More

    ಎಚ್​ಡಿಕೆಗೆ ಕೃಷಿ, ನೀರಾವರಿ ಖಾತೆ ಖಚಿತ

    ಕೋಲಾರ: ಲೋಕಸಭಾ ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳ ಪೈಕಿ ಹೆಚ್ಚಿನ ಮತಗಳನ್ನು ಮುಳಬಾಗಿಲು ಕ್ಷೇತ್ರದಿಂದ ಪಡೆಯಲು ಜೆಡಿಎಸ್​-ಬಿಜೆಪಿ ಮುಖಂಡರು, ಕಾರ್ಯಕರ್ತರು ಮತದಾರರ ಸಹಕಾರ ಸಾಧ್ಯವಾಗಿದೆ ಎಂದು ಶಾಸಕ ಸಮೃದ್ಧಿ ವಿ.ಮಂಜುನಾಥ್​ ತಿಳಿಸಿದರು.

    ಮುಳಬಾಗಿಲು ನಗರದ ಶಾಸಕರ ಗೃಹಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸುವಂತೆ ಎಂ.ಮಲ್ಲೇಶ್​ಬಾಬು ಅವರಿಗೆ ಸಲಹೆ ನೀಡಿದ್ದ ಜತೆಗೆ ಅಭ್ಯರ್ಥಿಯಾದ ಬಳಿಕ ಅವರ ಗೆಲುವಿಗೆ ಪ್ರಾಮಾಣಿಕವಾಗಿ ಶ್ರಮಿಸಿದ್ದೇನೆ ಎಂದರು.
    ಜೆಡಿಎಸ್​ ನಗರಸಭಾ ಸದಸ್ಯರಿರುವ ವಾರ್ಡ್​ನಲ್ಲಿ ಕೇವಲ 5ರಿಂದ 6 ಮತಗಳು ಬಂದಿವೆ. ಅವರ ಕುಟುಂಬದ ಮತಗಳು ಸಹ ಬಂದಿಲ್ಲ. ಅದೇ ರೀತಿ ಒಂದೆರಡು ಜಾತಿ ಮತಗಳು ನಮಗೆ ಲಭಿಸಿಲ್ಲ. ಇದನ್ನು ಸರಿಪಡಿಸುವ ಪ್ರಯತ್ನ ಮಾಡಬೇಕು ಎಂದರು.
    ಕೇಂದ್ರದಲ್ಲಿ ಪ್ರಧಾನಿ ನರೇಂದ್ರಮೋದಿ ನೇತೃತ್ವದಲ್ಲಿ 3ನೇ ಅವಧಿಗೆ ಸರ್ಕಾರ ರಚನೆಯಾಗುತ್ತಿದ್ದು, ಮಂಡ್ಯದ ವಿಜೇತ ಅಭ್ಯರ್ಥಿ ಎಚ್​.ಡಿ.ಕುಮಾರಸ್ವಾಮಿ ಅವರಿಗೆ ಕೃಷಿ ಮತ್ತು ಕೇಂದ್ರ ನೀರಾವರಿ ಖಾತೆ ಸಚಿವ ಸ್ಥಾನಮಾನ ಸಿಗುವುದು ಖಚಿತ ಎಂದು ಭವಿಷ್ಯ ನುಡಿದರು.

    • ಕೇಂದ್ರದಿಂದ 238 ಕೋಟಿ ಬಿಡುಗಡೆ
      ತಾಲೂಕಿನಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳು ಹಿಂದಿನ ಬಿಜೆಪಿ ಸರ್ಕಾರ ಶೇ.60, ಈಗಿನ ಕಾಂಗ್ರೆಸ್​ ಸರ್ಕಾರದ ಶೇ.40 ಅನುದಾನದಲ್ಲಿ ನಡೆಯುತ್ತಿವೆ. ಸಚಿವ ಜಮೀರ್​ ಅಹ್ಮದ್​ ಖಾನ್​ ಮುಳಬಾಗಿಲು ಕ್ಷೇತ್ರದ ಅಲ್ಪಸಂಖ್ಯಾತರಿಗೆ ಅನುದಾನ ಬಿಡುಗಡೆ ಮಾಡಿಲ್ಲ. ಕ್ಷೇತ್ರಗಳಿಗೆ ತಲಾ <10 ಕೋಟಿ ಅನುದಾನ ಬಿಡುಗಡೆ ಮಾಡಿದ್ದಾರೆ. ಮುಳಬಾಗಿಲಿನಲ್ಲಿ ಮುಸ್ಲಿಮರು ಇಲ್ಲವೇ ಎಂದು ಪ್ರಶ್ನಿಸಿದರು.
      ಜೆಡಿಎಸ್​ ಮುಖಂಡರಾದ ವಿ.ರಘುಪತಿರೆಡ್ಡಿ, ಎನ್​.ಆರ್​.ಸತ್ಯಣ್ಣ, ಶ್ರೀನಿವಾಸ್​, ಎಂ.ಆರ್​.ನಾಗಭೂಷಣ, ಗ್ಯಾಸ್​ ರಘು, ನಾಗೇಶ್​, ನಾಗಮಂಗಲ ಶಂಕರಪ್ಪ, ಬೇವಹಳ್ಳಿ ಶಶಿಕಾಂತ್​, ಪಿ.ರಾಮಚಂದ್ರಯ್ಯ, ನಗರಸಭಾ ಸದಸ್ಯರಾದ ಎಂ.ಪ್ರಸಾದ್​, ಸೈಯಾದ್​ ವಜೀರ್​, ಮತ್ತಿತರರ ಮುಖಂಡರು ಇದ್ದರು.
    See also  ಮನೆಗಳಿಗೇ ದಿನಸಿ ಪೂರೈಸಿ - ಸಚಿವ ಸುರೇಶ ಅಂಗಡಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts