ಹಾಸನದಲ್ಲಿ 255 ಕೋಟಿ ರೂ. ವೆಚ್ಚದ ಜೈಲು ನಿರ್ಮಾಣ: ಎಚ್​.ಡಿ.ರೇವಣ್ಣ

ಹಾಸನ: ನಗರದ ಮಧ್ಯೆ ಇರುವ ಜೈಲನ್ನು ಸ್ಥಳಾಂತರಿಸಿ, ಹಾಸನದಲ್ಲಿ ನೂತನವಾಗಿ 255 ಕೋಟಿ ರೂ. ವೆಚ್ಚದಲ್ಲಿ ಜೈಲು ನಿರ್ಮಾಣ ಮಾಡಲಾಗುವುದು ಎಂದು ಲೋಕೋಪಯೋಗಿ ಸಚಿವ ಎಚ್​.ಡಿ.ರೇವಣ್ಣ ತಿಳಿಸಿದ್ದಾರೆ.

ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸಿಎಂ ಕುಮಾರಸ್ವಾಮಿ ಕ್ಲರ್ಕ್ ರೀತಿ ಕೆಲಸ ಮಾಡುತ್ತಿದ್ದಾರೆ ಎಂಬ ಮೋದಿ ಹೇಳಿಕೆ ಬಗ್ಗೆ ನನಗೆ ಗೊತ್ತಿಲ್ಲ. ನಾನು ಲೋಕೋಪಯೋಗಿ ಸಚಿವ ಅಷ್ಟೆ. ಟೀಕೆ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದರು.

ಜೆಡಿಎಸ್ ಕಾಂಗ್ರೆಸ್ ದೋಸ್ತಿ ಹೆಚ್ಚು ದಿನ ಉಳಿಯಲ್ಲ ಎಂಬ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಹೇಳಿಕೆಗೆ ಪ್ರತಿಕ್ರಿಯಿಸಿ, ಅಮಿತ್ ಷಾ ಅವರು ಏನೂ ಬೇಕಾದ್ರೂ ಹೇಳಲಿ. ಮೈತ್ರಿ ಇರುವಷ್ಟು ದಿನ ಕೆಲಸ ಮಾಡಿ ಚಚ್ಚಾಕ್ತೀನಿ. ಮುಂದೆ ಏನಾದ್ರೂ ಆಗಲಿ ನಾನು ತಲೆಕೆಡಿಸಿಕೊಳ್ಳಲ್ಲ. ನಾನು ಎಲ್ಲರ ಜತೆ ಚೆನ್ನಾಗಿರುತ್ತೇನೆ ಎಂದರು.

ನರೇಂದ್ರ ಮೋದಿ, ಅಮಿತ್​ ಷಾ ಎಲ್ಲರೂ ಒಂದೆ. ನಾನ್ಯಾಕೆ ದ್ವೇಷ ಮಾಡಲಿ? ನನಗೆ ಅವ್ರುಬೇಕು ಇವ್ರೂ ಬೇಕು ಎಂದರು. (ದಿಗ್ವಿಜಯ ನ್ಯೂಸ್)