ನಿಖಿಲ್​ ಸ್ಪರ್ಧೆ ಬಗ್ಗೆ ಮೊದಲ ಬಾರಿಗೆ ಮಾತನಾಡಿದ ಎಚ್​.ಡಿ ರೇವಣ್ಣ ಹೇಳಿದ್ದೇನು ಗೊತ್ತೇ?

ದೆಹಲಿ: ಮಂಡ್ಯ ಲೋಕಸಭೆ ಕ್ಷೇತ್ರಕ್ಕೆ ಜೆಡಿಎಸ್​ನಿಂದ ಸೋದರ ಎಚ್​.ಡಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್​ ಅಭ್ಯರ್ಥಿಯಾಗುತ್ತಿರುವ ಬಗ್ಗೆ ಸಚಿವ ಎಚ್.ಡಿ ರೇವಣ್ಣ ಮೊದಲ ಬಾರಿಗೆ ಮಾತನಾಡಿದ್ದಾರೆ. ಅಲ್ಲದೆ, ನಿಖಿಲ್​ ಸ್ಪರ್ಧೆಯನ್ನು ಅವರು ಸಮರ್ಥಿಸಿಕೊಂಡಿದ್ದಾರೆ.

“ದೇವೇಗೌಡರು ಯೋಚಿಸಿಯೇ ನಿರ್ಧಾರ ತೆಗೆದುಕೊಂಡಿದ್ದಾರೆ. ಕೆಲವರು ನಮ್ಮ ವಿರುದ್ಧ ಪ್ರಚಾರ ಮಾಡುತ್ತಿದ್ದಾರೆ. ಮಂಡ್ಯದ ಜನಕ್ಕೆ ಏನು ಬೇಕೋ ಅದನ್ನೇ ನಾವು ಮಾಡಿದ್ದೇವೆ. ಯೋಚನೆ ಮಾಡಿಯೇ ತೀರ್ಮಾನ ತೆಗೆದುಕೊಂಡಿದ್ದೇವೆ,” ಎಂದು ಅವರು ಸಮರ್ಥನೆ ನೀಡಿದರು.

ಇನ್ನು ಸುಮಲತಾ ಅಂಬರೀಷ್​ ಅವರ ಸ್ಪರ್ಧೆ ಬಗ್ಗೆ ಏನನ್ನೂ ಹೇಳಲು ಅವರು ನಿರಾಕರಿಸಿದರು.