ನಾಗರಹಾವಿಗೆ ಯಶಸ್ವಿ ಶಸ್ತ್ರಚಿಕಿತ್ಸೆ; ನಾಗಪ್ಪನಿಗೆ ಪಂಚಮಿ ಉಡುಗೊರೆ; ಡಾ.ಸಣ್ಣಬೀರಪ್ಪ, ಸ್ನೇಕ್ ನಾಗರಾಜ ಕಾರ್ಯಕ್ಕೆ ಜನ ಮೆಚ್ಚುಗೆ

ವಿಜಯವಾಣಿ ವಿಶೇಷ ಹಾವೇರಿ
ಹಳೆಯ ಕಟ್ಟಡ ತೆರವುಗೊಳಿಸುವ ಸಂದರ್ಭದಲ್ಲಿ ಗಂಭೀರವಾಗಿ ಗಾಯಗೊಂಡು ನರಳಾಡುತ್ತಿದ್ದ ನಾಗರಹಾವಿಗೆ ಇಲ್ಲಿನ ಪಾಲಿಕ್ಲಿನಿಕ್‌ನ ಪಶುವೈದ್ಯರು ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಈ ಮೂಲಕ ನಾಗರಪಂಚಮಿ ಸಂದರ್ಭದಲ್ಲಿ ಉರಗ ರಕ್ಷಕ ಹಾಗೂ ಪಶುವೈದ್ಯರು ನಾಗರಹಾವಿಗೆ ಪಂಚಮಿ ಉಡುಗೊರೆ ಕೊಟ್ಟಿದ್ದಾರೆ.
ನಗರದ ಕನಕಾಪುರ ರಸ್ತೆಯ ರಾಜಸ್ತಾನ ಡಾಬಾ ಹಳೆಯ ಕಟ್ಟಡವನ್ನು ಕಾರ್ಮಿಕರು ತೆರವುಗೊಳಿಸುತ್ತಿದ್ದಾಗ ಅವಶೇಷಗಳಡಿಯಲ್ಲಿ ಸಿಲುಕಿ ನಾಗರಹಾವೊಂದು ರಕ್ತಸಿಕ್ತವಾಗಿ ಒದ್ದಾಡುತ್ತಿತ್ತು. ಇದನ್ನು ಗಮನಿಸಿದ ಡಾಬಾದವರು ಸ್ನೇಕ್ ನಾಗರಾಗ ಭೈರಣ್ಣನವರಗೆ ವಿಷಯ ತಿಳಿಸಿದ್ದರು. ವಿಷಯ ತಿಳಿದ ಕೂಡಲೇ ನಾಗರಾಜ ಅವರು ಸ್ಥಳಕ್ಕೆ ಧಾವಿಸಿ ಹಾವು ರಕ್ಷಿಸಿ, ಚೀಲದೊಳಗೆ ಹಾಕಿಕೊಂಡು ನಗರದ ಪಾಲಿಕ್ಲಿನಿಕ್‌ಗೆ ತೆಗೆದುಕೊಂಡು ಹೋಗಿದ್ದರು.
ಪಾಲಿಕ್ಲಿನಿಕ್‌ನ ಮುಖ್ಯ ಪಶುವೈದ್ಯಾಧಿಕಾರಿ ಡಾ.ಸಣ್ಣಭೀರಪ್ಪ ಎಸ್.ಸಣ್ಣಪುಟ್ಟಕ್ಕನವರ ಹಾವನ್ನು ತಪಾಸಣೆ ಮಾಡಿ ಶಸ್ತ್ರಚಿಕಿತ್ಸೆಗೆ ಸಿದ್ಧತೆ ಮಾಡಿಕೊಂಡಿದ್ದಾರೆ. ಸ್ನೇಕ್ ನಾಗರಾಜ ಹಾವನ್ನು ಹಿಡಿದುಕೊಂಡಿದ್ದರು. ವೈದ್ಯರು ಹಾವಿಗೆ ಅನಸ್ತೇಶಿಯಾ ಇಂಜೆಕ್ಷನ್ ಕೊಟ್ಟು ಪ್ರಜ್ಞೆ ತಪ್ಪಿಸಿ, ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡಿದ್ದಾರೆ.
ಬಳಿಕ ಸ್ನೇಕ್ ನಾಗರಾಜ ತಮ್ಮ ಶಿವಲಿಂಗ ನಗರದ ನಿವಾಸದಲ್ಲಿ ಐದು ದಿನ ಹಾವಿಗೆ ಆರೈಕೆ ಮಾಡಿದ್ದಾರೆ. ಹಾವು ಗುಣಮುಖ ಹೊಂದಿದ್ದು ಖಚಿತವಾದ ಬಳಿಕ ಕರ್ಜಗಿ ಅರಣ್ಯ ಪ್ರದೇಶದಲ್ಲಿ ಹಾವು ಬಿಟ್ಟು ಬಂದಿದ್ದಾರೆ.
ಈ ಹಿಂದೆ ಒಂದು ರ‌್ಯಾಟ್ ಸ್ನೇಕ್, ಎರಡು ನಾಗರಹಾವುಗಳಿಗೂ ಶಸ್ತ್ರಚಿಕಿತ್ಸೆ ಮಾಡಿಸಿದ್ದೆ. ಜೆಸಿಬಿ ಕೆಲಸದ ವೇಳೆ ತಲೆಗೆ ಗಂಭಿರವಾಗಿ ಗಾಯ ಆಗಿದ್ದರಿಂದ ಅವು ಬದುಕಲಿಲ್ಲ. ೀ ಬಾರಿ ನಾಗರಾಹವು ಬದುಕಿದ್ದು ಸಂತಸ ನೀಡಿದೆ ಎನ್ನುತ್ತಾರೆ ನಾಗರಾಜ.
ಐದು ದಿನ ಆರೈಕೆ
ಹಾವು ಗಂಭೀರವಾಗಿ ಗಾಯಗೊಂಡಿತ್ತು. ಹಾಗಾಗಿ, ಗಾಯ ಹೆಚ್ಚಾಗದಂತೆ, ಅದು ಗಾಬರಿಯಾಗದಂತೆ ಸೂಕ್ಷ್ಮವಾಗಿ ಹಿಡಿದು ಪಾಲಿಕ್ಲಿನಿಕ್‌ಗೆ ಕರೆತರಲಾಯಿತು. ಡಾ.ಸಣ್ಣಬೀರಪ್ಪ ಸರ್ ಬಹಳ ಕಾಳಜಿಯಿಂದ ಹಾವಿಗೆ ಶಸ್ತ್ರಚಿಕಿತ್ಸೆ ನಡೆಸಿದರು. ಐದು ದಿನ ಆರೈಕೆ ಮಾಡಿ ಕರ್ಜಗಿ ಕಾಡಿಗೆ ಬಿಟ್ಟು ಬಂದಿದ್ದೇನೆ ಎನ್ನುತ್ತಾರೆ ಸ್ನೇಕ್ ನಾಗರಾಜ.

  • ಕೋಟ್:
    ಹಾವಿನ ಹೊಟ್ಟೆಯ ಭಾಗದಲ್ಲಿ ಸುಮಾರು ಎಂಟು ಇಂಚು ಗಾಯವಾಗಿತ್ತು. 17 ಸ್ಟಿಚ್‌ನೊಂದಿಗೆ ಶಸ್ತ್ರಚಿಕಿತ್ಸೆ ಮಾಡಿದ್ದು, ಹಾವು ಆರೋಗ್ಯದಿಂದ ಇದೆ. ಈ ಹಿಂದೆಯೂ ಇಂತಹ ನಾಲ್ಕೈದು ಆಪರೇಶನ್ ಮಾಡಿದ್ದೆ.
    > ಡಾ.ಸಣ್ಣಬೀರಪ್ಪ ಎಸ್. ಸಣ್ಣಪುಟ್ಟಕ್ಕನವರ, ಮುಖ್ಯ ಪಶು ವೈದ್ಯಾಧಿಕಾರಿ, ಪಾಲಿಕ್ಲಿನಿಕ್, ಹಾವೇರಿ
Share This Article

ತೂಕ ಇಳಿಸಿಕೊಳ್ಳಬೇಕಾ? ಸುಮ್ಮನೆ ಈ ಹಣ್ಣು, ಸೊಪ್ಪಿನ ವಾಸನೆಯನ್ನು ಒಮ್ಮೆ ಉಸಿರಾಡಿದ್ರೆ ಸಾಕು

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…

ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಎಳನೀರು ಕುಡಿದು ನೋಡಿ; ಆರೋಗ್ಯ ಸಮಸ್ಯೆಗೆ ಸಿಗುತ್ತೆ ಪರಿಹಾರ …

 ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…

ಬಿಕ್ಕಳಿಕೆ ಏಕೆ ಬರುತ್ತದೆ? ಕಿರಿಕಿರಿ ಉಂಟುಮಾಡುವ ಅದನ್ನು ನಿಯಂತ್ರಿಸುವುದು ಹೇಗೆ?

 ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…