ನಾನು ನಿರಾಳವಾಗಿದ್ದೇನೆ, ಎಲ್ಲವನ್ನೂ ಎಂಜಾಯ್​ ಮಾಡುತ್ತಿದ್ದೇನೆ: ಸಿಎಂ ಎಚ್​ಡಿಕೆ

ಬೆಂಗಳೂರು: ಪಕ್ಷೇತರ ಶಾಸಕರಾಗಿದ್ದ ಎಚ್​. ನಾಗೇಶ್ ಮತ್ತು ಆರ್​. ಶಂಕರ್​​ ಮೈತ್ರಿ ಸರ್ಕಾರಕ್ಕೆ ನೀಡಿದ್ದ ಬೆಂಬಲ ಹಿಂಪಡೆದಿದ್ದಕ್ಕೆ ಸಿಎಂ ಎಚ್​.ಡಿ.ಕುಮಾರಸ್ವಾಮಿ ‘ಐ ಆಮ್​ ಎಂಜಾಯಿಂಗ್​’ ಎಂದಿದ್ದಾರೆ.

ಸುದ್ದಿಗಾರರಿಗೆ ಪ್ರತಿಕ್ರಿಯಿಸಿರುವ ಎಚ್​ಡಿಕೆ, ಇಬ್ಬರು ಶಾಸಕರು ಬೆಂಬಲ ಹಿಂಪಡೆದರೆ ನಂಬರ್​ ಎಷ್ಟಾಗುತ್ತದೆ? ನಾನು ಸಂಪೂರ್ಣವಾಗಿ ನಿರಾಳವಾಗಿದ್ದೇನೆ (I am totally relaxed)​. ನನ್ನ ಶಕ್ತಿ ಏನೆಂಬುದು ನನಗೆ ಗೊತ್ತು ಎಂದಿದ್ದಾರೆ.

ಜತೆಗೆ ಕಳೆದ ವಾರದಿಂದ ಮಾಧ್ಯಮಗಳಲ್ಲಿ ಏನೆಲ್ಲಾ ಪ್ರಸಾರವಾಗುತ್ತಿದೆ ಎಲ್ಲವನ್ನೂ ನಾನು ಎಂಜಾಯ್​ ಮಾಡುತ್ತಿದ್ದೇನೆ. ಐ ಆಮ್​ ಎಂಜಾಯಿಂಗ್​ ಎಂದಿದ್ದಾರೆ. (ಏಜೆನ್ಸೀಸ್)