ಮುಂಬೈ: ಸಿನಿಮಾ ನಟ-ನಟಿಯರು ಎಂದರೆ ಅಭಿಮಾನಿಗಳಿಗೆ ಸಖತ್ ಕ್ರೇಜ್ ಇರುತ್ತದೆ. ಸಿನಿಮಾ ಕಲಾವಿಧರನ್ನು ಭೆಟಿಯಾಗಲು ಅಭಿಮಾನಿಗಳು ಸ್ಟಾರ್ಗಳ ಮನೆ ಮುಂದೆ ನಿಲ್ಲುವುದು, ಟ್ಯಾಟು ಹಾಕಿಸಿಕೊಳ್ಳುವುದು ಹಾಗೂ ಫೋಟೋ ತೆಗೆಸಿಕೊಳ್ಳಲು ಮುನ್ನುಗ್ಗುವುದನ್ನು ಕೇಳಿದ್ದೇವೆ. ಆದರೆ ಇಲ್ಲೊಬ್ಬ ಹುಚ್ಚು ಅಭಿಮಾನಿ ಮಾಡಿದ ಕೆಲಸವನ್ನು ಖ್ಯಾತ ನಟಿಯೇ ಹೇಳಿಕೊಂಡಿದ್ದಾರೆ.
ನಟಿ ಪೂಜಾ ಬೇಡಿ ಅವರು ಇತ್ತೀಚೆಗೆ ಕಪಿಲ್ ಶರ್ಮಾ ಶೋಗೆ ಆಗಮಿಸಿದ್ದ ನಟಿ ತಮ್ಮ ಅಪ್ಪಟ ಅಭಿಮಾನಿಯೊಬ್ಬರ ಬಗ್ಗೆ ಮಾತನಾಡಿ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ. ಈ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸುದ್ದಿಯಲ್ಲಿದೆ.
‘ಅನೈಸ್ ಹೆಸರಿನ ಯುವಕನೊಬ್ಬ ಅಪ್ಪಟ ಅಭಿಮಾನಿಯಾಗಿದ್ದನು. ದಿನಕ್ಕೆ 1000 ಬಾರಿ ಲ್ಯಾಂಡ್ಲೈನ್ಗೆ ಕರೆ ಮಾಡುತ್ತಿದ್ದ. ನೂರಾರು ಪತ್ರಗಳನ್ನು ಪೂಜಾಗೆ ಬರೆದಿದ್ದನು ಅದೂ ರಕ್ತದಲ್ಲಿ. ಒಮ್ಮೆ ಮನೆಗೆ ನುಗ್ಗಿಬಿಟ್ಟಿದ್ದ. ಅದೂ ತಮ್ಮದೇ ಬಿಕಿನಿಯೊಂದನ್ನು ಹಿಡಿದುಕೊಂಡು. ಇದನ್ನು ಕಂಡಾಗ ನನಗೆ ಆಶ್ಚರ್ಯವಾಯಿತ್ತು’ ಎಂದಿದ್ದಾರೆ.
‘ಲುಟೇರ ಸಿನಿಮಾದಲ್ಲಿ ನಾನು ಧರಿಸಿದ್ದ ಬಿಕಿನಿಯನ್ನು ಹರಾಜು ಹಾಕಲಾಗಿತ್ತಂತೆ. ಆ ಹರಾಜಿನಲ್ಲಿ ಬಿಕಿನಿಯನ್ನು ಯುವಕ ಅನೀಸ್ ಖರೀದಿಸಿ ಅದೇ ಬಿಕಿನಿಯನ್ನು ಹಿಡಿದುಕೊಂಡು ಮನೆಗೆ ನುಗ್ಗಿದ್ದ. ಅಂದು ಆತನನ್ನು ಕುಳ್ಳಿರಿಸಿಕೊಂಡು ಆತನಿಗೆ ಬುದ್ಧಿವಾದ ಹೇಳುವ ಪ್ರಯತ್ನವನ್ನು ಪೂಜಾ ಮಾಡಿದೆ. ಆದರೆ ಪ್ರಯತ್ನ ವ್ಯರ್ಥವಾಯಿತಂತೆ. ಬಿಕಿನಿಯನ್ನು ಖರೀದಿಸಿದ್ದೇಕೆಂದು ಕೇಳಿದರೆ, ನಿನ್ನನ್ನು ತಬ್ಬಿಕೊಳ್ಳಲು ಆಗುತ್ತಿಲ್ಲವಲ್ಲ, ನಿನ್ನ ಬಿಕಿನಿಯನ್ನಾದರೂ ತಬ್ಬಿಕೊಳ್ಳಲು ಖರೀದಿಸಿದೆ ಎಂದಿದ್ದನು. ನಾನು ಮದುವೆ ಆಗುವರೆಗೂ ಇವನಿಂದ ಸಮಸ್ಯೆ ಆಗುತ್ತಲೇ ಇತ್ತು ಎಂದು’ ಹೇಳಿಕೊಂಡಿದ್ದಾರೆ.
ನಟ ಕಬೀರ್ ಬೇಡಿ ಹಾಗೂ ಪ್ರೋತಿಮಾ ಬೇಡಿಯ ಪುತ್ರಿ ಪೂಜಾ ಬೇಡಿ, 1991ರಲ್ಲಿ ವಿಷಕನ್ಯಾ ಸಿನಿಮಾದ ಮೂಲಕ ಬಾಲಿವುಡ್ಗೆ ಪದಾರ್ಪಣೆ ಮಾಡಿದರು. ಅದಾದ ಬಳಿಕ ಹಲವು ಸಿನಿಮಾಗಳಲ್ಲಿ ಬೋಲ್ಡ್ ಪಾತ್ರಗಳಲ್ಲಿ ಪೂಜಾ ಕಾಣಿಸಿಕೊಂಡರು. ಪೂಜಾ ಬೇಡಿ ಮತ್ತು ಫರ್ಹಾನ್ ಫರ್ನಿಚರ್ವಾಲಾ ಅವರು ಮೇ 6, 1994 ರಂದು ವಿವಾಹವಾದರು. ಮದುವೆಯಾಗುವ ಮೊದಲು, ಜೋಡಿಯು ಮೂರೂವರೆ ವರ್ಷಗಳ ಕಾಲ ಡೇಟಿಂಗ್ ಮಾಡಿತು. 12 ವರ್ಷಗಳ ನಂತರ, ಜೋಡಿ ದೂರವಾದರು. 2019 ರಲ್ಲಿ ಮಾಣಿಕ್ ಕಂಟ್ರ್ಯಾಕ್ಟರ್ ಜೊತೆ ಲಿವಿನ್ ರಿಲೇಶನ್ಶಿಪ್ನಲ್ಲಿ ಪೂಜಾ ಇದ್ದಾರೆ.
10 ವರ್ಷ ಹಿಂದೆಯೇ ತನಗಿಂತ 21 ವರ್ಷ ಹಿರಿಯ ರಾಜಕಾರಣಿಯನ್ನು ಮದುವೆಯಾದ ನಟಿ