ಎಚ್​.ಡಿ.ಕುಮಾರಸ್ವಾಮಿ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ, ಖರ್ಗೆಯನ್ನು ಸಿಎಂ ಮಾಡಿ ತಮ್ಮ ಕನಸು ನನಸು ಮಾಡಿಕೊಳ್ಳಲಿ: ಬಿಎಸ್​ವೈ

ಕಲಬುರಗಿ: ಸಿಎಂ ಎಚ್​.ಡಿ.ಕುಮಾರಸ್ವಾಮಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಮಲ್ಲಿಕಾರ್ಜುನ ಖರ್ಗೆಯವರನ್ನು ಮುಖ್ಯಮಂತ್ರಿ ಮಾಡಲಿ. ಈ ಮೂಲಕ ತಮ್ಮ ಕನಸು ನನಸು ಮಾಡಿಕೊಳ್ಳಲಿ ಎಂದು ಮಾಜಿ ಸಿಎಂ ಯಡಿಯೂರಪ್ಪ ಸಂಸದ ಮಲ್ಲಿಕಾರ್ಜುನ್ ಖರ್ಗೆ ಮೈತ್ರಿ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಬೇಕಿತ್ತು ಎನ್ನುವ ಸಿಎಂ ಹೇಳಿಕೆಗೆ ತಿರುಗೇಟು ನೀಡಿದರು.

ಕುಂಚಾವರಂ ಗ್ರಾಮದಲ್ಲಿ ಬಿಜೆಪಿ ಸಮಾವೇಶದಲ್ಲಿ ಮಾತನಾಡಿ, ಚಿಂಚೋಳಿಯನ್ನು ದತ್ತು ಪಡೆಯುತ್ತೇನೆ ಎನ್ನುವ ಸಿಎಂ ಹೇಳಿಕೆ ಕುರಿತು ಮಾತನಾಡಿದ ಬಿ.ಎಸ್​.ಯಡಿಯೂರಪ್ಪ, ಇದುವರೆಗೂ ಚಿಂಚೋಳಿ ಎಡೆಗೆ ತಿರುಗಿಯೂ ನೋಡದ ಸಿಎಂ ಕುಮಾರಸ್ವಾಮಿ, ಚುನಾವಣೆ ಇದೆ ಎಂದು ಬಂದು ಏನೇನೋ ಭರವಸೆ ಕೊಟ್ಟು ಹೋಗುತ್ತಿದ್ದಾರೆ. ಚಿಂಚೋಳಿ ದತ್ತು ಪಡೆಯುವುದಾದರೆ ಇಷ್ಟು ದಿನ ಬೇಕಿತ್ತೆ? ಇಷ್ಟು ದಿನ ಸಿಎಂ ಏನು ಮಾಡುತ್ತಿದ್ದರು? ಎಂದು ಕಿಡಿಕಾರಿದರು.

ಚುನಾವಣಾ ಸಮಯದಲ್ಲಿ ಇಲ್ಲ ಸಲ್ಲದ ಭರವಸೆ ನೀಡಿ ಹೋಗುತ್ತಾರೆ. ಆನಂತರ ಸಮಸ್ಯೆ, ಕೊಟ್ಟ ಭರವಸೆ ಈಡೇರಿಸದೆ ಎಲ್ಲವನ್ನು ಮರೆಯುತ್ತಾರೆ ಎಂದರು. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *