Tuesday, 20th November 2018  

Vijayavani

ರಾಜಧಾನಿಯಲ್ಲಿ ಹಸಿರು ಕ್ರಾಂತಿ-ಸಿಎಂ ಎಚ್​ಡಿಕೆ, ಡಿಸಿಎಂ ಪರಮೇಶ್ವರ್​ಗೆ ಡೆಡ್​​ಲೈನ್-ಕೂಡಲೇ ಸ್ಥಳಕ್ಕೆ ಬರುವಂತೆ ರೈತರ ಪಟ್ಟು        ಸೈಟ್ ಕೇಳ್ತಿಲ್ಲ, BMW ಕಾರೂ ಕೇಳ್ತಿಲ್ಲ-ನಾವು ಕೇಳ್ತಿರೋದು ಬೆಳೆದ ಬೆಲೆಗೆ ಬೆಲೆಯಷ್ಟೇ-ಸಚಿವ ಕಾಶಂಪೂರ್​​ಗೆ ಮನವಿ ಸಲ್ಲಿಕೆ        ರೈತರು, ಹೆಣ್ಮಕ್ಕಳ ವಿಚಾರದಲ್ಲಿ ಗೌರವ ಇದೆ-ನನ್ನ ಹೇಳಿಕೆಯಲ್ಲಿ ಯಾವುದೇ ದುರುದ್ದೇಶ ಇಲ್ಲ-ಸಿಎಂ ಹೇಳಿಕೆ ಬಿಡುಗಡೆ        ಸಿಎಂ ಕೂಡಲೇ ಕ್ಷಮೆ ಕೇಳಬೇಕು-ನಾಳಿನ ಕೋರ್​​​ ಕಮಿಟಿ ಸಭೆಯಲ್ಲಿ ಹೋರಾಟದ ನಿರ್ಧಾರ-ಸರ್ಕಾರದ ವಿರುದ್ಧ ಗುಡುಗಿದ ಬಿಜೆಪಿ        ₹3,300 ಕೋಟಿ, 132 ಕಿ.ಮೀ. ದೂರ-ಗುರಗಾಂವ್​​ನಲ್ಲಿ ಎಕ್ಸ್​​ಪ್ರೆಸ್​​ ಹೈವೇ ಲೋಕಾರ್ಪಣೆಗೊಳಿಸಿದ ಪ್ರಧಾನಿ        ರೈಲು ಬರುವ ವೇಳೆ ಹಳಿ ಮಧ್ಯೆ ಮಲಗಿದ ಭೂಪ-ಪ್ರಾಣದ ಹಂಗು ತೊರೆದು ಹುಚ್ಚು ಸಾಹಸ-ಹೈದ್ರಾಬಾದ್​ನಲ್ಲೊಂದು ಮಿರ‍್ಯಾಕಲ್       
Breaking News

ಸರ್ಕಾರ ಪತನಕ್ಕೆ ಕ್ರಿಮಿನಲ್ ಸಂಚು!

Saturday, 15.09.2018, 2:07 AM       No Comments

ಬೆಂಗಳೂರು: ಯಾವುದೇ ಸ್ಪಷ್ಟತೆ, ಪುರಾವೆಗಳಿಲ್ಲದೆ ರಾಜ್ಯ ಸಮ್ಮಿಶ್ರ ಸರ್ಕಾರದ ಆಯಸ್ಸಿನ ಕುರಿತಂತೆ ಕೇಳಿ ಬರುತ್ತಿರುವ ವದಂತಿಗಳ ಗೊಂದಲಕ್ಕೆ ತೆರೆ ಎಳೆಯುವ ಬದಲು ಖುದ್ದು ಮುಖ್ಯಮಂತ್ರಿಗಳೇ ಬಿಜೆಪಿ ವಿರುದ್ಧ ‘ಕ್ರಿಮಿನಲ್ ಸಂಚಿನ’ ಬಾಂಬ್ ಸ್ಪೋಟಿಸಿರುವುದು ಪರಿಸ್ಥಿತಿಯನ್ನು ಮತ್ತಷ್ಟು ಗೋಜಲಿಗೆ ಸಿಲುಕಿಸಿದೆ.

‘ರಾಜ್ಯ ಸಮ್ಮಿಶ್ರ ಸರ್ಕಾರವನ್ನು ಉರುಳಿಸಲು ಬಿಜೆಪಿ ನಾಯಕರು ವ್ಯರ್ಥ ಕಸರತ್ತು ನಡೆಸುತ್ತಿದ್ದು, ಶಾಸಕರನ್ನು ಸೆಳೆಯಲು ಹಣದ ಆಮಿಷ ಒಡ್ಡುತ್ತಿದ್ದಾರೆ. ಈ ಷಡ್ಯಂತ್ರದಲ್ಲಿ ಬಿಜೆಪಿ ಮುಖಂಡರು ಕ್ರಿಮಿನಲ್​ಗಳನ್ನು ಬಳಸಿಕೊಳ್ಳುತ್ತಿದ್ದಾರೆ’ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದರು.

ಅಭಿವೃದ್ಧಿ ಕೆಲಸಗಳು ಆಗುವುದು ಪ್ರತಿಪಕ್ಷದ ನಾಯಕರಿಗೆ ಬೇಕಾಗಿಲ್ಲ. ರಾಜಕೀಯ ಗದ್ದಲ ಎಬ್ಬಿಸಿ ಬೇಳೆ ಬೇಯಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಆದರೆ ಸರ್ಕಾರವನ್ನು ಹೇಗೆ ಉಳಿಸಿಕೊಳ್ಳಬೇಕು ಎಂಬುದು ನನಗೆ ಗೊತ್ತಿದೆ’ ಎಂದು ವಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ವಿರುದ್ಧ ಕುಮಾರಸ್ವಾಮಿ ಹರಿಹಾಯ್ದರು. ‘ಕೆಲ ಬಿಜೆಪಿ ಮುಖಂಡರು ನನ್ನ ಸಂಪರ್ಕದಲ್ಲಿದ್ದಾರೆ. ಆದರೆ ಮೈಸೂರು ಭಾಗದ ಶಾಸಕರನ್ನು ಇಲ್ಲಿ ಹೆಸರಿಸಲ್ಲ. ಏಕೆಂದರೆ ನನ್ನ ಬಳಿ ಇರುವ ಪಟ್ಟಿಯೇ ಬೇರೆ’ ಎಂದರು.

ಬಿಜೆಪಿಯವರು ರೆಸಾರ್ಟ್ ರಾಜಕಾರಣವನ್ನಾದರೂ ಮಾಡಲಿ, ಗುಡಿಸಲು ರಾಜಕೀಯವನ್ನಾದರೂ ಮಾಡಲಿ. ಸದ್ಯ ಬಿಜೆಪಿಗರು ನಮ್ಮ ಶಾಸಕರಿಗೆ ಅಡ್ವಾನ್ಸ್ ಪೇಮೆಂಟ್ ಮಾಡುತ್ತಿದ್ದಾರೆ. ನಾನಾಗಿಯೇ ಬಿಜೆಪಿ ಶಾಸಕರನ್ನು ಸೆಳೆಯಲ್ಲ. ಸರ್ಕಾರ ಉಳಿಸಿಕೊಳ್ಳಲು ಏನು ಬೇಕೋ ಅದನ್ನು ಮಾಡುತ್ತೇನೆ.

| ಕುಮಾರಸ್ವಾಮಿ ಸಿಎಂ

ಯಾರವರು?

‘ಹಿಂದೆ ಬಿಬಿಎಂಪಿ ಕಡತಕ್ಕೆ ಬೆಂಕಿ ಇಟ್ಟವರೇ ಸರ್ಕಾರ ಕೆಡವಲು ಪ್ರಯತ್ನ ನಡೆಸಿದ್ದಾರೆ. ಇದಕ್ಕಾಗಿ ಬಿಜೆಪಿ ನಾಯಕರು ದಂಧೆ ನಡೆಸುವವರನ್ನೇ ಬಳಸುತ್ತಿದ್ದಾರೆ’ ಎಂದು ಸಿಎಂ ಎಚ್ಡಿಕೆ ಶುಕ್ರವಾರ ಗೃಹ ಕಚೇರಿ ಕೃಷ್ಣಾದಲ್ಲಿ ಆರೋಪಿಸಿದರು. ಸಕಲೇಶಪುರದ ಕಾಫಿ ಪ್ಲಾಂಟರ್ ಒಬ್ಬರು ರೆಸಾರ್ಟ್ ಮಾಡಲು ಹೋಗಿದ್ದರು. ಆತ ಹೆಂಡತಿ, ಮಗುವನ್ನೇ ಕೊಂದು ಜೈಲಿನಲ್ಲಿದ್ದಾನೆ. ಅಂಥವರೇ ಇದೀಗ ಸರ್ಕಾರವನ್ನು ಉರುಳಿಸಲು ಕೈ ಜೋಡಿಸಿದ್ದಾರೆ. ಇದಕ್ಕೆ ಕಾರಣ ಆದ ವ್ಯಕ್ತಿಯ ಬಗ್ಗೆಯೂ ನನಗೆ ಗೊತ್ತು ಎಂದು ಹೇಳಿದರು.

ಇಸ್ಪೀಟು ದಂಧೆಯಲ್ಲಿ ಕೋಟ್ಯಂತರ ರೂ. ಹಣ ಸಂಗ್ರಹಿಸಿದವರು ಅದೇ ಹಣದಿಂದ ಸರ್ಕಾರ ಬೀಳಿಸಲು ಷಡ್ಯಂತ್ರ ರೂಪಿಸಿದ್ದಾರೆ. ಈಗ ಶಾಸಕರಿಗೆ ಹಣದ ಆಮಿಷವೊಡ್ಡಿ ಸರ್ಕಾರ ಬೀಳಿಸುವ ತಂತ್ರಕ್ಕೆ ಕೈ ಹಾಕಿದ್ದಾರೆ. ನಾನು ಕೈಕಟ್ಟಿ ಸುಮ್ಮನೆ ಕುಳಿತಿಲ್ಲ. ಆ ಕಿಂಗ್​ಪಿನ್ ಯಾರು? ಅವರ ಹಿನ್ನೆಲೆ ಏನೆಂಬುದು ಗೊತ್ತಿದೆ. ಇವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇನೆ. ಮಾಧ್ಯಮದಲ್ಲಿ ಸರ್ಕಾರದ ಡೆಡ್ ಲೈನ್, ಡೇಟ್ ಕೂಡ ಬರುತ್ತಿದೆ. ಅವರವರೇ ಫಿಕ್ಸ್ ಮಾಡುತ್ತಿದ್ದಾರೆ. ಅವರೇ ದಿನಾಂಕ ಮುಂದೂಡುತ್ತಿದ್ದಾರೆ. ಗಣೇಶನ ಹಬ್ಬದ ಮುಗಿದ ಬಳಿಕ ಇನ್ನು ದಸರಾಗೆ ದಿನಾಂಕ ಮುಂದೂಡಬಹುದು’ ಎಂದು ಸಿಎಂ ಲೇವಡಿ ಮಾಡಿದರು.

Leave a Reply

Your email address will not be published. Required fields are marked *

Back To Top