ಹಾವೇರಿ: ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಜಿಲ್ಲೆಯ ಸಾಧಕರನ್ನು ಹಾಗೂ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಸೇರಿ 18 ಜನರನ್ನು ಜ.26ರಂದು ಜಿಲ್ಲಾಡಳಿತದಿಂದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಸನ್ಮಾನಿಸಲಾಗುತ್ತಿದೆ.
ವೈದ್ಯಕೀಯ ಕ್ಷೇತ್ರದಿಂದ ಸಾವಿತ್ರಿ ಪಟಗಾರ, ಕ್ರೀಡಾ ಕ್ಷೇತ್ರದಿಂದ ಬ್ಯಾಡಗಿ ತಾಲೂಕು ಮುತ್ತೂರಿನ ಲಕ್ಷ್ಮೀ ಶಿಂಗ್ರಿ, ವಿಶೇಷ ಕ್ಷೇತ್ರದಿಂದ ಮಾರನಬೀಡ ದೈಹಿಕ ಶಿಕ್ಷಕ ಆನಂದ ಗ್ವಾಡಿಹಾಳ, ಜೇಕಿನಕಟ್ಟಿಯ ಕು.ಅನುಷಾ ಹಿರೇಮಠ, ಶಿಕ್ಷಣ ಕ್ಷೇತ್ರದಿಂದ ಹಾವೇರಿಯ ಗೋವಿಂದರಾಜ ಕಡಕೋಳ, ಶೌರ್ಯ ಕ್ಷೇತ್ರದಿಂದ ಕರ್ಜಗಿಯ ಸಿದ್ದಲಿಂಗಸ್ವಾಮಿ ಚರಂತಿಮಠ, ಸಂಕೀರ್ಣ ಕ್ಷೇತ್ರದಿಂದ ಹಾವೇರಿಯ ಪೃಥ್ವಿರಾಜ ಬೆಟಗೇರಿ, ಪರಿಸರ ಕ್ಷೇತ್ರದಿಂದ ಹಾವೇರಿಯ ಜುಬೇದಾ ನಾಯಕ ಅವರನ್ನು ಸನ್ಮಾನಕ್ಕೆ ಆಯ್ಕೆ ಮಾಡಲಾಗಿದೆ.
ಸಮಾಜ ಸೇವೆ ಕ್ಷೇತ್ರದಿಂದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಪರಿವೀಕ್ಷಣಾಧಿಕಾರಿ ಮುನಿಶ್ವರ ಎಚ್.ಚೂರಿ, ಹಾಗೂ ಕನಕಾಪೂರದ ಫಕ್ಕೀರಗೌಡ ಗಾಜಿಗೌಡ್ರ, ರೈತ ಧ್ವನಿಯ ಬಂಕಾಪುರದ ಬಸವರಾಜ ಕುರಗೋಡಿ, ವಿಜ್ಞಾನ ಕ್ಷೇತ್ರದಿಂದ ರೇಣುಕಾ ಗುಡಿಮನಿ, ಸಂಘ-ಸಂಸ್ಥೆಯಿಂದ ಮಕರಂದ ಸ್ವರ ಸಂಗೀತ ಕಾಲ ಸಂಸ್ಥೆ ಅಧ್ಯಕ್ಷೆ ರಾಜೇಶ್ವರಿ ಬಿಷ್ಟನಗೌಡ್ರ, ಪತ್ರಿಕೋದ್ಯಮದಿಂದ ಪತ್ರಕರ್ತರಾದ ತೇಜಶ್ವಿನಿ ಕಾಶೆಟ್ಟಿ ಹಾಗೂ ಪ್ರಶಾಂತ ಮರಿಯಮ್ಮನವರ, ಕನ್ನಡಪರ ಸಂಘಟನೆಯಿಂದ ಜಯ ಕರ್ನಾಟಕ ಸಂಘಟನೆ ಜಿಲ್ಲಾಧ್ಯಕ್ಷ ಸುಭಾಷ ಬೆಂಗಳೂರು, ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಗಿರೀಶ ಬಾರ್ಕಿ ಹಾಗೂ ಕಾರ್ಯನಿರ್ವಾಹಕ ಅಭಿಯಂತರ ಮಲ್ಲೇಶಪ್ಪ ಮೆಡ್ಲೇರಿ ಅವರನ್ನು ಸನ್ಮಾನಕ್ಕೆ ಆಯ್ಕೆ ಮಾಡಲಾಗಿದೆ ಎಂದು ಜಿಲ್ಲಾಡಳಿತ ಪ್ರಕಟಣೆ ತಿಳಿಸಿದೆ.