More

  ಕೌಶಲಯುಕ್ತ ಯುವಕರಿಂದ ಸದೃಢ ಭಾರತ; ಹಾವೇರಿ ವಿವಿ ಕುಲಪತಿ ಪ್ರೊ.ಸುರೇಶ ಜಂಗಮಶೆಟ್ಟಿ ಅಭಿಪ್ರಾಯ

  ಹಾವೇರಿ: ಸದೃಢ ಭಾರತ ನಿರ್ಮಾಣಕ್ಕೆ ಕೌಶಲಯುಕ್ತ ಯುವಶಕ್ತಿಯ ಅಗತ್ಯತೆ ಇದೆ. ಇಂತಹ ಯುವಪಡೆಯನ್ನು ತಯಾರಿಸುವಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಕೂಡ ಮಹತ್ವದ ಪಾತ್ರ ವಹಿಸುತ್ತಿರುವುದು ಶ್ಲಾಘನೀಯ ಎಂದು ಹಾವೇರಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಸುರೇಶ ಜಂಗಮಶೆಟ್ಟಿ ಅಭಿಪ್ರಾಯಪಟ್ಟರು.
  ಕೆಎಲ್‌ಇ ಸಂಸ್ಥೆಯ ಗುದ್ಲೆಪ್ಪ ಹಳ್ಳಿಕೇರಿ ಮಹಾವಿದ್ಯಾಲಯದಲ್ಲಿ ಮಂಗಳವಾರ ಕರ್ನಾಟಕ ವಿಶ್ವವಿದ್ಯಾಲಯ ಹಾವೇರಿ, ಕವಿವಿ ಧಾರವಾಡ, ರಾಷ್ಟ್ರೀಯ ಸೇವಾ ಯೋಜನೆ ಕೋಶ, ಜಿಎಚ್ ಮಹಾವಿದ್ಯಾಲಯದ ಎನ್.ಎಸ್.ಎಸ್ ಘಟಕಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವಿಶ್ವವಿದ್ಯಾಲಯ ಮಟ್ಟದ ಎನ್.ಎಸ್.ಎಸ್ ನಾಯಕತ್ವ ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
  ಭಾರತದಲ್ಲಿ ಬಲಿಷ್ಠ ಯುವ ಸಂಸ್ಥೆ ಎಂದರೆ ಅದು ಎನ್.ಎಸ್.ಎಸ್.. ಇದರ ಸ್ವಯಂಸೇವಕರು ಮತ್ತಷ್ಟು ಪ್ರಾಮಾಣಿಕವಾಗಿ ದುಡಿದಲ್ಲಿ ಸಶಕ್ತ ಭಾರತ ನಿರ್ಮಾಣ ಸಾಧ್ಯವಾಗುತ್ತದೆ ಎಂದರು.
  ಕಾರ್ಯಕ್ರಮದಲ್ಲಿ ಹಾವೇರಿ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವೆ ಡಾ.ವಿಜಯಲಕ್ಷ್ಮೀ ತಿರ್ಲಾಪುರ, ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಎನ್.ಎಸ್.ಎಸ್. ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ.ಎಂ.ಬಿ.ದಳಪತಿ, ಹಾವೇರಿ ವಿಶ್ವವಿದ್ಯಾಲಯದ ಎನ್.ಎಸ್.ಎಸ್. ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ.ಸಿ.ಎಸ್.ಕುಮ್ಮೂರ, ಇತರರು ಉಪಸ್ಥಿತರಿದ್ದರು.
  ಜಿ.ಎಚ್.ಕಾಲೇಜ್ ಪ್ರಾಚಾರ್ಯೆ ಡಾ.ಸಂಧ್ಯಾ ಆರ್. ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು. ಕಾಲೇಜ್‌ನ ಎನ್.ಎಸ್.ಎಸ್. ಅಧಿಕಾರಿ ಪ್ರೊ.ಶಮಂತಕುಮಾರ ಕೆ.ಎಸ್. ಸ್ವಾಗತಿಸಿದರು. ಪ್ರತೀಕ ಆರ್. ನಿರೂಪಿಸಿದರು. ಡಾ.ವಿಶ್ವನಾಥ ಚಿಂತಾಮಣಿ ವಂದಿಸಿದರು.

  See also  ಪರೋಪಕಾರಕ್ಕೆ ಎನ್‌ಎಸ್‌ಎಸ್ ಪ್ರೇರಣೆ, ಎಸಿಪಿ ಗೀತಾ ಕುಲಕರ್ಣಿ ಅಭಿಮತ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts