Friday, 14th December 2018  

Vijayavani

ಚಾಮರಾಜನಗರದಲ್ಲಿ ವಿಷವಾದ ಮಾರಮ್ಮನ ಪ್ರಸಾದ- ನಾಲ್ವರ ಸಾವು-40ಕ್ಕೂ ಹೆಚ್ಚು ಭಕ್ತರು ಅಸ್ವಸ್ಥ, ಜಿಲ್ಲಾಧಿಕಾರಿ ಭೇಟಿ        ರಾಜಸ್ಥಾನ ಸಿಎಂ ಆಗಿ ಆಶೋಕ್ ಗೆಹ್ಲೋಟ್, ಯುವ ನಾಯಕ ಸಚಿನ್ ಪೈಲಟ್​​ಗೆ ಡಿಸಿಎಂ ಪಟ್ಟ- ಕಾಂಗ್ರೆಸ್​ನಿಂದ ಅಧಿಕೃತ ಘೋಷಣೆ        ಚೆನ್ನೈನ ರೇಲಾ ಆಸ್ಪತ್ರೆಗೆ ಭೇಟಿ ನೀಡಿ ಸಿದ್ಧಗಂಗಾ ಶ್ರೀಗಳ ಆರೋಗ್ಯ ವಿಚಾರಿಸಿದ ಬಿಎಸ್​ವೈ- ಸಿಎಂ ಎಚ್​ಡಿಕೆ ಚೆನ್ನೈಗೆ ಪ್ರಯಾಣ        ಭದ್ರತೆಗಾಗಿ ರಫೇಲ್ ಖರೀದಿ-ಸುಪ್ರೀಂಕೋರ್ಟ್ ತೀರ್ಪಿನಿಂದ ಭ್ರಮನಿರಸನ-ರಾಗಾ ವಿರುದ್ಧ ಹಾಲಿ ಮಾಜಿ ರಕ್ಷಣಾ ಸಚಿವರ ಕಿಡಿ        ನಾಲ್ಕು ದಿನದಲ್ಲಿ ಎಲ್ಲ ಸರಿಹೋಗುತ್ತೆ-ಪ್ರಯಾಣಿಕರಿಗೆ ಯಾವುದೇ ಆತಂಕ ಬೇಡ-ಪಿಲ್ಲರ್ ಬಿರುಕಿಗೆ BMRCL ಎಂಡಿ ಸ್ಪಷ್ಟನೆ        ನನಗೂ ಸಚಿವೆಯಾಗುವ ಆಸೆ ಇದೆ- ಅಂತರಂಗ ತೆರೆದಿಟ್ಟ ಲಕ್ಷ್ಮೀ ಹೆಬ್ಬಾಳ್ಕರ್- ಕೈ ಸಚಿವಾಕಾಂಕ್ಷಿಗಳ ಪಟ್ಟಿಗೆ ಈಗ ಹೊಸ ಸೇರ್ಪಡೆ       
Breaking News

ಕಣ್ಣೀರ ರಾಜಕಾರಣ!

Tuesday, 17.07.2018, 3:06 AM       No Comments

‘ಮುಖ್ಯಮಂತ್ರಿ ಆಗಿ ಖುಷಿಪಡಲಾಗದ ನನ್ನದು ವಿಷಕಂಠನ ಸ್ಥಿತಿ’ ಎಂದು ಸಿಎಂ ಎಚ್.ಡಿ. ಕುಮಾರಸ್ವಾಮಿ ಸುರಿಸಿದ ಕಣ್ಣೀರು ಈಗ ರಾಜ್ಯ ರಾಜಕಾರಣದಲ್ಲಿ ಸುನಾಮಿ ಎಬ್ಬಿಸಿದೆ. ಮುಖ್ಯಮಂತ್ರಿ ಬಿಟ್ಟಿರುವ ಈ ಹೊಸ ‘ಭಾವನಾತ್ಮಕ ಬಾಣ’ ಲೋಕಸಭೆ ಚುನಾವಣೆಗೆ ಅಣಿಯಾಗುತ್ತಿರುವ ಕಾಂಗ್ರೆಸ್ ನಾಯಕರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಹೀಗಾಗಿ ಡ್ಯಾಮೇಜ್ ಕಂಟ್ರೋಲ್​ಗೆ ಮುಂದಾಗಿರುವ ಕೈ ನಾಯಕರು ಇಂತಹ ಮಾತು, ನಡೆ ಸಹಿಸುವುದಿಲ್ಲ ಎಂಬ ಪರೋಕ್ಷ ಎಚ್ಚರಿಕೆಯನ್ನೂ ರವಾನಿಸಿದ್ದಾರೆ. ಈ ಎಲ್ಲ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ಬಿಜೆಪಿ ಕರ್ನಾಟಕದ ‘ಕಣ್ಣೀರ ಕದನ’ವನ್ನೇ ಚುನಾವಣಾ ಅಸ್ತ್ರವನ್ನಾಗಿಸಲು ಮುಂದಾಗಿದೆ. ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ಒಳಗೊಂಡ ಮಹಾಮೈತ್ರಿ ಏರ್ಪಟ್ಟಲ್ಲಿ ಅದಕ್ಕೂ ಕರ್ನಾಟಕದಲ್ಲಿನ ದೋಸ್ತಿ ಗತಿಯೇ ಒದಗಲಿದೆ ಎಂಬ ಅಂಶವನ್ನು ಜನರ ಮುಂದಿಡಲು ಬಿಜೆಪಿ ಆಲೋಚಿಸಿದೆ.

ಬೆಂಗಳೂರು: ಸರ್ಕಾರದ ವರ್ಚಸ್ಸು ಹೆಚ್ಚಿಸಿಕೊಳ್ಳುವ ಧಾವಂತದಲ್ಲಿ ಭಾವೋದ್ವೇಗದಿಂದ ಮುಖ್ಯಮಂತ್ರಿ ಕುಮಾರಸ್ವಾಮಿ ಆಡುತ್ತಿರುವ ಮಾತು, ನಡೆದುಕೊಳ್ಳುತ್ತಿರುವ ರೀತಿ ಮಿತ್ರಪಕ್ಷ ಕಾಂಗ್ರೆಸ್​ಗೆ ಇರಿಸುಮುರಿಸು ತಂದಿದೆ.

‘ಸಿಎಂ ಆಗಿ ನಾನು ಸಂತೋಷದಿಂದ ಇಲ್ಲ. ವಿಷ ಕುಡಿದ ವಿಷಕಂಠನಂತೆ ನನ್ನ ಸ್ಥಿತಿಯೂ ಇದೆ’ ಎಂದು ಕುಮಾರಸ್ವಾಮಿ ಪಕ್ಷದ ಸಭೆಯಲ್ಲಿ ಕಣ್ಣೀರಿಟ್ಟ ವಿಚಾರ ಇದೀಗ ದೆಹಲಿಗೂ ತಲುಪಿದೆ. ವಿಷಕಂಠನಂತೆ ನೋವು ನುಂಗುತ್ತಿದ್ದೇನೆಂದು ನೀಡಿರುವ ಹೇಳಿಕೆ ಪರೋಕ್ಷವಾಗಿ ಕಾಂಗ್ರೆಸ್​ನತ್ತ ಬೊಟ್ಟು ಮಾಡಿ ತೋರಿಸುವಂತಿದ್ದು, ಇದರಿಂದ ಸಿಎಂಗೆ ಕಾಂಗ್ರೆಸ್ ಸಹಕಾರ ಕೊಡುತ್ತಿಲ್ಲ ಎಂಬ ಭಾವನೆ ಸಾರ್ವಜನಿಕ ವಲಯದಲ್ಲಿ ಮೂಡಿ ಪಕ್ಷಕ್ಕೆ ಹಾನಿ ಉಂಟುಮಾಡಲಿದೆ ಎಂದು ಕಾಂಗ್ರೆಸ್ ನಾಯಕರು ದನಿ ಎತ್ತಿದ್ದಾರೆ. ಕುಮಾರಸ್ವಾಮಿ ಕಣ್ಣೀರು ಹಾಕುವುದನ್ನು ಬಿಟ್ಟು ಸರಿಯಾಗಿ ಸರ್ಕಾರ ನಡೆಸಿಕೊಂಡು ಹೋಗಲಿ ಎಂದು ಪಕ್ಷದ ಹಿರಿಯ ನಾಯಕರಿಬ್ಬರು ತಮ್ಮ ಆತ್ಮೀಯರ ಬಳಿ ಹೇಳಿಕೊಂಡಿದ್ದಾರೆ. ‘ನಾವು 79 ಶಾಸಕರಿದ್ದರೂ ಸಿಎಂ ಸ್ಥಾನ ಬಿಟ್ಟುಕೊಡಲಾಗಿದೆ. ಕೇಳಿದ ಪ್ರಮುಖ ಖಾತೆಗಳನ್ನೂ ಕೊಡಲಾಗಿದೆ.

