More

    ಅಂಗನವಾಡಿ ಸಿಬ್ಬಂದಿ ಕಾರ್ಯ ಶ್ಲಾಘನೀಯ; ಶಾಸಕ ರುದ್ರಪ್ಪ ಲಮಾಣಿ

    ಹಾವೇರಿ: ಮಕ್ಕಳಲ್ಲಿ ಪೌಷ್ಟಿಕಾಂಶ ಹೆಚ್ಚಿಸಲು ಮತ್ತು ಶಿಶು ಮರಣ ಸಂಖ್ಯೆ ನಿಯಂತ್ರಿಸಲು ಅಂಗನವಾಡಿ ಕಾರ್ಯಕರ್ತರ ಮತ್ತು ಮೇಲ್ವಿಚಾರಕರ ಸೇವೆ ಅಭಿನಂದನೀಯ ಎಂದು ಶಾಸಕ ರುದ್ರಪ್ಪ ಲಮಾಣಿ ಹೇಳಿದರು.
    ತಾಲೂಕಿನ ನೆಲೋಗಲ್ಲ ಗ್ರಾಮದಲ್ಲಿ ಬುಧವಾರ ನೂತನ ಅಂಗನವಾಡಿ ಕೇಂದ್ರ ಉದ್ಘಾಟಿಸಿ ಅವರು ಮಾತನಾಡಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಡಿಯಲ್ಲಿ ಅಂಗನವಾಡಿ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ. ಬಾಲ್ಯ ವಿವಾಹ ನಿಷೇಧ ಕಾಯ್ದೆ, ಶೈಕ್ಷಣಿಕ ಕಾಳಜಿ, ದೂರ ಪ್ರದೇಶದ ಮಕ್ಕಳಿಗೆ ಶಿಕ್ಷಣ ಒದಗಿಸುವುದು ಸೇರಿದಂತೆ ಹಲವು ಕಾರ್ಯಗಳನ್ನು ಅಂಗನವಾಡಿಗಳು ಮಾಡುತ್ತಿವೆ. ಅಂಗನವಾಡಿ ಸಿಬ್ಬಂದಿಗೆ ಗ್ರಾಮಸ್ಥರು ಸಹಕಾರ ನೀಡಬೇಕು ಎಂದರು.
    ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶೈಲಾ ಕುರಹಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಗ್ರಾಪಂ ಅಧ್ಯಕ್ಷೆ ಗೀತಾ ಲಮಾಣಿ ಅಧ್ಯಕ್ಷತೆ ವಹಿಸಿದ್ದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎಂ. ಮೈದೂರ, ಗ್ರಾಪಂ ಉಪಾಧ್ಯಕ್ಷ ಹೇಮನಗೌಡ ಹೊಟ್ಟೆಗೌಡ್ರ, ಗ್ರಾಪಂ ಸದಸ್ಯರಾದ ಶಾಂತಪ್ಪಶೆಟ್ರ ಅಟವಾಳಗಿ, ಕಲ್ಲಪ್ಪ ಬಡಿಗೇರ, ಚನ್ನವೀರಗೌಡ ಹೊಸಗೌಡ್ರ, ಗುದ್ಲೆಪ್ಪಶೆಟ್ರ ಕಾಳಪ್ಪನವರ, ಶಾರಕ್ಕ ಮಲ್ಲಾಡದ, ಸಾವಿತ್ರೆಮ್ಮ ಹಾವೇರಿ, ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ವನಜಾಕ್ಷಿ ಬಡಿಗೇರ, ವಲಯ ಮೇಲ್ವಿಚಾರಕಿ ಶಮ್ಸಾದ್ ಇಂಗಳಗಿ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts