More

    ಭವಾನಿ ರೇವಣ್ಣ ಪೂಜೆ ಮಾಡುವಾಗ ಏನೋ ಹೇಳಿದ್ದಾರೆ; ಟಿಕೆಟ್ ವಿಚಾರವಾಗಿ ಕುಮಾರಸ್ವಾಮಿ ಹೇಳಿದ್ದೆ ಫೈನಲ್ ಎಂದ ರೇವಣ್ಣ!

    ಹಾಸನ: ಚುನಾವಣಾ ಸಮಯ ಹತ್ತಿರುವಾಗುತ್ತಿದ್ದಂತೆ ಹಾಸನ ವಿಧಾಸಭಾ ಕ್ಷೇತ್ರ ಜೆಡಿಎಸ್ ಕಾರಣದಿಂದ ಇದೀಗ ತೀವ್ರ ಕುತೂಹಲ ಕೆರಳಿಸುತ್ತಿದ್ದೆ. ಈ ಬಗ್ಗೆ ರಾಜ್ಯ ಮಟ್ಟದಲ್ಲಿ ಹಲವು ಚರ್ಚೆಗಳಾಗುತ್ತಿವೆ. ಯಾವಾಗ ಕಾರ್ಯಕ್ರಮ ವೇದಿಕೆಯೊಂದರಲ್ಲಿ ಭವಾನಿ ರೇವಣ್ಣ, ಸದ್ಯದಲ್ಲೇ ಹಾಸನ ಕ್ಷೇತ್ರದ ಅಭ್ಯರ್ಥಿಯನ್ನಾಗಿ ನನ್ನ ಹೆಸರನ್ನು ಘೋಷಿಸಿಲಿದ್ದಾರೆ ಎನ್ನುತ್ತಿದ್ದಂತೆ ತೆರೆಮರೆಯಲ್ಲಿ ಸದ್ದಿಲ್ಲದೆ ಏನೋ ನಡೆಯುತ್ತಿದೆ ಎಂಬ ಮಾತುಗಳು ಕ್ಷೇತ್ರದಲ್ಲಿ ಕೇಳಿ ಬಂದಿದ್ದವು.

    ಇದೀಗ ಮಾಜಿ ಸಚಿವ ಹೆಚ್.ಡಿ ರೇವಣ್ಣ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹಾಸನದಲ್ಲಿ ಭವನಿ ರೇವಣ್ಣ ಟಿಕೆಟ್ ಗೊಂದಲಕ್ಕೆ ತಾತ್ಕಾಲಿಕ ತೆರೆ ಎಳೆದಿದ್ದಾರೆ. ನಾನು ಮತ್ತು ಕುಮಾರಸ್ವಾಮಿ ಹೊಡೆದಾಡಿಕೊಂಡಿದ್ದೇವೆ ಅಂತ ಅಂದುಕೊಂಡದರೆ ಅದು ಬ್ರಹ್ಮ ನಿರಸನ. ಟಿಕೆಟ್ ವಿಚಾರವಾಗಿ ಕುಮಾರಸ್ವಾಮಿ ಏನು ಹೇಳುತ್ತಾರೋ ಅದೇ ಫೈನಲ್. ನಾನು, ಇಬ್ರಾಹಿಂ, ಕುಮಾರಸ್ವಾಮಿ ದೇವೇಗೌಡರು‌ ಎಲ್ಲರೂ ಕೂತು ಟಿಕಟ್ ಬಗ್ಗೆ ಅಂತಿಮ ನಿರ್ಧಾರ ಮಾಡುತ್ತೇವೆ ಎಂದು ಸ್ಪಷ್ಟ ಪಡಿಸಿದರು.

    ಎಲ್ಲಾ ಪಕ್ಷದಲ್ಲಿಯೂ ಕುಟುಂಬ ರಾಜಕಾರಣ ಇದ್ದೇ ಇದೆ. ಕುಟುಂಬ ರಾಜಕಾರಣ ಅಂದರೆ ನಾನು ಪ್ರಜ್ವಲ್, ಸೂರಜ್, ಎಲ್ಲರಲ್ಲಿಯೂ ಇವತ್ತೇ ರಾಜೀನಾಮೆ ಕೊಡಿಸುತ್ತೇನೆ. ರಾಮನಗರದಲ್ಲಿ ನಿಖಿಲ್ ಗೆಲ್ಲುತ್ತಾರೆ ಅಂದರೆ ಅದು ‌ಅವರ‌ ಶಕ್ತಿ ಎಂದು ಹೇಳಿದರು.

    ಹಾಸನ ವಿಧಾನಸಭಾ ಕ್ಷೇತ್ರದ ಟಿಕೆಟ್​ಗಾಗಿ ದೇವೇಗೌಡರ ಕುಟುಂಬದಲ್ಲೇ ಕಲಹ ಉಂಟಾಗಿದ್ದು, ಭವಾನಿ ರೇವಣ್ಣ ಅವರಿಗೆ ಟಿಕೆಟ್ ನೀಡಬೇಕು ಎಂಬ ಕೂಗು ಕೇಳಿ ಬರುತ್ತಿದೆ. ಅಲ್ಲದೆ ಮಾಜಿ ಸಚಿವ ರೇವಣ್ಣ ಅವರ ಪುತ್ರರಿಬ್ಬರು ಇತ್ತೀಚೆಗೆ ಹಾಸನದಲ್ಲಿ ಭವಾನಿ ರೇವಣ್ಣ ಅವರು ಗೆದ್ದೇ ಗೆಲ್ಲುತ್ತಾರೆ. ಅವರೇ ಸೂಕ್ತ ಎಂದು ನಿರ್ಧರಿಸಿ ಟಿಕೆಟ್‌ ನೀಡಿದರೂ ಗೆಲ್ಲುತ್ತಾರೆ. ಇದು ಕ್ಷೇತ್ರದ ಜೆಡಿಎಸ್‌ ಕಾರ್ಯಕರ್ತರು ಅಭಿಪ್ರಾಯವೂ ಆಗಿದೆ ಎಂದು ಹೇಳಿದ್ದರು.

    ಜೆಡಿಎಸ್ ಕಾರ್ಯಕರ್ತರು ನಿಂತಿರೋದು ಕುಮಾರಸ್ವಾಮಿ ಹಾಗು ದೇವೇಗೌಡರು ಎನ್ನುವ ಶಕ್ತಿಯ ಹಿಂದೆ. ಜೆಡಿಎಸ್​ಗೆ ಇವತ್ತು ಜನ ಬೆಂಬಲ ಇರೋದಕ್ಕೆ ಕುಮಾರಸ್ವಾಮಿ ಕಾರಣವೇ ಹೊರತು ರೇವಣ್ಣನ ಮಕ್ಕಳ್ಳಿಂದಲ್ಲ ಸ್ವತಃ ಜೆಡಿಎಸ್ ಕಾರ್ಯಕರ್ತರು ಹೇಳಿಕೆ ನೀಡಿದ್ದರು.

    ಪತ್ನಿ ಭವಾನಿ ರೇವಣ್ಣ ಹಾಸನದಿಂದ ಸ್ಪರ್ಧಿಸುತ್ತೇನೆ ಎಂದು ಹೇಳಿರುವುದರ ಬಗ್ಗೆ ಪ್ರತಿಕ್ರಿಯಿಸಿದ ರೇವಣ್ಣ, ಅವರು ಪೂಜೆ ಮಾಡುವಾಗ ಏನೋ ಹೇಳಿಕೆ ನೀಡಿದ್ದಾರೆಯೇ ಹೊರತು ಮಾಧ್ಯಮದ ಮುಂದೆ ಹೇಳಿಲ್ಲ. ಪೂಜೆ ಸಮಯ ಹೇಳಿಕೆ ನೀಡಿದ್ದಾರೆ. ಟಿಕೆಟ್ ಸಿಕ್ಕರೆ ಸ್ಪರ್ಧಿಸುತ್ತಾರೆ. ಸೂರಜ್, ಪ್ರಜ್ವಲ್ ಹೇಳಿದಂತೆ ಅಲ್ಲ, ಕುಮಾರಸ್ವಾಮಿ ಮತ್ತು ನಾಯಕರ ತೀರ್ಮಾನವೇ ಅಂತಿಮ ಎಂದು ರೇವಣ್ಣ ಸ್ಪಷ್ಟಪಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts