More

    ಚುನಾವಣೆ ಯಲ್ಲಿ ವೈಯಕ್ತಿಕ ತೇಜೋವಧೆ ಮಾಡಿಲ್ಲ

    ಯಲ್ಲಾಪುರ: ಕ್ಷೇತ್ರದಲ್ಲಿ ಪ್ರೀತಿ ಮತ್ತು ವಿಶ್ವಾಸದಿಂದ ಈ ಚುನಾವಣೆ ನಡೆದಿದ್ದು, ಪ್ರಜಾಪ್ರಭುತ್ವದ ಬಗೆಗೆ ಜನರಲ್ಲಿ ವಿಶ್ವಾಸ ಹೆಚ್ಚುವಂತೆ ಮಾಡಿದೆ ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.

    ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದಿನ ಉಪಚುನಾವಣೆಗಿಂತ ಈ ಬಾರಿ ಅಲ್ಪಮಟ್ಟಿಗೆ ಕಡಿಮೆ ಮತಗಳು ಬಂದಿವೆ. ಆದರೆ, ಉಪಚುನಾವಣೆಗೂ, ಮುಖ್ಯ ಚುನಾವಣೆಗೂ ಹೋಲಿಕೆ ಮಾಡಲು ಸಾಧ್ಯವಿಲ್ಲ.

    ಶೇ. 51ರಷ್ಟು ಮತ ನೀಡಿ, ಕ್ಷೇತ್ರದ ಜನತೆ ಪ್ರೀತಿ ತೋರಿದ್ದಾರೆ. ಅವರಿಗೆ ಆಭಾರಿಯಾಗಿದ್ದೇನೆ ಎಂದರು.
    ವ್ಯಕ್ತಿಗಳ ದ್ವೇಷ, ವೈಯಕ್ತಿಕ ತೇಜೋವಧೆ ಮಾಡುವ ಮಾತನ್ನು ಆಡಿಲ್ಲ. ನಾನು ಮಾಡಿದ ಅಭಿವೃದ್ಧಿ ಕಾರ್ಯ ಹಾಗೂ ಮಾಡುವ ಕಾರ್ಯಗಳ ಬಗ್ಗೆ ಮಾತ್ರ ಮಾತನಾಡಿ ಚುನಾವಣೆ ಎದುರಿಸಿದ್ದೇನೆ. ಆದರಿಂದಲೇ ಗೆಲುವಾಗಿದೆ ಎಂದರು.

    ಹಿಂದೆ ಮೂರು ಬಾರಿ ಶಾಸಕನಾದರೂ ಆಡಳಿತ ಪಕ್ಷದಲ್ಲಿದ್ದೆ. ಇದೀಗ ಮೊದಲ ಬಾರಿ ವಿರೋಧ ಪಕ್ಷದ ಶಾಸಕನಾಗಿ ಕಾರ್ಯನಿರ್ವಹಿಸಬೇಕಾಗಿದೆ. ನಾನು ಸಚಿವನಾಗಿದ್ದಾಗಲೂ ವಿರೋಧ ಪಕ್ಷದ ಶಾಸಕರಿಗೆ ಅನುದಾನ ನೀಡುವಲ್ಲಿ ಬೇಧ ಮಾಡಿಲ್ಲ.

    ಯಾರೇ ಮುಖ್ಯಮಂತ್ರಿ ಆದರೂ ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ಹೋರಾಡಿ, ಅನುದಾನ ತರುತ್ತೇನೆ ಎಂದರು.
    ಸರ್ಕಾರದಲ್ಲಿ ಪ್ರಭಾವ, ಸ್ನೇಹ, ಆತ್ಮೀಯತೆಯ ಆಧಾರದ ಮೇಲೆ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತೇನೆ. ವಿರೋಧ ಪಕ್ಷದಲ್ಲಿರುವುದು ಕ್ಷೇತ್ರದ ಅಭಿವೃದ್ಧಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ನೂತನ ಸರ್ಕಾರದಿಂದ ರಾಜ್ಯ ಅಭಿವೃದ್ಧಿಯ ಪಥದಲ್ಲಿ ಸಾಗಲಿ. ಕಾಂಗ್ರೆಸ್ ಕೊಟ್ಟ ಮಾತನ್ನು ಉಳಿಸಿಕೊಳ್ಳುವಂತೆ ಆಗಾಗ ಎಚ್ಚರಿಸುತ್ತ, ತಪ್ಪಿದಲ್ಲಿ ಹೋರಾಟ ಮಾಡುತ್ತ ವಿರೋಧ ಪಕ್ಷವಾಗಿ ಬಿಜೆಪಿ ಸಮರ್ಥವಾಗಿ ಕಾರ್ಯನಿರ್ವಹಿಸಲಿದೆ ಎಂದರು.
    ಪ.ಪಂ. ಅಧ್ಯಕ್ಷ ಸುನಂದಾ ದಾಸ, ಉಪಾಧ್ಯಕ್ಷೆ ಶ್ಯಾಮಿಲಿ ಪಾಟಣಕರ, ಪ್ರಮುಖರಾದ ಉಮೇಶ ಭಾಗ್ವತ, ಮುರಳಿ ಹೆಗಡೆ, ಶಿರೀಷ ಪ್ರಭು, ರಾಮು ನಾಯ್ಕ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts