More

  ದೇವಸ್ಥಾನದ ಹುಂಡಿ ಹಣ ಕಳವು

  ರಾಣೆಬೆನ್ನೂರ: ತಾಲೂಕಿನ ಮುದೇನೂರ ಗ್ರಾಮದ ಮಾರುತಿ ದೇವಸ್ಥಾನದ ಹುಂಡಿಯನ್ನು ಎತ್ತಿಕೊಂಡು ಹೋದ ಕಳ್ಳರು ಅದರಲ್ಲಿದ್ದ ಸಾವಿರಾರು ರೂ. ಕದ್ದು ಪರಾರಿಯಾಗಿದ್ದಾರೆ.
  ಶುಕ್ರವಾರ ತಡರಾತ್ರಿ ಕಳ್ಳರು ದೇವಸ್ಥಾನಕ್ಕೆ ನುಗ್ಗಿ ಹುಂಡಿ ಹೊತ್ತೊಯ್ದಿದ್ದಾರೆ. ಅದರ ಕೀಲಿ ಮುರಿದು ಅದರಲ್ಲಿದ್ದ ಸಾವಿರಾರು ರೂ. ತೆಗೆದುಕೊಂಡು, ಹುಂಡಿಯನ್ನು ದೇವಸ್ಥಾನದ ಪಕ್ಕದಲ್ಲಿ ಎಸೆದು ಹೋಗಿದ್ದಾರೆ. ಸ್ಥಳಕ್ಕೆ ಹಲಗೇರಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು, ಪ್ರಕರಣ ದಾಖಲಿಸುವುದು ಬಾಕಿ ಇದೆ.
  ರಟ್ಟಿಹಳ್ಳಿಯಲ್ಲೂ ನಡೆದಿತ್ತು
  ಕಳೆದ ತಿಂಗಳು ರಟ್ಟಿಹಳ್ಳಿಯ ದೇವಸ್ಥಾನವೊಂದರಲ್ಲಿ ಹುಂಡಿ ಹಣ ಕಳವಾಗಿತ್ತು. ಆ ಪ್ರಕರಣ ಮಾಸುವ ಮುನ್ನವೇ ಜಿಲ್ಲೆಯಲ್ಲಿ ಮತ್ತೊಂದು ದೇಗುಲದ ಹುಂಡಿ ಹಣ ಕಳವು ಪ್ರಕರಣ ವರದಿಯಾಗಿದೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts