ಗ್ರಾಮಗಳ ಪರಿಸ್ಥಿತಿ ಬಗ್ಗೆ ಕಣ್ಣು ತೆರೆಸಿದ್ದಕ್ಕೆ ‘ದಿಗ್ವಿಜಯ ನ್ಯೂಸ್’​ಗೆ ಧನ್ಯವಾದ: ಎಚ್​ಡಿಕೆ

ಬೆಂಗಳೂರು: ‘ದಿಗ್ವಿಜಯ ನ್ಯೂಸ್​​’ನಲ್ಲಿ ಗ್ರಾಮ ವಾಸ್ತವ್ಯದ ವರದಿ ಕುರಿತು ‘ಮತ್ತೆ ಬನ್ನಿ ಕುಮಾರಸ್ವಾಮಿ’ ಎಂಬ ಶೀರ್ಷಿಕೆಯಡಿ ವರದಿಗಳನ್ನು ಪ್ರಸಾರ ಮಾಡಲಾಗಿದೆ. ಅಲ್ಲಿನ ಪರಿಸ್ಥಿತಿ ಬಗ್ಗೆ ನಮ್ಮ ಕಣ್ಣು ತೆರೆಸಿದ್ದಕ್ಕೆ ಧನ್ಯವಾದ ಎಂದು ಸಿಎಂ ಎಚ್​ಡಿ ಕುಮಾರಸ್ವಾಮಿ ದಿಗ್ವಿಜಯ ನ್ಯೂಸ್​ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿ, ನಾನು 12 ವರ್ಷಗಳ ಹಿಂದೆ ಮುಖ್ಯಮಂತ್ರಿಯಾಗಿದ್ದಾಗ, ಕೆಲವು ಕಾಮಗಾರಿಗಳನ್ನು ಮಾತ್ರ ಮುಕ್ತಾಯಗೊಳಿಸಿ, ಇನ್ನು ಹಲವಾರು ಕೆಲಸಗಳು ಬಾಕಿಯಿವೆ ಎಂಬುದನ್ನು ನಿಮ್ಮ ಮಾಧ್ಯಮ ಬೆಳಕಿಗೆ ತಂದಿದೆ. ಇದಕ್ಕೆ ನಿಮಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಹಾಗೆಯೇ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿನ ಗ್ರಾಮಸ್ತರ ಭಾವನೆಗಳಿಗೆ ಸ್ಪಂದಿಸಿ, ಮುಂದಿನ ದಿನಗಳಲ್ಲಿ ಅವರ ಸಂಪೂರ್ಣ ನಿರೀಕ್ಷೆಗಳೇನಿವೆ ಅವುಗಳನ್ನು ಕಾರ್ಯರೂಪಕ್ಕೆ ತರಲಾಗುವುದು ಎಂದರು. (ದಿಗ್ವಿಜಯ ನ್ಯೂಸ್​)