ಸುಮಲತಾ ಗಂಡ ಸತ್ತು ಆರು ತಿಂಗಳಾಗಿಲ್ಲ ಈಗಲೇ ಚುನಾವಣೆ ಏಕೆ ಎಂದ ರೇವಣ್ಣ

ನವದೆಹಲಿ: ಲೋಕಸಭಾ ಚುನಾವಣೆ ಘೋಷಣೆಗೂ ಮೊದಲೇ ಮಂಡ್ಯ ಲೋಕಸಭಾ ಚುನಾವಣೆ ಕಣ ರಂಗೇರಿದ್ದು, ಜೆಡಿಎಸ್‌ನಿಂದ ನಿಖಿಲ್‌ ಕುಮಾರಸ್ವಾಮಿಯೇ ಅಭ್ಯರ್ಥಿ ಎಂದು ಸ್ಪಷ್ಟವಾಗಿದ್ದು, ಸುಮಲತಾ ಅಂಬರೀಷ್‌ ಕೂಡ ರೇಸ್‌ನಲ್ಲಿದ್ದಾರೆ. ಈ ಮಧ್ಯೆಯೇ ಸಾಮಾಜಿಕ ಜಾಲತಾಣಗಳಲ್ಲಿ ಜೆಡಿಎಸ್‌ ಕುಟುಂಬ ರಾಜಕಾರಣದ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದರೆ ಅತ್ತ ಸಚಿವ ರೇವಣ್ಣ ಮಾತ್ರ ಮತ್ತೆ ವಿವಾದಾತ್ಮಕ ಹೇಳಿಕೆ ನೀಡಿ ಚರ್ಚೆಗೆ ಗ್ರಾಸವಾಗಿದ್ದಾರೆ.

ಗಂಡ ಸತ್ತು ಇನ್ನೂ ಆರು ತಿಂಗಳು ಕಳೆದಿಲ್ಲ. ಈಗಾಗಲೇ ಸುಮಲತಾಗೆ ರಾಜಕಾರಣ ಯಾಕೆ ಬೇಕಿತ್ತು? ಕುಟುಂಬ ರಾಜಕಾರಣ, ರಾಜಕೀಯದಲ್ಲಿ ಸಹಜ ಎಂದು ಸುಮಲತಾ ಅಂಬರೀಷ್ ಬಗ್ಗೆ ರೇವಣ್ಣ ವಿವಾದಾತ್ಮಾಕ ಹೇಳಿಕೆ ನೀಡಿದ್ದಾರೆ.

ಮಹಿಳಾ ದಿನದಂದೇ ಸುಮಲತಾ ಅಂಬರೀಷ್‌ ಅವರ ವಿರುದ್ಧ ಮಾತನಾಡಿ ಮಹಿಳಾ ವಿರೋಧಿ ಹೇಳಿಕೆ ನೀಡಿರುವ ರೇವಣ್ಣ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

https://youtu.be/sOP0hO6eF1o

One Reply to “ಸುಮಲತಾ ಗಂಡ ಸತ್ತು ಆರು ತಿಂಗಳಾಗಿಲ್ಲ ಈಗಲೇ ಚುನಾವಣೆ ಏಕೆ ಎಂದ ರೇವಣ್ಣ”

  1. ಹಳ್ಳಿ ಕಡೆ ಲೋಕಾರೂಡಿ ಮಾತು ರೈತಾಪಿ ವರ್ಗದವರು ಏನೋ ಹೇಳಿದ್ದಾರೆ, ಅದಕ್ಕೆ ವಿರೋಡಿಸಬೇಡಿ.please

Comments are closed.