ಕಾಂಗ್ರೆಸ್ ನಾಯಕರಿಂದಾಗಿ ನಾನು ಕಣ್ಣೀರು ಹಾಕಿಲ್ಲ. ಅವರ ಸಂಪೂರ್ಣ ಸಹಕಾರ ಸಿಗುತ್ತಿದೆ. ಸಾಲಮನ್ನಾದಂತಹ ನನ್ನ ನಿರ್ಧಾರಗಳನ್ನು ಜನರು ಬೆಂಬಲಿಸುತ್ತಿಲ್ಲ ಎಂಬ ಬೇಸರವಿದೆಯಷ್ಟೇ. ಅರುಣ್ ಜೇಟ್ಲಿಯಿಂದ ನಾನು ಪಾಠ ಕಲಿಯಬೇಕಿಲ್ಲ. ರೈತರ ಸಾಲಮನ್ನಾ ಮಾಡಿದ್ದು ನಾವು, ಮೋದಿ ಅಲ್ಲ. ದೃಢ ನಾಯಕ ಯಾರೆಂಬುದನ್ನು ಅವರೇ ಅರ್ಥ ಮಾಡಿಕೊಳ್ಳಲಿ.

| ಕುಮಾರಸ್ವಾಮಿ ಮುಖ್ಯಮಂತ್ರಿ

ಕಳೆದ ಕೆಲ ದಿನಗಳಿಂದ ಕುಮಾರಸ್ವಾಮಿ ಅವರ ಕಣ್ಣೀರು ನೋಡುತ್ತಿದ್ದೇನೆ. ಅವರ ಮಾತು ಕೇಳಿದರೆ ಬಾಲಿವುಡ್​ನ ದುರಂತ ಚಿತ್ರಗಳ ಕಥೆ ನೆನಪಾಗುತ್ತದೆ. ಒಂದು ರಾಜ್ಯದಲ್ಲಿನ ಎರಡು ಪಕ್ಷಗಳ ಮೈತ್ರಿಯೇ ಹೀಗಾದರೆ, ಹತ್ತಾರು ಪಕ್ಷಗಳ ದೇಶ ಮಟ್ಟದ ಮಹಾಮೈತ್ರಿಯ ಗತಿಯೇನು?

| ಅರುಣ್ ಜೇಟ್ಲಿ ಕೇಂದ್ರ ಸಚಿವ

 

ಕಣ್ಣೀರಿಗೆ ಕೈ ಕಾರಣ?

ಕುಮಾರಸ್ವಾಮಿ ಕಣ್ಣೀರಿಗೆ ಕಾಂಗ್ರೆಸ್ ಮುಖಂಡರೇ ಕಾರಣ ಎಂದು ರಾಣೆಬೆನ್ನೂರು ಕ್ಷೇತ್ರದ ಪರಾಜಿತ ಅಭ್ಯರ್ಥಿ, ಮಾಜಿ ಸ್ಪೀಕರ್ ಕೆ.ಬಿ. ಕೋಳಿವಾಡ ಅವರು ವಿಶ್ಲೇಷಿಸಿದ್ದಾರೆ. ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಸೇರಿದಂತೆ ಕೆಲವರಿಗೆ ಮೈತ್ರಿ ಸರ್ಕಾರ ಮುಂದುವರಿಯುವುದು ಬೇಕಿದೆ. ಆದರೆ ಕೆಲವರಿಗೆ ಬೇಕಿಲ್ಲ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *

Back To Top