ಹಾವೇರಿ: ವಿಧಾನಸಭೆ ಚುನಾವಣೆಗೆ ಮೇ 10ರಂದು ನಡೆದ ಮತದಾನದಲ್ಲಿ ಜಿಲ್ಲೆಯಲ್ಲಿ ಶೇ.81.50ರಷ್ಟು ಮತದಾನವಾಗಿದೆ. ಬುಧವಾರ ರಾತ್ರಿ ಮತದಾನ ಮುಕ್ತಾಯದ ವೇಳೆಗೆ ಅಂದಾಜು ಶೇ.81.17ರಷ್ಟು ಮತದಾನವಾಗಿದೆ ಎಂದು ಜಿಲ್ಲಾಧಕಾರಿ ರಘುನಂದನ ಮೂರ್ತಿ ಮಾಹಿತಿ ನೀಡಿದ್ದರು. ಇದೀಗ ಖಚಿತವಾಗಿ ಶೇ.81.50ರಷ್ಟು ಮತದಾನ ಆಗಿದೆ ಎಂದು ಗುರುವಾರ ಸ್ಪಷ್ಟಪಡಿಸಿದ್ದಾರೆ.
ಹಾನಗಲ್ಲ ಕ್ಷೇತ್ರದಲ್ಲಿ ಶೇ.84, ಶಿಗ್ಗಾಂವಿ ಕ್ಷೇತ್ರದಲ್ಲಿ ಶೇ.79.94, ಹಾವೇರಿ ಕ್ಷೇತ್ರದಲ್ಲಿ ಶೇ.77.11, ಬ್ಯಾಡಗಿ ಕ್ಷೇತ್ರದಲ್ಲಿ ಶೇ.83.60, ಹಿರೇಕೆರೂರ ಕ್ಷೇತ್ರದಲ್ಲಿ ಶೇ.84.87 ಹಾಗೂ ರಾಣೇಬೆನ್ನೂರ ಕ್ಷೇತ್ರದಲ್ಲಿ ಶೇ.80.58ರಷ್ಟು ಮತದಾನವಾಗಿದೆ. ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳ ಪೈಕಿ ಹಿರೇಕೆರೂರ ಕ್ಷೇತ್ರದಲ್ಲಿ ಹೆಚ್ಚು (ಶೇ.84.87) ಮತದಾನವಾಗಿದ್ದು, ಹಾವೇರಿ ಕ್ಷೇತ್ರದಲ್ಲಿ ಅತ್ಯಂತ ಕಡಿಮೆ (ಶೇ.77.11) ಮತದಾನ ದಾಖಲಾಗಿದೆ.
10,61,653 ಜನರಿಂದ ಮತದಾನ
ಜಿಲ್ಲೆಯ 6,65,617 ಪುರುಷರು, 6,37,019 ಮಹಿಳೆಯರು ಹಾಗೂ 47 ಇತರೆ ಒಳಗೊಂಡಂತೆ 13,02,683 ಮತದಾರರಿದ್ದಾರೆ. ಈ ಪೈಕಿ 5,52,701 ಪುರುಷರು, 5,08,954 ಮಹಿಳೆಯರು ಹಾಗೂ ಇತರೆ 18 ಜನರು ಒಳಗೊಂಡಂತೆ ಒಟ್ಟು 10,61,673 ಮತದಾರರು ಮತ ಚಲಾಯಿಸಿದ್ದಾರೆ.
ಹಾನಗಲ್ಲ ಕ್ಷೇತ್ರದಲ್ಲಿ 92,807 ಪುರುಷರು, 85,140 ಮಹಿಳೆಯರು ಹಾಗೂ ಇತರೆ ಓರ್ವ ವ್ಯಕ್ತಿ ಸೇರಿ 1,77,948 ಜನರು ಮತ ಚಲಾಯಿಸಿದ್ದಾರೆ. ಶಿಗ್ಗಾಂವಿ ಕ್ಷೇತ್ರದಲ್ಲಿ 95,511 ಪುರುಷರು, 85,202 ಮಹಿಳೆಯರು ಹಾಗೂ ಇತರೆ 4 ಸೇರಿ 1,80,717 ಮತದಾರರು, ಹಾವೇರಿ ಕ್ಷೇತ್ರದಲ್ಲಿ 93,928 ಪುರುಷರು, 85,800 ಮಹಿಳೆಯರು ಹಾಗೂ ಇತರೆ 6 ಸೇರಿ 1,79,734 ಮತದಾರರು, ಬ್ಯಾಡಗಿ ಕ್ಷೇತ್ರದಲ್ಲಿ 90,226 ಪುರುಷರು, 84,280 ಮಹಿಳೆಯರು ಹಾಗೂ 3 ಸೇರಿ 1,74,509 ಮತದಾರರು, ಹಿರೇಕೆರೂರ ಕ್ಷೇತ್ರದಲ್ಲಿ 81,671 ಪುರುಷರು ಹಾಗೂ 76,085 ಮಹಿಳೆಯರು ಒಳಗೊಂಡಂತೆ 1,57,756 ಮತದಾರರು ಹಾಗೂ ರಾಣೇಬೆನ್ನೂರ ಕ್ಷೇತ್ರದಲ್ಲಿ 98,558 ಪುರುಷರು, 92,447 ಮಹಿಳೆಯರು ಹಾಗೂ ಇತರೆ 4 ಸೇರಿ 1,91,009 ಜನ ಮತ ಚಲಾಯಿಸಿದ್ದಾರೆ.
ಜಿಲ್ಲೆಯಲ್ಲಿ ಶೇ.81.50ರಷ್ಟು ಮತದಾನ
You Might Also Like
ಖಾಲಿ ಹೊಟ್ಟೆಯಲ್ಲಿ ಕರಿಬೇವು ತಿನ್ನುವುದರಿಂದಾಗುವ ಉಪಯೋಗವೇನು?: ನಿಮಗಾಗಿ ಹೆಲ್ತಿ ಮಾಹಿತಿ | Health Tips
ಅನೇಕ ಆಹಾರಗಳಲ್ಲಿ ಕರಿಬೇವಿನ ಎಲೆಗಳನ್ನು ಬಳಸುವುದು ಗೊತ್ತೆ ಇದೆ. ಕರಿಬೇವಿನ ಎಲೆಯನ್ನು ಬಳಸುವುದರಿಂದ ಚಟ್ನಿ ಅಥವಾ…
ಕಪ್ಪು ಅರಿಶಿನದ ಬಗ್ಗೆ ನಿಮಗೆಷ್ಟು ಗೊತ್ತು?; ಇದರಿಂದಾಗುವ ಆರೋಗ್ಯ ಪ್ರಯೋಜನಗಳಿವು | Health Tips
ನಮ್ಮ ಅಡುಗೆ ಮನೆಯಲ್ಲಿ ಹಳದಿ ಅರಿಶಿನ ಬಳಸುವುದನ್ನು ನೋಡಿರುತ್ತೇವೆ. ಶಕ್ತಿಯುತ ಔಷಧಗಳಲ್ಲಿ ಒಂದಾಗಿರುವ ಅರಿಶಿನವು ಆಯುರ್ವೇದ…
ಬಳಸಿದ ಅಡುಗೆ ಎಣ್ಣೆಯನ್ನು ಪದೇ ಪದೇ ಬಳಸುತ್ತೀರಾ? ಅದು ಎಷ್ಟು ಅಪಾಯಕಾರಿ ಗೊತ್ತಾ? Cooking Oil
Cooking Oil: ಪ್ರಸ್ತುತ ತೈಲ ಬೆಲೆಗಳು ಗಗನಕ್ಕೇರಿರುವುದರಿಂದ, ತೈಲವನ್ನು ಮರುಬಳಕೆ ಮಾಡುವುದು ಸಾಮಾನ್ಯವಾಗಿದೆ. ಈಗಾಗಲೇ ಬಳಸಿರುವ…