ವಡೋದರ: ಐದನೇ ಬಾರಿಗೆ ಪ್ರಶಸ್ತಿ ಜಯಿಸುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆಯಿಟ್ಟಿರುವ ಕರ್ನಾಟಕ ತಂಡ ವಿಜಯ್ ಹಜಾರೆ ಟ್ರೋಫಿ ದೇಶೀಯ ಏಕದಿನ ಟೂರ್ನಿಯ ಮೊದಲ ಸೆಮಿೈನಲ್‌ನಲ್ಲಿ ಹಾಲಿ ಚಾಂಪಿಯನ್ ಹರಿಯಾಣ ಎದುರು ಕಾದಾಟ ನಡೆಸಲಿದೆ. ಬುಧವಾರ ಕೋಟಂಬಿ ಮೈದಾನದಲ್ಲಿ ಪಂದ್ಯ ನಡೆಯಲಿದ್ದು, ಮಯಾಂಕ್ ಅಗರ್ವಾಲ್ ಪಡೆ ಪ್ರಶಸ್ತಿ ಸುತ್ತಿಗೇರುವ ಹಂಬಲದಲ್ಲಿದೆ.
ಟೂರ್ನಿ ಆರಂಭದಿಂದಲೂ ಅಮೋಘ ಪ್ರದರ್ಶನ ನೀಡಿ ಭರ್ಜರಿ ಾರ್ಮ್‌ನಲ್ಲಿರುವ ಕರ್ನಾಟಕ ತಂಡ ಆತ್ಮವಿಶ್ವಾಸ ವೃದ್ಧಿಸಿಕೊಂಡಿದೆ. ನಾಯಕ ಮಯಾಂಕ್ ಅಗರ್ವಾಲ್ ಸೇರಿ ಯುವ ಆಟಗಾರರು ಟೂರ್ನಿಯಲ್ಲಿ ಉತ್ತಮ ಲಯದಲ್ಲಿ ಕಾಣಿಸಿಕೊಂಡಿದ್ದಾರೆ. ಹಿಂದಿನ ಪಂದ್ಯದಲ್ಲಿ ಶತಕ ಸಿಡಿಸಿರುವ ದೇವದತ್ ಪಡಿಕ್ಕಲ್ ಸೇರ್ಪಡೆ ತಂಡದ ಬಲ ಹೆಚ್ಚಿಸಿದೆ. ಮಯಾಂಕ್ ಹಾಲಿ ಟೂರ್ನಿಯಲ್ಲಿ ಎರಡನೇ ಗರಿಷ್ಠ ರನ್ ಸ್ಕೋರರ್ ಎನಿಸಿದ್ದು, ಕಳೆದ 2 ಬಾರಿ ಸೆಮಿೈನಲ್‌ನಲ್ಲಿ ನಿರಾಸೆ ಕಂಡಿರುವುದನ್ನು ಈ ಬಾರಿ ಮರೆಸುವ ತವಕದಲ್ಲಿದ್ದಾರೆ.
ಭಾರತ ಟೆಸ್ಟ್ ತಂಡಕ್ಕೆ ಪುನರಾಗಮನ ಮಾಡುವ ನಿರೀಕ್ಷೆಯಲ್ಲಿರುವ ಮಯಾಂಕ್, ಇದುವರೆಗೆ ಆಡಿರುವ 8 ಪಂದ್ಯಗಳಲ್ಲಿ 4 ಶತಕ ಸಹಿತ 619 ರನ್ ಸಿಡಿಸಿದ್ದಾರೆ. ಟೂರ್ನಿಯಲ್ಲಿ ಮೂರು ಬಾರಿ 300ಕ್ಕೂ ಅಧಿಕ ರನ್ ಕಲೆಹಾಕಿರುವ ಕರ್ನಾಟಕಕ್ಕೆ ಬೌಲರ್‌ಗಳ ಸಮರ್ಥ ಬೆಂಬಲ ಒದಗಿಸಬೇಕಿದೆ. ಮಧ್ಯಮ ಕ್ರಮಾಂಕದಲ್ಲಿ ಕೆವಿ ಅನೀಶ್ (342), ಆರ್.ಸ್ಮರಣ್ (256) ಬಲವಿದೆ. ಬೌಲಿಂಗ್‌ನಲ್ಲಿ ಅನುಭವಿ ವಿ.ಕೌಶಿಕ್ (17), ಶ್ರೇಯಸ್ ಗೋಪಾಲ್‌ಗೆ (16 ವಿಕೆಟ್) ಸೂಕ್ತ ಸಾಥ್ ಬೇಕಿದೆ. ಪ್ರಸಿದ್ಧ ಕೃಷ್ಣ ಹಿಂದಿನ ಪಂದ್ಯದಲ್ಲಿ ದುಬಾರಿ ಆಗಿದ್ದು, ಸೆಮೀಸ್‌ನಲ್ಲಿ ಲಯ ಕಂಡುಕೊಂಡರೆ ಕರ್ನಾಟಕದ ಗೆಲುವು ಸುಲಭ ಎನಿಸಲಿದೆ.
ಲೀಗ್ ಹಂತದ ಅಜೇಯ ತಂಡ ಗುಜರಾತ್ ಅನ್ನು ಮಣಿಸಿ ನಾಲ್ಕರ ಘಟ್ಟಕ್ಕೇರಿರುವ ಹರಿಯಾಣ ಸತತ ಎರಡನೇ ಬಾರಿ ೈನಲ್‌ಗೇರುವ ಹಂಬಲದಲ್ಲಿದೆ. ನಿಶಾಂತ್ ಸಿಂಧು ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಹರಿಯಾಣ ತಂಡಕ್ಕೆ ಆಧಾರ ಎನಿಸಿದ್ದಾರೆ. ಜತೆಗೆ ಅಂಕಿತ್ ಕುಮಾರ್ (419 ರನ್), ಬೌಲಿಂಗ್‌ನಲ್ಲಿ ಅಂಶುಲ್ ಕಾಂಬೋಜ್ 18 ವಿಕೆಟ್ ಕಬಳಿಸಿದ್ದಾರೆ.
ಮುಖಾಮುಖಿ-5
ಕರ್ನಾಟಕ: 3
ಹರಿಯಾಣ: 1
ರದ್ದು: 1
ಆರಂಭ: ಮಧ್ಯಾಹ್ನ 1.30
ನೇರಪ್ರಸಾರ: ಜಿಯೋ ಸಿನಿಮಾ