ಹಜರತ್ ಸೈಯದ್‌ಬಾಷಾ ಉರುಸ್ ಇಂದಿನಿಂದ

blank

ಮುಂಡರಗಿ: ತಾಲೂಕಿನ ಕಲಕೇರಿ ಗ್ರಾಮದ ಹಜರತ್ ಸೈಯದ್‌ಬಾಷಾ ರಹಮತುಲ್ಲಾ ಅಲೈ ಅವರ ಉರುಸ್ ಫೆ.15ರಿಂದ 17ರವರೆಗೆ ನಡೆಯಲಿದೆ. ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿವೆ ಎಂದು ದರ್ಗಾ ಕಮಿಟಿ ಅಧ್ಯಕ್ಷ ಎಂ.ಯು. ಮಕಾಂದಾರ ತಿಳಿಸಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫೆ.15ರಂದು ರಾತ್ರಿ 10ಗಂಟೆಗೆ ಗಂಧದ ಮೆರವಣಿಗೆ ನಡೆಯುವುದು. ಫೆ.16ರಂದು ಮಧ್ಯಾಹ್ನ 12ಗಂಟೆಗೆ ಅಕ್ಕಿ ಬಂಡಿ ಮೆರವಣಿಗೆ, ರಾತ್ರಿ 10ಗಂಟೆಗೆ ಉರುಸಿನ ಮೆರವಣಿಗೆ ನಡೆಯಲಿದೆ. ರಾತ್ರಿ 10.30 ಗಂಟೆಗೆ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮವಿದ್ದು, ಬೆಳಗಟ್ಟಿ ಶ್ರೀ ಹಜರತ್ ಮುಸ್ತಫಾಖಾದರಿ ಸಾಹೇಬರು, ಶ್ರೀ ಮುದುಕೇಶ್ವರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಸಿಪಿಐ ಮಂಜುನಾಥ ಕುಸುಗಲ್ಲ ಉದ್ಘಾಟಿಸುವರು. ಕಲಕೇರಿ ಅಂಜುಮನ್ ಕಮಿಟಿ ಮಾಜಿ ಅಧ್ಯಕ್ಷ ಆರ್.ಎಂ. ಖತೀಬ ಅಧ್ಯಕ್ಷತೆ ವಹಿಸುವರು. ಪಿ.ಎಂ. ಪಾಟೀಲ, ಶಿವಲಿಂಗಯ್ಯ ಗುರುವಿನ, ಕೊಟ್ರಪ್ಪ ದೇಸಾಯಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
17ರಂದು ಬೆಳಗ್ಗೆ 11.30ಗಂಟೆಗೆ ಧರ್ಮಸಭೆ ಜರುಗುವುದು. ಶ್ರೀ ಹಜರತ್ ಮುಸ್ತಫಾಖಾದರಿ ಸಾಹೇಬರು, ಶ್ರೀ ಮುದುಕೇಶ್ವರ ಶಿವಾಚಾರ್ಯ ಸ್ವಾಮೀಜಿ, ಹೂವಿನಶಿಗ್ಲಿ ಶ್ರೀ ಚನ್ನವೀರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ ಉದ್ಘಾಟಿಸುವರು. ದರ್ಗಾ ಕಮಿಟಿ ಅಧ್ಯಕ್ಷ ಎಂ.ಯು. ಮಕಾಂದಾರ ಅಧ್ಯಕ್ಷತೆ ವಹಿಸುವರು. ಜಹೀರುದ್ದಿನ್ ಮುಲ್ಲಾ ಪ್ರಾಸ್ತಾವಿಕ ನುಡಿಗಳನ್ನಾಡುವರು ಎಂದರು.
ವಿ.ಎಲ್. ನಾಡಗೌಡ್ರ, ಎಸ್.ಡಿ. ಮಕಾಂದಾರ, ನಾಗರಾಜ ಹೊಂಬಳಗಟ್ಟಿ, ರಾಜು ದಾವಣಗೇರಿ, ಸಾಧೀಕ್ ಮಕಾಂದಾರ, ಬಾಬುಜಾನ್ ಅಳವಂಡಿ, ಮೈಬುಬ್‌ಸಾಬ್ ಮಕಾಂದಾರ, ಎಂ.ಎ. ಮಾಳೆಕೊಪ್ಪ, ಆಶಿಂಪೀರ್ ಲಕ್ಷ್ಮೇಶ್ವರ ಇತರರಿದ್ದರು.

Share This Article

ಪ್ರತಿದಿನ ಬೆಳಿಗ್ಗೆ ಪಪ್ಪಾಯಿ ತಿಂದರೆ ಏನಾಗುತ್ತದೆ ಗೊತ್ತಾ? ನೀವು ಇದನ್ನು ತಿಳಿದುಕೊಳ್ಳಲೇಬೇಕು..Papaya

Papaya: ಪಪ್ಪಾಯಿ ಹಣ್ಣು ಆರೋಗ್ಯಕ್ಕೆ ಮಾತ್ರವಲ್ಲದೆ ಸೌಂದರ್ಯಕ್ಕೂ ಪ್ರಯೋಜನಕಾರಿ ಎನ್ನುವುದು ನಮಗೆ ಗೊತ್ತಿರುವ ವಿಚಾರವಾಗಿದೆ. ಪಪ್ಪಾಯಿ…

ಈ 3 ರಾಶಿಯವರ ಮಾನಸಿಕ ಶಕ್ತಿಯನ್ನು ಕುಗ್ಗಿಸಲು ಯಾರಿಂದಲೂ ಸಾಧ್ಯವಿಲ್ಲ! ನಿಮ್ಮ ರಾಶಿ ಯಾವುದು? Zodiac Signs

Zodiac Signs : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಒಬ್ಬ ವ್ಯಕ್ತಿಯು ಯಾವ ರಾಶಿಚಕ್ರ ಮತ್ತು ನಕ್ಷತ್ರದಲ್ಲಿ…

ಥಟ್​ ಅಂಥಾ ಟೇಸ್ಟಿ ಹಲಸಿನಹಣ್ಣಿನ ಪಕೋಡ ಮಾಡುವುದೇಗೆ; ಇಲ್ಲಿದೆ ಸಿಂಪಲ್​ ವಿಧಾನ | Recipe

ಈರುಳ್ಳಿ ಪಕೋಡಾ, ಆಲೂ-ಮೆಣಸಿನಕಾಯಿ ಬಜ್ಜಿ, ಬೋಂಡಾ ಮನೆಯಲ್ಲಿ ಆಗಾಗ್ಗೆ ಮಾಡುತ್ತಿರುತ್ತೇವೆ. ಆದರೆ ಖಾರ ಮತ್ತು ರುಚಿಕರವಾದ…