ನನ್ನನ್ನು ಏನು ಮಾಡಲು ಸಾಧ್ಯವಿಲ್ಲ ಎಂದ ಮಾಜಿ ಸಿಎಂ ಎಚ್​ಡಿಕೆ; ಒಕ್ಕಲಿಗರ ಪ್ರತಿಭಟನೆಗೆ ಗೈರಾಗಿದ್ದರ ಬಗ್ಗೆ ಹೇಳಿದ್ದೇನು?

ರಾಮನಗರ: ನನ್ನನ್ನು ಬಂಧಿಸುತ್ತಾರೆ ಎಂದು ಕೆಲವರು ಫ್ಲೆಕ್ಸ್​ನಲ್ಲಿ ಫೋಟೊ ಹಾಕಿದ್ದಾರಂತೆ. ಆದರೆ, ನನ್ನನ್ನು ಯಾರೂ ಏನು ಮಾಡಲು ಸಾಧ್ಯವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

ಚನ್ನಪಟ್ಟಣದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಾನು ಯಾವುದೇ ರೀತಿ ತಪ್ಪು ಮಾಡಿಲ್ಲ. ಹೀಗಾಗಿ ನಾನು ಭಯಪಡುವ ಅಗತ್ಯವಿಲ್ಲ. ಡಿಕೆಶಿ ಬಳಿಕ ಮುಂದಿನ ಸರದಿ ನಾನು ಎಂದು ಕೆಲವರು ಫ್ಲೆಕ್ಸ್​ನಲ್ಲಿ ನನ್ನ ಫೋಟೊ ಹಾಕಿ ಖುಷಿಪಡುತ್ತಿದ್ದಾರೆ. ಆದರೆ, ನನ್ನನ್ನು ಏನು ಮಾಡಲಾಗದು ಎಂದು ತಿರುಗೇಟು ನೀಡಿದರು.

ನನಗೆ ಆಹ್ವಾನ ಇರಲಿಲ್ಲ
ಡಿಕೆಶಿ ಬಂಧನದ ವಿರುದ್ಧ ಒಕ್ಕಲಿಗರ ಪ್ರತಿಭಟನೆ ವಿಚಾರವಾಗಿ ಮಾತನಾಡಿದ ಅವರು ಚನ್ನಪಟ್ಟಣದಲ್ಲಿನ ಕಾರ್ಯಕ್ರಮ ಮೊದಲೇ ನಿಗದಿಯಾಗಿತ್ತು. ಹಾಗೇ ನನಗೆ ಬೆಂಗಳೂರಿನ ಪ್ರತಿಭಟನೆಗೆ ಆಹ್ವಾನವಿರಲಿಲ್ಲ. ಆದರೂ ಕೂಡ ನಮ್ಮ ಪಕ್ಷದ ಕಾರ್ಯಕರ್ತರು, ಮುಖಂಡರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ. ನನಗೆ ಮೊದಲೇ ಆಹ್ವಾನ ನೀಡಿದ್ದರೆ ನಾನು ಪ್ರತಿಭಟನೆಯಲ್ಲಿ ಭಾಗಿಯಾಗುತ್ತಿದೆ ಎಂದು ತಿಳಿಸಿದರು. (ದಿಗ್ವಿಜಯ ನ್ಯೂಸ್​)

One Reply to “ನನ್ನನ್ನು ಏನು ಮಾಡಲು ಸಾಧ್ಯವಿಲ್ಲ ಎಂದ ಮಾಜಿ ಸಿಎಂ ಎಚ್​ಡಿಕೆ; ಒಕ್ಕಲಿಗರ ಪ್ರತಿಭಟನೆಗೆ ಗೈರಾಗಿದ್ದರ ಬಗ್ಗೆ ಹೇಳಿದ್ದೇನು?”

  1. Such statement shows guilty some where and takes shield in castesium. Siddaramaiah and Devegowda family pushed karnataka into caste war. Are Vokkaligas are real supporters of corruption.

Leave a Reply

Your email address will not be published. Required fields are marked *