ಹಾವೇರಿ: ಅಸಿ ಎಂದರೆ ದೇಶ ಕಾಯುವ ಸೈನಿಕ, ಮಸಿ ಎಂದರೆ ಪತ್ರಿಕಾ ರಂಗ, ಅದು ದೇಶದಲ್ಲಿ ನಡೆಯುವ ಘಟನೆಗಳನ್ನು ವರದಿ ಮಾಡುತ್ತದೆ. ಕೃಷಿ ಪ್ರತಿಯೊಂದು ಜೀವಿಗೂ ಅನ್ನ, ಆಹಾರ ಪೂರೈಸುತ್ತದೆ. ಹಾಗಾಗಿ ಈ ಮೂರು ಕ್ಷೇತ್ರಗಳು ಸಮಾಜದ ಅಭಿವೃದ್ದಿಗಾಗಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಕರಜಗಿ ಗೌರಿಮಠದ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ನಗರದ ಶ್ರೀ ಮಲ್ಲಿಕಾರ್ಜುನ ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ಸಂಭ್ರಮ -2024&-25ರ ವಿಜ್ಞಾನ ವಸ್ತು ಪ್ರದರ್ಶನ ಉದ್ಘಾಟನಾ ಸಮಾರಂಭದಲ್ಲಿ ಪತ್ರಕರ್ತರು, ಮಾಧ್ಯಮ ಮಿತ್ರರು ಹಾಗೂ ವೈದ್ಯರನ್ನು ಸನ್ಮಾನಿಸಿ ಅವರು ಮಾತನಾಡಿದರು.
ಪತ್ರಿಕಾ ಮಾಧ್ಯಮ ಸಮಾಜದ ಅಂಕು -ಡೊಂಕು ತಿದ್ದುವುದರ ಜೊತೆಗೆ ಆರೋಗ್ಯರ್ಪೂಣ ಸಮಾಜ ನಿಮಿರ್ಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಪತ್ರಕರ್ತನ ಲೇಖನಿ ಖಡ್ಗಕ್ಕಿಂತ ಹರಿತವಾಗಿರುತ್ತದೆ. ಅದೆ ರೀತಿ ವೈದ್ಯರು ಜನರ ಅರೋಗ್ಯ ಕಾಪಾಡುತ್ತಾರೆ. ವೇದವು “ವೈದ್ಯೋ ನಾರಾಯಣೋ ಹರಿ” ಎಂದು ಕರೆದಿದೆ. ಇಂದಿನ ಆಧುನಿಕ ಯುಗದಲ್ಲಿ ಸಂಸ್ಕಾರ, ಸಂಸತಿ, ಮೌಲ್ಯ ಕಡಿಮೆಯಾಗುತ್ತಿದೆ. ಗುಣಾತ್ಮಕ ಶಿಕ್ಷಣ ಕೊಡುವ ಮೂಲಕ ಸುಂದರ ಸಮಾಜ ನಿಮಿರ್ಸಲು ಮುಂದಾಗಬೇಕು ಎಂದರು.
ಹಿರಿಯ ಸಾಹಿತಿ, ಪತ್ರಕರ್ತ ಮಹಾಂತೇಶ ಅಂಗೂರ ಮಾತನಾಡಿ, ವಿಜ್ಞಾನ ವಸ್ತು ಪ್ರದರ್ಶನ ಮಕ್ಕಳ ವೈಜ್ಞಾನಿಕ ಮನೋಭಾವನೆ ಹೆಚ್ಚಿಸುತ್ತದೆ ಎಂದರು.
ಡಾ. ಸಂಗಮೇಶ ದೊಡ್ಡಗೌಡ್ರ ಮಾತನಾಡಿ, ಶ್ರೀಗಳು ಸುಂದವಾದ ಕಟ್ಟಡದ ಜೊತೆ ಉತ್ತಮ ಶಿಕ್ಷಣ ನೀಡುತ್ತಿದ್ದಾರೆ. ಮಕ್ಕಳು ಅದ್ಬುತವಾಗಿ ಮಾಡಿದ ಇಂದಿನ ವಿಜ್ಞಾನ ವಸ್ತು ಪ್ರದರ್ಶನ ನೋಡಿ ತುಂಬಾ ಸಂತಸವಾಗಿದೆ ಎಂದರು.
ಶಾಲೆಯ ಮುಖ್ಯಶಿಕ್ಷಕ ಶಂಕರ ಅಕ್ಕಸಾಲಿ ಅಧ್ಯಕ್ಷತೆ ವಹಿಸಿದ್ದರು.
ಹಿರಿಯ ಪತ್ರಕರ್ತರಾದ ನಿಂಗಪ್ಪ ಚಾವಡಿ, ನಾಗರಾಜ ಕುರುವತ್ತೆರ, ಕೇಶವಮೂತಿರ್ ವಿ.ಬಿ., ನಾರಾಯಣ ಹೆಗಡೆ, ವಿರೇಶ ಮಡ್ಲೂರ, ನಿಂಗಪ್ಪ ಅರೇರ, ಗುರುದತ್ತ ಭಟ್, ಮಂಜುನಾಥ ದಾಸಣ್ಣನವರ, ಫಕ್ಕಿರಸ್ವಾಮಿ ಮಟ್ಟೆಣ್ಣನವರ, ಜಿ.ಎಸ್. ನದಾಫ್, ಶಿವಕುಮಾರ ಹುಬ್ಬಳ್ಳಿ, ಫಕ್ಕೀರಯ್ಯ ಗಣಾಚಾರಿ, ಅಣ್ಣಪ್ಪ ಬಾಕಿರ್, ಬಾಪು ನಂದಿಹಳ್ಳಿ, ಮಾರುತಿ ಬಿ.ಎಂ., ಶಂಕರ ಕೊಪ್ಪದ ಮತ್ತಿತರರು ಇದ್ದರು.
ಮೂರು ಕ್ಷೇತ್ರಗಳು ಅಭಿವೃದ್ಧಿಗಾಗಿ ಪ್ರಮುಖ ಪಾತ್ರವಹಿಸುತ್ತವೆ; ಶಿವಯೋಗಿ ಸ್ವಾಮೀಜಿ

You Might Also Like
ಈ ನಾಲ್ವರೊಂದಿಗೆ ನೀವು ಎಂದಿಗೂ ಜಗಳವಾಡಬೇಡಿ; ಅದರಿಂದ ನಿಮಗೆ ಹಾನಿ | Chanakya Niti
ಆಚಾರ್ಯ ಚಾಣಕ್ಯ ತನ್ನ ಒಂದು ನೀತಿಯ ಮೂಲಕ ಮಾನವನಿಗೆ ತನ್ನ ಜೀವನವನ್ನು ನಡೆಸುವ ಮಾರ್ಗವನ್ನು ಹೇಳಿದ್ದಾರೆ.…
ಬೊಜ್ಜು ಕರಗಿಸಿ ಫಿಟ್ ಆಗಿರಲು ಈ ತರಕಾರಿಗಳೇ ಸಾಕು; ನಿಮಗಾಗಿ ಹೆಲ್ತಿ ಮಾಹಿತಿ | Health Tips
ಇಂದಿನ ಕಾರ್ಯನಿರತ ಜೀವನದಲ್ಲಿ ತೂಕ ಹೆಚ್ಚಾಗುವುದು ತುಂಬಾ ಸಾಮಾನ್ಯ ಸಮಸ್ಯೆಯಾಗಿದೆ. ಅನೇಕರು ಹೆಚ್ಚಿದ ತೂಕದ ಬಗ್ಗೆ…
ಡಯಟ್ ಸೋಡಾ ಕುಡಿಯಲು ಇಷ್ಟಪಡುತ್ತೀರಾ?; ಹಾಗಾದ್ರೆ ನೀವು ತಿಳಿದುಕೊಳ್ಳಲೇಬೇಕಾದ ಮಾಹಿತಿ ಇದು.. | Health Tips
ನಮ್ಮ ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸುವ ಜನರು ಸಾಮಾನ್ಯ ಸೋಡಾಕ್ಕಿಂತ ಡಯಟ್ ಸೋಡಾ ಕುಡಿಯಲು…