ಬ್ಯಾಂಕ್​ಗೆ ರೂ. 11 ಕೋಟಿ ವಂಚನೆ: ಎಚ್​ಡಿಎಫ್​ಸಿ ಬ್ಯಾಂಕ್ ಅಧಿಕಾರಿ ದೂರು

ಬೆಂಗಳೂರು: ಉದ್ಯಮಿಗಳ ಸೋಗಿನಲ್ಲಿ ಬ್ಯಾಂಕ್​ಗೆ ನಕಲಿ ದಾಖಲೆ ಸಲ್ಲಿಸಿ 11.34 ಕೋಟಿ ರೂ. ಸಾಲ ಪಡೆದು ವಂಚಿಸಿದ್ದಾರೆಂದು ಮೂವರ ವಿರುದ್ಧ ಅಶೋಕ್​ನಗರ ಪೊಲೀಸ್ ಠಾಣೆಯಲ್ಲಿ ಎಚ್​ಡಿಎಫ್​ಸಿ ಬ್ಯಾಂಕ್​ನ ಡೆಪ್ಯೂಟಿ ವೈಸ್ ಪ್ರ್ರೆಸಿಡೆಂಟ್ ಶ್ರೀಧರ್ ದೂರು ದಾಖಲಿಸಿದ್ದಾರೆ.

ಪಶ್ಚಿಮ ಬಂಗಾಳ ಮೂಲದ ಮನೋರಂಜನ್ ರಾಯ್, ಸುಬ್ರತ್ ಬಸು, ಪಾಥೋ ಬಸು ಆರೋಪಿಗಳು. ರಿಚ್ಮಂಡ್ ರಸ್ತೆಯಲ್ಲಿರುವ ಎಚ್​ಡಿಎಫ್​ಸಿ ಬ್ಯಾಂಕ್​ನ ಅಧಿಕಾರಿ ನೀಡಿದವರು.

2017 ಮೇ ತಿಂಗಳಲ್ಲಿ ಬ್ಯಾಂಕ್​ಗೆ ಬಂದಿದ್ದ ಮೂವರು ಆರೋಪಿಗಳು ಪಿನ್ ಕಾನ್ ಲೈಫ್ ಸ್ಟೈಲ್ ಲಿ. (ಪಿಎಲ್​ಎಲ್)ನ ನಿರ್ದೇಶಕರೆಂದು ಹಾಗೂ ತಮ್ಮ ಕಂಪನಿ ರಫ್ತು ವ್ಯವಹಾರ ನಡೆಸುತ್ತಿರುವುದಾಗಿ ಹೇಳಿದ್ದರು. ಭಜರಂಗಿ ರೋಡ್​ವೇಸ್ ಮೂಲಕ ಬಾಂಗ್ಲಾದೇಶಕ್ಕೆ ಕೆಂಪು ಮೆಣಸಿನಕಾಯಿ ರಪ್ತು ಮಾಡುತ್ತಿರುವುದಾಗಿ ನಂಬಿಸಿದ್ದರು.

ಭಜರಂಗಿ ರೋಡ್​ವೇಸ್ ನೀಡಿರುವಂತೆ ನಕಲಿ ಬಿಲ್, ಶಿಪ್ಪಿಂಗ್ ಬಿಲ್ ತಯಾರಿಸಿ ಕೆಲ ದಾಖಲಾತಿ ಸೃಷ್ಟಿಸಿಕೊಂಡು ಎಚ್​ಡಿಎಫ್​ಸಿ ಬ್ಯಾಂಕ್​ಗೆ ಸಲ್ಲಿಸಿ ಬ್ಯಾಂಕ್​ನಿಂದ 11.34 ಕೋಟಿ ರೂ. ಸಾಲ ಪಡೆದಿದ್ದಾರೆ. ನಂತರ ಬ್ಯಾಂಕ್​ಗೆ ಸಾಲ ಮರುಪಾವತಿ ಮಾಡದೆ, ಬ್ಯಾಂಕ್ ಸಿಬ್ಬಂದಿ ಸಂಪರ್ಕಕ್ಕೂ ಸಿಕ್ಕಿಲ್ಲ ಎಂದು ದೂರಿನಲ್ಲಿ ಶ್ರೀಧರ್ ಉಲ್ಲೇಖಿಸಿದ್ದಾರೆ.

Leave a Reply

Your email address will not be published. Required fields are marked *