More

  ಒಕ್ಕಲಿಗರನ್ನೇ ತುಳಿದಿದ್ದೇ ಸಿದ್ದರಾಮಯ್ಯ: ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಕಿಡಿ

  ಮಂಡ್ಯ: ಒಕ್ಕಲಿಗ ಸಮುದಾಯವನ್ನು ತುಳಿದವರು ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಟೀಕಿಸಿದರು.
  ತಾಲೂಕಿನ ಹೊಳಲು ಗ್ರಾಮದಲ್ಲಿ ಮಾಜಿ ಶಾಸಕ ಡಾ.ಎಚ್.ಡಿ.ಚೌಡಯ್ಯ ಅವರ ಸಮಾಧಿಗೆ ಪೂಜೆ ಸಲ್ಲಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಕ್ಕಲಿಗರ ಪರವಾಗಿ ಹೋರಾಟ ಮಾಡಿರುವ ವ್ಯಕ್ತಿಗಳಿಗೆ ನೀವು ಟಿಕೆಟ್‌ ಕೊಟ್ಟಿದ್ದೀರಾ ಎಂದು ಪ್ರಶ್ನಿಸಿದರು. ರಾಜ್ಯದಲ್ಲಿ ಯಾವ ಕ್ಷೇತ್ರದಲ್ಲಿಯಾದರೂ ಚುನಾವಣೆಗೆ ಸ್ಪರ್ಧಿಸುವ ಹಕ್ಕಿದೆ. ನೀವು ರಾಹುಲ್‌ ಗಾಂಧಿ ಕರೆತಂದು ವಯನಾಡಿನಲ್ಲಿ ನಿಲ್ಲಿಸಿದ್ದು, ಸಿದ್ದರಾಮಯ್ಯ ಬಾದಾಮಿಗೆ ಹೋಗಿ ಸ್ಪರ್ಧೆ ಮಾಡಿದ್ದು ಸುಳ್ಳೇ ಎಂದು ಕಿಡಿಕಾರಿದರು.
  ಜಾತಿ ಹೆಸರಿನಲ್ಲಿ ಕಾಂಗ್ರೆಸ್ ರಾಜಕೀಯ ಮಾಡುತ್ತಿದೆ.
  ಕಾಂಗ್ರೆಸ್‌ನಲ್ಲಿ ಎಂಟು ಜನರಿಗೆ ಚುನಾವಣೆ ಸ್ಪರ್ಧಿಸಲು ಟಿಕೆಟ್‌ ಕೊಟ್ಟಿದ್ದೇವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳುತ್ತಾರೆ. ಎಂತಹ ಒಕ್ಕಲಿಗರಿಗೆ ನೀವು ಕೊಟ್ಟಿರುವ ಟಿಕೆಟ್‌ ಅನ್ನು ಒಕ್ಕಲಿಗರ ಪರವಾಗಿ ಧ್ವನಿ ಎತ್ತಿದವರಿಗೆ ಹೋರಾಟ ಮಾಡಿದವರಿಗೆ ನೀಡಿದ್ದೀರಾ, ನೀವು ಯಾರಿಗೆ ಟಿಕೆಟ್‌ ಕೊಟ್ಟಿದ್ದೀರಾ ಎನ್ನುವುದು ಜನತೆಗೂ ತಿಳಿದಿದೆ ಎಂದರು.
  ಜಿಲ್ಲೆಯಲ್ಲಿ ಗದ್ದೆಯಲ್ಲಿ ಕಬ್ಬು ಒಣಗುತ್ತಿದೆ. ಪರಿಣಾಮ ಬೆಂಕಿ ಇಡುವ ಸ್ಥಿತಿಗೆ ಬಂದಿದ್ದಾರೆ. ಒಕ್ಕಲಿಗರ ಟ್ರಂಪ್‌ ಕ್ರಾಡ್‌ ಬಳಸಿ ಪೆನ್ನು ಪೇಪರ್‌ ಕೇಳಿ ರಾಜಕೀಯ ಮಾಡುತ್ತೀರಾ. ನೀರಾವರಿ ಪ್ರದೇಶಕ್ಕೆ ನೀರು ಬಿಡಲು ಆಗಲಿಲ್ಲ. ಸಿದ್ದರಾಮಯ್ಯ ಅವರು ಒಕ್ಕಲಿಗರ ಸಮಾಜವನ್ನು ತುಳಿದಿರುವುದು ಮೈಸೂರಿನ ಜನತೆಗೆ ಹಾಗೂ ರಾಜ್ಯದ ಒಕ್ಕಲಿಗರಿಗೆ ಗೊತ್ತಿದೆ ಎಂದು ಟೀಕಿಸಿದರು.
  ಮೈಷುಗರ್‌ ಕಾರ್ಖಾನೆಯನ್ನು ಪುನಶ್ಚೇತನ ಗೊಳಿಸುತ್ತೇವೆ ಎಂದು ಹೇಳಿದ ಕಾಂಗ್ರೆಸ್‌ ಸರ್ಕಾರ ಒಂದೇ ಒಂದು ರೂಪಾಯಿಯನ್ನು ಬಜೆಟ್‌ನಲ್ಲಿ ಮೀಸಲಿಟ್ಟಿಲ್ಲ, ಕೇವಲ ಬಾಯಿ ಮಾತಿಗೆ ಹೇಳಿದರೆ ಸಾಕೆ?. ಕೇವಲ ಘೋಷಣೆಗಷ್ಟೇ ನಿಮ್ಮ ಹೇಳಿಕೆ ಇದೆ. ಮೈಷುಗರ್‌ ಆಸ್ತಿ ಮಾರಾಟ ಮಾಡಿ ಹೊಸ ಕಾರ್ಖಾನೆ ಕಟ್ಟುತ್ತೀರಾ ಎಂದು ಹರಿಹಾಯ್ದರು.
   
   
   
   
  See also  ಆಧುನಿಕ ಮಹಿಳಾ ಸಾಹಿತ್ಯ ಓದುವುದು ಅಗತ್ಯ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts