More

  ಟಿಬಿ ಕಾಯಿಲೆ ಬಗ್ಗೆ ಹಿಂಜರಿಕೆ ಸಲ್ಲದು; ಡಾ.ನಿಲೇಶ

  ಹಾವೇರಿ: ಟಿಬಿ ಕಾಯಿಲೆ ಬಗ್ಗೆ ಜನರಲ್ಲಿ ತುಂಬಾ ಕೀಳರಿಮೆ ಇದೆ. ಬಿಪಿ, ಶುಗರ್ ಇದ್ದರೆ ತಕ್ಷಣ ವೈದ್ಯರ ಬಳಿ ಹೋಗಿ ಚಿಕಿತ್ಸೆ ಪಡೆಯುತ್ತಾರೆ. ಆದರೆ, ಟಿಬಿ ಕಾಯಿಲೆಯ ಲಕ್ಷಣಗಳಾದ ಕೆಮ್ಮು, ಕಫ ಇದ್ದರೆ ಹಿಂಜರಿಯುತ್ತಾರೆ. ಇದರಿಂದ ಹಲವರು ಭವಿಷ್ಯದಲ್ಲಿ ಸಂಕಷ್ಟ ಅನುಭವಿಸುತ್ತಾರೆ. ಹಾಗಾಗಿ ಈ ಕಾಯಿಲೆ ಬಗ್ಗೆ ಹಿಂಜರಿಕೆ ಸಲ್ಲದು ಎಂದು ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ. ನಿಲೇಶ ಹೇಳಿದರು.
  ತಾಲೂಕಿನ ಕರ್ಜಗಿ ಗ್ರಾಮದ ಮುರಾರ್ಜಿ ದೇಸಾಯಿ ವಸತಿ ಕಾಲೇಜಿನಲ್ಲಿ ಗುರುವಾರ ಗ್ರಾಮೀಣಾಭಿವೃದ್ಧಿ ಪಂಚಾಯತ ರಾಜ್ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಹಾಗೂ ಕರ್ನಾಟಕ ಹೆಲ್ತ್ ಪ್ರಮೋಷನ್ ಟ್ರಸ್ಟ್, ಗ್ರಾಮ ಆರೋಗ್ಯ ಅಭಿಯಾನದಿಂದ ಜಂಟಿಯಾಗಿ ಆಯೋಜಿಸಿದ್ದ ಕ್ಷಯ ರೋಗದ ಜಾಗೃತಿ ಆಂದೋಲನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
  ದೇಶದ ಹಲವು ಜನ ಟಿಬಿ ಕಾಯಿಲೆಗೆ ತುತ್ತಾಗುತ್ತಿದ್ದಾರೆ. ರೋಗ ನಿರೋಧಕ ಶಕ್ತಿ ಇರುವವರಿಗೆ ಅದು ಕಾಣಿಸುವುದಿಲ್ಲ. ಬಿಪಿ, ಶುಗರ್ ಬಂದರೆ ಜೀವನಪೂರ್ತಿ ಚಿಕಿತ್ಸೆ ತೆಗೆದುಕೊಳ್ಳಬೇಕು. ಆದರೆ, ಟಿಬಿ ಕಾಯಿಲೆ ಕೇವಲ ಆರು ತಿಂಗಳಲ್ಲಿ ವಾಸಿ ಆಗುತ್ತದೆ. ಹಾಗಾಗಿ, ಈ ಲಕ್ಷಣ ಇದ್ದವರು ಕೂಡಲೇ ತಪಾಸಣೆ ನಡೆಸಿ, ಚಿಕಿತ್ಸೆ ಪಡೆಯಬೇಕು. ಈ ಮೂಲಕ ಕ್ಷಯಮುಕ್ತ ಭಾರತಕ್ಕಾಗಿ ಮುಂದಾಗಬೇಕು ಎಂದು ಮನವಿ ಮಾಡಿದರು.
  2018ರಲ್ಲಿ ಪ್ರಧಾನ ಮಂತ್ರಿಗಳು 2025ಕ್ಕೆ ಕ್ಷಯಮುಕ್ತ ಭಾರತ ಮಾಡಬೇಕೆಂದು ಘೋಷಿಸಿದ್ದರು. ಅದರ ಭಾಗವಾಗಿ ಸಕ್ರಿಯ ಕ್ಷಯಮುಕ್ತ ಆಂದೋಲನ ಸಮೀಕ್ಷೆ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮನೆ ಮನೆಗಳಲ್ಲಿ ಈ ಸಮೀಕ್ಷೆ ನಡೆಯುತ್ತಿದೆ. ವಿದ್ಯಾರ್ಥಿಗಳೆಲ್ಲರೂ ನಿಮ್ಮ ಪಾಲಕರಿಗೆ ಪತ್ರ ಬರೆಯುವುದರ ಮೂಲಕ ಕ್ಷಯರೋಗ ಕಫ ಪರೀಕ್ಷೆಗೆ ಮುಂದಾಗಲು ಕರೆ ನೀಡಿ ಎಂದು ಕರೆ ನೀಡಿದರು.
  ತಾಲೂಕು ಆರೋಗ್ಯಾಧಿಕಾರಿ ಡಾ.ಪ್ರಭಾಕರ ಕುಂದೂರ ಮಾತನಾಡಿ, ಟಿ.ಬಿ ಕಾಯಿಲೆ ಇದ್ದವರಿಗೆ ಪೌಷ್ಟಿಕ ಆಹಾರ ತೆಗೆದುಕೊಳ್ಳಲು ಸರ್ಕಾರ ಪ್ರತಿ ತಿಂಗಳು 500 ರೂ. ಧನ ಸಹಾಯ ನೀಡುತ್ತದೆ. ಉಚಿತ ಚಿಕಿತ್ಸೆ ನೀಡಿ 6 ತಿಂಗಳಲ್ಲಿ ವಾಸಿ ಆಗುವಂತೆ ನೋಡಿಕೊಳ್ಳಲಾಗುತ್ತದೆ. ಇದರ ಬಗ್ಗೆ ಅಸಡ್ಡೆ ತೋರಬಾರದು ಎಂದು ಎಚ್ಚರಿಸಿದರು.
  ತಾಪಂ ಸಹಾಯಕ ನಿರ್ದೇಶಕ ಪ್ರದೀಪ ಗಣೆಶ್ಕರ, ಜಿಪಾ ಜಿಲ್ಲಾ ಕೋ ಆರ್ಡಿನೇಟರ್ ಕವಿತಾ ಕೋರಿ ಮಾತನಾಡಿದರು. ಜಿಪಾ ತಾಲೂಕು ಸಂಚಾಲಕಿ ರೇಣುಕಾ ಕಹಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾವೇರಿ ಲಮಾಣಿ ಜಾಗೃತಿ ಗೀತೆ ಹಾಡಿದರು.
  ಪ್ರಾಶುಂಪಾಲ ಎನ್.ಎಂ. ಮೇಟಿ ಅಧ್ಯಕ್ಷತೆ ವಹಿಸಿದ್ದರು. ಪಿಡಿಒ ಲೋಕೇಶ ಪಠಾಣ, ಆರೋಗ್ಯ ನೀರಿಕ್ಷಣಾ ಅಧಿಕಾರಿ ಸುಚೇತಾ ತೋರಬಾನಿ, ಆಶಾ ಕಾರ್ಯಕರ್ತೆಯರಾದ ಶೈಲಾ ಬಾಟಿ, ಮಂಜುಳಾ ಮಾದರ, ಸುಕನ್ಯಾ ಗಂಜಿಕಟ್ಟಿ, ಶುಶ್ರೂಶಕಿ ಮಾದೇವಿ ಉಪಸ್ಥಿತರಿದ್ದರು. ವರ್ಷಾ ಕೋಟಿ ಸ್ವಾಗತಿಸಿ, ನಿರೂಪಿಸಿದರು. ನೇಹಾ ಮೈಲಾರ ವಂದಿಸಿದರು.

  See also  ಆಯುಷ್ ಆಸ್ಪತ್ರೆಗಳಲ್ಲಿ 20,48,313 ಓಪಿಡಿಯಲ್ಲಿ ಚಿಕಿತ್ಸೆ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts