More

    ಜಿಪಂನಿಂದ ‘ಮೇರಾ ಮಿಟ್ಟಿ ಮೇರಾ ದೇಶ’ 15ರಂದು; ಅಮೃತ ಸರೋವರ ದಂಡೆಯಲ್ಲಿ ವಿವಿಧ ಕಾರ್ಯಕ್ರಮ; ಸಿಇಒ ಅಕ್ಷಯ ಶ್ರೀಧರ

    ಹಾವೇರಿ: ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಜಿಲ್ಲೆಯಲ್ಲಿ 75 ಅಮೃತ ಸರೋವರಗಳನ್ನು (ಕೆರೆಗಳನ್ನು) ಪುನಶ್ಚೇತನ ಮತ್ತು ನಿರ್ಮಾಣ ಮಾಡಲಾಗಿದೆ. ಆಗಸ್ಟ್ 15ರಂದು 76ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ‘ಅಮೃತ ಸರೋವರ’ದ ದಂಡೆ ಮೇಲೆ ಧ್ವಜಾರೋಹಣ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಕ್ಷಯ ಶ್ರೀಧರ ತಿಳಿಸಿದ್ದಾರೆ.
    ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಧ್ವಜಾರೋಹಣ ಕಾರ್ಯಕ್ರಮವನ್ನು ಸ್ವಾತಂತ್ರ್ಯ ಹೋರಾಟಗಾರರು, ಅವರ ಕುಟುಂಬಸ್ಥರು, ಹುತಾತ್ಮರ ಕುಟುಂಬಸ್ಥರು ಅಥವಾ ಪದ್ಮ ಪುರಸ್ಕಾರ ಪಡೆದವರಿಂದ ನೆರವೇರಿಸಲಾಗುವುದು. ಈ ನಿಟ್ಟಿನಲ್ಲಿ ಚುನಾಯಿತ ಪ್ರತಿನಿಧಿಗಳು, ಎಸ್.ಎಚ್.ಜಿ.ಎಸ್. ಯುವಕರು, ಕೆರೆ ಬಳಕೆದಾರರ ಸಂಘ ಮತ್ತು ಶಾಲಾ- ಕಾಲೇಜುಗಳ ವಿದ್ಯಾರ್ಥಿಗಳ ನೇತೃತ್ವದಲ್ಲಿ ಆಗಸ್ಟ್ 15ರಂದು ಜಿಲ್ಲೆಯ ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ಅನೇಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುವುದು.
    ಗ್ರಾಮಸ್ಥರ ಚಟುವಟಿಕೆಗಳು: ‘‘ತಿರಂಗಾ ಯಾತ್ರೆ’’ಯನ್ನು ಗ್ರಾಮದ ಸಮುದಾಯದೊಂದಿಗೆ ಬೆಳಗ್ಗೆ ಇಡೀ ಗ್ರಾಮವನ್ನು ಸಂಚರಿಸಿ ತದನಂತರ ಅಮೃತ ಸರೋವರ ಸ್ಥಳಗಳಲ್ಲಿ ಮುಕ್ತಾಯಗೊಳಿಸುವುದು.
    ಸ್ವಚ್ಛತಾ ಪ್ರತಿಜ್ಞೆ: ಅಮೃತ ಸರೋವರ ಸ್ಥಳಕ್ಕೆ ಆಗಮಿಸಿದ ನಂತರ, ಗ್ರಾಮ ಸಮುದಾಯದ ಸದಸ್ಯರಲ್ಲಿ ಅಮೃತ ಸರೋವರಗಳ ಸುತ್ತಮುತ್ತಲಿನ ಮತ್ತು ನೀರಿನ ಸ್ವಚ್ಛತೆಯನ್ನು ಕಾಪಾಡುವವಂತೆ ಖಚಿತಪಡಿಸಿಕೊಳ್ಳಲು ‘‘ಸ್ವಚ್ಛತೆಯ ಪ್ರತಿಜ್ಞೆ’’ ಕೈಗೊಳ್ಳಲಾಗುವುದು.
    ಅರಣ್ಯೀಕರಣ: ಅಮೃತ ಸರೋವರ ಸ್ಥಳಗಳಲ್ಲಿ ಸಸಿಗಳನ್ನು ನೆಡುವುದು ಮತ್ತು ಅವುಗಳ ಆರೈಕೆ ಮತ್ತು ಸುಸ್ಥಿರತೆಗಾಗಿ ಸಸಿಗಳನ್ನು ಅಳವಡಿಸಕಿಕೊಂಡು ಸದರಿಯವರ ಹೆಸರು ಇಡಬಹುದಾಗಿದೆ.
    ಪ್ರಮಾಣಪತ್ರ ವಿತರಣೆ: ಅಮೃತ ಸರೋವರ ನೀರಿನ ಬಳಕೆ ಮತ್ತು ಸುತ್ತಮುತ್ತಲಿನ ನಿರ್ವಹಣೆಗೆ ಸಂಬಂಧಿಸಿದಂತೆ ಬಳಕೆದಾರರ ಗುಂಪಿಗೆ ಹಕ್ಕುಗಳ ಪ್ರಮಾಣಪತ್ರದ ವಿತರಣೆ ಮಾಡಲಾಗವುದು.
    ಅಭಿನಂದನಾ ಸಮಾರಂಭ: ಮಿಷನ್ ಅಮೃತ ಸರೋವರದ ಮಾರ್ಗಸೂಚಿಗಳ ಪ್ರಕಾರ, ಅತ್ಯುತ್ತಮ ಅಮೃತ ಸರೋವರ ನಿರ್ಮಾಣವನ್ನು ಗುರುತಿಸಿ (ಪ್ರಥಮ, ದ್ವೀತಿಯ ಮತ್ತು ತೃತೀಯ) ಪ್ರಶಸ್ತಿ ನೀಡಲು ಜಿಲ್ಲಾಡಳಿತದಿಂದ ಪ್ರಶಸ್ತಿ ವಿತರಣಾ ಕಾರ್ಯಕ್ರಮ ಆಯೋಜಿಸಲಾಗುವುದು.
    ದೇಶಕ್ಕಾಗಿ ಎಲ್ಲವನ್ನೂ ತ್ಯಾಗ ಮಾಡಿದ ಎಲ್ಲ ಧೈರ್ಯಶಾಲಿಗಳಿಗೆ (ವೀರರು) ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸುವ ಅಂಶವಾಗಿ ಸ್ವಾತಂತ್ರ್ಯ ಹೋರಟಗಾರರು, ರಕ್ಷಣಾ ಸಿಬ್ಬಂದಿ, ಕೇಂದ್ರ ಸಶಸ್ತ್ರ ಪೋಲೀಸ್ ಪಡೆಗಳ ಅಧಿಕಾರಿಗಳು, ಸಿಬ್ಬಂದಿ ಹಾಗೂ ರಾಜ್ಯ ಪೊಲೀಸರು ಸೇರಿದಂತೆ ಕರ್ತವ್ಯದಲ್ಲಿದ್ದಾಗ ಪ್ರಾಣತ್ಯಾಗ ಮಾಡಿದ ವೀರರ ಹೆಸರನ್ನು ಶಿಲಾ ಫಲಕದಲ್ಲಿ ಬರೆದು ಎಲ್ಲ ಅಮೃತ ಸರೋವರಗಳ ಬಳಿ ನಿರ್ಮಿಸಲಾಗುವುದು. ಒಂದು ವೇಳೆ ಸದರಿ ಪಂಚಾಯಿತಿ ವ್ಯಾಪ್ತಿಯಲ್ಲಿ ವೀರರು ಲಭ್ಯವಿಲ್ಲದಿದ್ದರೆ ಸಾಮಾನ್ಯ ಸಮರ್ಪಣೆ ಶಿಲಾಫಲಕವನ್ನು ನಿರ್ಮಿಸಲಾಗುವುದು. ಈ ಎಲ್ಲ ಕಾರ್ಯಕ್ರಮಗಳನ್ನು ಅಮೃತ ಸರೋವರ ಕೆರೆಯ ದಂಡೆಯ ಮೇಲೆ ಆಗಸ್ಟ್ 15ರಂದು ಕೈಗೊಳ್ಳಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಮಕ್ಕಳ ಚಟುವಟಿಕೆಗಳು : ಅಮೃತ ಸರೋವರ ತಾಣಗಳಲ್ಲಿ ಮಕ್ಕಳಿಗೆ ಚಿತ್ರಕಲೆ, ಘೋಷಣೆ ಬರೆಯುವುದು, ರಂಗೋಲಿ, ಭಾಷಣ ಇತ್ಯಾದಿ ಸೇರಿದಂತೆ ಸ್ಪರ್ಧಾತ್ಮಕ ಚಟುವಟಿಕೆಗಳನ್ನು ಆಯೋಜಿಸಲಾಗುವುದು. ಗ್ರಾಮೀಣ ಆಟಗಳಾದ ಖೋ-ಖೋ, ಲಗೋರಿ, ಹಗ್ಗ ಜಗ್ಗಾಟ, ಹಗ್ಗ ಜಿಗಿತ, ಕುಂಟ ಓಟ, ಕುರ್ಚಿ ಓಟ, ಇತ್ಯಾದಿ ಆಟಗಳನ್ನು ಆಯೋಜಿಸಲಾಗುವುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts