More

    ಗೃಹ ಸಚಿವ ಅಮಿತ್ ಷಾ ಹೆಸರಲ್ಲಿ ಕರೆ ಮಾಡಿದವನ ಸೆರೆ

    ನವದೆಹಲಿ: ವೈದ್ಯಕೀಯ ವಿಶ್ವವಿದ್ಯಾಲಯದ ಕುಲಪತಿಯಾಗಿ ತನ್ನ ಸ್ನೇಹಿತನನ್ನು ನೇಮಕ ಮಾಡಿಸಲು ಗೃಹ ಸಚಿವ ಅಮಿತ್ ಷಾ ಹೆಸರಿನಲ್ಲಿ ಮಧ್ಯಪ್ರದೇಶ ರಾಜ್ಯಪಾಲರಿಗೆ ಕರೆ ಮಾಡಿದ್ದ ಭಾರತೀಯ ವಾಯುಪಡೆ ಅಧಿಕಾರಿಯೊಬ್ಬನನ್ನು ವಿಶೇಷ ಕಾರ್ಯಪಡೆ (ಎಸ್​ಟಿಎಫ್) ಅಧಿಕಾರಿಗಳು ಬಂಧಿಸಿದ್ದಾರೆ.

    ವಾಯುಪಡೆಯ ವಿಂಗ್ ಕಮಾಂಡರ್ ಕುಲದೀಪ್ ಭಗೇಲಾ ತನ್ನ ಸ್ನೇಹಿತ ಚಂದ್ರೇಶ್ ಕುಮಾರ್ ಶುಕ್ಲಾರನ್ನು ವೈದ್ಯಕೀಯ ವಿಶ್ವವಿದ್ಯಾಲಯವೊಂದಕ್ಕೆ ಕುಲಪತಿಯನ್ನಾಗಿ ನೇಮಕ ಮಾಡುವಂತೆ ಮಧ್ಯಪ್ರದೇಶ ರಾಜ್ಯಪಾಲ ಲಾಲ್​ಜೀ ಟಂಡನ್​ರಿಗೆ ಅಮಿತ್ ಷಾ ಹೆಸರಲ್ಲಿ ಕರೆ ಮಾಡಿದ್ದ. ಈ ವೇಳೆ ಶುಕ್ಲಾ ಕೂಡ ಮೊಬೈಲ್ ಕರೆಯಲ್ಲಿ ತನ್ನನ್ನು ಅಮಿತ್ ಷಾ ಅವರ ಪರ್ಸನಲ್ ಅಸಿಸ್ಟಂಟ್ ಎಂದು ಪರಿಚಯಿಸಿಕೊಂಡು ಮಾತನಾಡಿದ್ದ. ಈ ಹಿನ್ನೆಲೆಯಲ್ಲಿ ವಿಶೇಷ ಕಾರ್ಯಪಡೆ (ಎಸ್​ಟಿಎಫ್) ಅಧಿಕಾರಿಗಳು ಕುಲದೀಪ್ ಭಗೇಲಾ ಮತ್ತು ಶುಕ್ಲಾರನ್ನು ವಶಕ್ಕೆ ಪಡೆದಿದ್ದಾರೆ.

    ಕುಲದೀಪ್ ಪ್ರಸ್ತುತ ವಾಯುಪಡೆಯ ದೆಹಲಿ ಮುಖ್ಯಕಚೇರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಈ ಹಿಂದೆ ಮಧ್ಯಪ್ರದೇಶದ ಮಾಜಿ ರಾಜ್ಯಪಾಲರಾದ ರಾಮ್ರೇಶ್ ಯಾದವ್​ರಿಗೆ ಎಡಿಸಿಯಾಗಿ ಮೂರು ವರ್ಷಗಳ ಕಾಲ ನೇಮಕ ಮಾಡಲಾಗಿತ್ತು ಎಂದು ತಿಳಿದುಬಂದಿದೆ. ವೈದ್ಯಕೀಯ ವಿವಿಗೆ ಕುಲಪತಿಯಾಗಬೇಕೆಂದು ಬಯಸಿದ್ದ ಭೋಪಾಲ್ ಮೂಲದ ದಂತವೈದ್ಯ ಶುಕ್ಲಾ, ತನ್ನ ಸ್ನೇಹಿತ ಕುಲದೀಪ್ ಬಳಿ

    ಯಾರಾದರೂ ದೊಡ್ಡ ವ್ಯಕ್ತಿಗಳು ಶಿಫಾರಸು ಮಾಡಿದರೆ ಕೆಲಸವಾಗುತ್ತದೆ ಎಂದಿದ್ದ. ಬಳಿಕ ಇಬ್ಬರೂ ಪ್ಲಾನ್ ಮಾಡಿ ಗೃಹ ಸಚಿವ ಅಮಿತ್ ಷಾ ಅವರ ರೀತಿ ಮಾತನಾಡಿ ಕುಲಪತಿ ಹುದ್ದೆಗೆ ಬೇಡಿಕೆ ಇಟ್ಟಿದ್ದರು ಎಂದು ಎಸ್​ಟಿಎಫ್​ನ ಎಡಿಜಿ ಅಶೋಕ್ ಅವಸ್ಥಿ ತಿಳಿಸಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts