ ಆಡುತ್ತಿರುತ್ತಾನೆ” ಎಂದು ವ್ಯಂಗ್ಯವಾಡಿದರು.
ನನ್ನ ಕಂಡರೆ ಯಾಕಿಷ್ಟು ದ್ವೇಷ ಎಂಬ ಮುನಿರತ್ನ ಹೇಳಿಕೆ ಬಗ್ಗೆ ಕೇಳಿದಾಗ, “ಆತ ನೀಚ ಹಾಗೂ ದ್ವೇಷ ರಾಜಕಾರಣಿ. ನಾನು ಇದುವರೆಗೂ ಎಂದಾದರೂ ಆತನ ಬಗ್ಗೆ ಮಾತನಾಡಿದ್ದೀನಾ. ನಮ್ಮ ವಿರುದ್ಧ ದೂರು ನೀಡಿದರೆ ಹಿರೋ ಆಗಬಹುದು ಎಂದು ಆತ ಭಾವಿಸಿದ್ದಾನೆ. ಗುತ್ತಿಗೆ ಸಿಗಲಿಲ್ಲ ಎಂದು ಇಡಿಗೆ ದೂರು ನೀಡಿದ್ದಾನೆ. ಅದನ್ನು ಬಿಟ್ಟು ಬೇರೇನು ಮಾಡಿದ್ದಾನೆ. ಕಳ್ಳ ಬಿಲ್ ಬರೆಸಿಕೊಂಡು ದರ್ಬಾರು ಮಾಡುತ್ತಿದ್ದ. ಈಗ ಎಲ್ಲವೂ ಬಿಗಿಯಾಗಿದೆ ಅದಕ್ಕೆ ಇಡಿಗೆ ದೂರು ನೀಡಿದ್ದಾನೆ” ಎಂದರು.