More

    ಆಪರೇಷನ್​ ಜೆಡಿಎಸ್​ಗೆ ಕೈ ಹಾಕಿದ ಎಚ್​ಡಿಕೆ: ಹುಬ್ಬಳ್ಳಿಯಲ್ಲಿ ಬಿಜೆಪಿಯ ವಿಕೆಟ್ ಪತನ ಆಗೋದು ಖಚಿತ

    ಹುಬ್ಬಳ್ಳಿ: ಈ ಬಾರಿ ರಾಜ್ಯದಲ್ಲಿ ಜೆಡಿಎಸ್​ ಪಕ್ಷವನ್ನು ಅಧಿಕಾರಕ್ಕೆ ತರಲೇಬೇಕೆಂಬ ಹಠಕ್ಕೆ ಬಿದ್ದಿರುವ ಮಾಜಿ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ನಾನಾ ಕಸರತ್ತು ಹಾಗೂ ತಂತ್ರಗಳನ್ನು ಮಾಡುತ್ತಿದ್ದಾರೆ. ಈ ಬಾರಿ ಉತ್ತರ ಕರ್ನಾಟಕದತ್ತ ತಮ್ಮ ಗಮನ ಹರಿಸಿರುವ ಎಚ್​ಡಿಕೆ ಆಪರೇಷನ್ ಜೆಡಿಎಸ್​ಗೆ ಕೈ ಹಾಕಿದ್ದಾರೆ.

    ಉತ್ತರ ಕರ್ನಾಟಕದ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರನ್ನು ದಳಪತಿ ಟಾರ್ಗೆಟ್ ಮಾಡಿದ್ದಾರೆ. ಮಾಜಿ ಶಾಸಕ ಎನ್.ಎಚ್. ಕೋನರಡ್ಡಿ ಹಾಗೂ ವಿಧಾನ ಪರಿಷತ್​ ಸ್ಪೀಕರ್ ಬಸವರಾಜ ಹೊರಟ್ಟಿ ಜಾಗಕ್ಕೆ ಬೇರೆ ಪ್ರಭಾವಿ ನಾಯಕರನ್ನು ಕರೆತರಲು ಮುಂದಾಗಿದ್ದಾರೆ. ಅದರಲ್ಲೂ ಟಿಕೆಟ್ ತಪ್ಪುವ ಭೀತಿಯಲ್ಲಿರುವ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರ ಜೊತೆ ದಳಪತಿ ಕುಮಾರಸ್ವಾಮಿ ರಹಸ್ಯ ಮೀಟಿಂಗ್ ಮಾಡಿದ್ದಾರೆ.

    ಒಂದೇ ತಿಂಗಳ ಅವಧಿಯಲ್ಲಿ ಬಿಜೆಪಿ ಮಾಜಿ ಶಾಸಕರನ್ನು ಎಚ್​ಡಿಕೆ ಎರಡು ಬಾರಿ ಭೇಟಿ ಮಾಡಿದ್ದಾರೆ. ಹುಬ್ಬಳ್ಳಿಯಲ್ಲಿ ಬಿಜೆಪಿಯ ಒಂದು ವಿಕೆಟ್ ಪತನ ಆಗುವುದು ಬಹುತೇಕ ಖಚಿತವಾಗಿದೆ. ಬಿಜೆಪಿ ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿಗೆ ಜೆಡಿಎಸ್​ ಗಾಳ ಹಾಕಿದೆ. ಹುಬ್ಬಳ್ಳಿ-ಧಾರವಾಡ ಪೂರ್ವ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿರುವ ಹಾಲರವಿ ಜೊತೆ ಎಚ್​ಡಿಕೆ ಮಾತುಕತೆ ನಡೆಸಿದ್ದಾರೆ.

    2103ರಲ್ಲಿ ಬಿಜೆಪಿಯಿಂದ ಗೆದ್ದು ಹಾಲರವಿ ಶಾಸಕರಾಗಿದ್ದರು. ಕಳೆದ ಬಾರಿ ಹು-ಧಾ ಪಶ್ಚಿಮ ಕ್ಷೇತ್ರದ ಕೈ ಅಭ್ಯರ್ಥಿ ಇಸ್ಮಾಯಿಲ್​ ತಮಾಟಗಾರ ಅವರನ್ನೂ ಎಚ್​ಡಿಕೆ ಭೇಟಿ ಆಗಿದ್ದಾರೆ. ಬಿಜೆಪಿ ಹಾಗೂ ಕಾಂಗ್ರೆಸ್ ನಿಷ್ಟಾವಂತ ಕಾರ್ಯಕರ್ತರು ಮತ್ತು ಮುಖಂಡರೇ ಜೆಡಿಎಸ್​ ಟಾರ್ಗೆಟ್ ಆಗಿದ್ದು, ಉತ್ತರ ಕರ್ನಾಟಕದಲ್ಲಿ ಕಮಲ ಮತ್ತು ಕೈ ಬಗ್ಗು ಬಡೆಯಲು ಎಚ್​ಡಿಕೆ ಮಾಸ್ಟರ್ ಪ್ಲಾನ್ ಮಾಡಿದ್ದಾರೆ. (ದಿಗ್ವಿಜಯ ನ್ಯೂಸ್​)

    ಮಕ್ಕಳ ಪರೀಕ್ಷೆ; ತಾಯಂದಿರ ಅಗ್ನಿಪರೀಕ್ಷೆ

    ಪೊಲೀಸರ ಕೈಗೆ ಸಿಕ್ಕಿಬಿದ್ದ 16 ಪಾನಮತ್ತ ಬಸ್​ ಚಾಲಕರಿಗೆ ವಿಚಿತ್ರ ಶಿಕ್ಷೆ! 1000 ಬಾರಿ ಬರೆದ ಬಳಿಕ ಸಿಕ್ತು ಜಾಮೀನು

    ಬೆಂಗ್ಳೂರಿಂದ ಕೆ.ಎಂ ದೊಡ್ಡಿಗೆ ಬಂದು ದ್ವಿಚಕ್ರ ವಾಹನ ಸವಾರರಿಂದ ಹಣ ವಸೂಲಿ: ನಕಲಿ PSI ಅರೆಸ್ಟ್​!

    See also  ಮಹಿಳಾ ಸಹಕಾರ ಬ್ಯಾಂಕಿಗೆ 2.76 ಕೋಟಿ ನಿವ್ವಳ ಲಾಭ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts